Home ರಾಜಕೀಯ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ಗೆ ಸೋಲು; ಪೆರಂಬೂರಿನಿಂದ ನಟ ವಿಜಯ್‌ಗೆ ಗೆಲುವು

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ಗೆ ಸೋಲು; ಪೆರಂಬೂರಿನಿಂದ ನಟ ವಿಜಯ್‌ಗೆ ಗೆಲುವು

0

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಸೋಲನ್ನಪ್ಪಿದ್ದಾರೆ. ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಟಿವಿಕೆ (TVK) ಅಭ್ಯರ್ಥಿ ವಿ.ಎಸ್. ಬಾಬು ಅವರ ವಿರುದ್ಧ ಪರಾಜಯಗೊಂಡಿದ್ದಾರೆ. 1996ರ ನಂತರ ಎಂ.ಕೆ. ಸ್ಟಾಲಿನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇದೇ ವೇಳೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಪೆರಂಬೂರು ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನ ತಾಜಾ ಮಾಹಿತಿಯ ಪ್ರಕಾರ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮುನ್ನುಗ್ಗುತ್ತಿದೆ. ಪ್ರಸ್ತುತ ಟಿವಿಕೆ 108 ಸ್ಥಾನಗಳಲ್ಲಿ, ಡಿಎಂಕೆ 59 ಸ್ಥಾನಗಳಲ್ಲಿ ಮತ್ತು ಎಐಎಡಿಎಂಕೆ 44 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಮತ ಎಣಿಕೆ ಪ್ರಕ್ರಿಯೆಯು ಇನ್ನೂ ಮುಂದುವರಿಯುತ್ತಿದ್ದು, ಫಲಿತಾಂಶದ ಕುತೂಹಲ ಹೆಚ್ಚಿದೆ.

ವಿಶೇಷವಾಗಿ ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ಟಿವಿಕೆ ಪಕ್ಷವು ಅದ್ಭುತ ಪ್ರದರ್ಶನ ನೀಡಿದೆ. ದ್ರಾವಿಡ ಪಕ್ಷಗಳ ಭದ್ರಕೋಟೆಗಳಾಗಿದ್ದ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಟಿವಿಕೆ ವಿಜಯ ಪತಾಕೆ ಹಾರಿಸಿದೆ. ಅಷ್ಟೇ ಅಲ್ಲದೆ, ಮಧ್ಯ ತಮಿಳುನಾಡಿನ ತಿರುಚಿರಾಪಳ್ಳಿ, ತಂಜಾವೂರು, ಕರೂರ್, ಪೆರಂಬಲೂರು, ಅರಿಯಲೂರು, ನಾಗಪಟ್ಟಣಂ, ತಿರುವಾರೂರು, ಪುದುಕ್ಕೊಟ್ಟೈ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿಯೂ ಟಿವಿಕೆ ಪಕ್ಷವು ಅತ್ಯುತ್ತಮ ಪೈಪೋಟಿ ನೀಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

You cannot copy content of this page

Exit mobile version