Home ಬ್ರೇಕಿಂಗ್ ಸುದ್ದಿ ಕಾವೇರಿ ಕಿಚ್ಚು : ಇತ್ತ ಬೆಂಗಳೂರು ಬಂದ್, ಅತ್ತ ನೀರು ಸಾಕಾಗುತ್ತಿಲ್ಲ ಎಂದು ತಮಿಳುನಾಡು ಪಟ್ಟು

ಕಾವೇರಿ ಕಿಚ್ಚು : ಇತ್ತ ಬೆಂಗಳೂರು ಬಂದ್, ಅತ್ತ ನೀರು ಸಾಕಾಗುತ್ತಿಲ್ಲ ಎಂದು ತಮಿಳುನಾಡು ಪಟ್ಟು

0

ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಬೆಂಗಳೂರು ಬಂದ್ ಸೇರಿದಂತೆ ರಾಜ್ಯಾದ್ಯಂತ ಆಕ್ರೋಶ ಬುಗಿಲೆದ್ದಿದೆ. ಇದರ ನಡುವೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಕಚೇರಿಯಲ್ಲಿ ಈ ವಿಷಯದ ಕುರಿತಾಗಿ ನಡೆಯುತ್ತಿರುವ ಸಭೆಯಲ್ಲಿ ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.

ಅಲ್ಲದೆ ಸಭೆಯಲ್ಲಿ ಇದುವರೆಗೂ ಹರಿಸಿರುವ ನೀರಿನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ತಮಿಳುನಾಡು ಅಧಿಕಾರಿಗಳು ಈ ವರೆಗೆ ಕರ್ನಾಟಕದಿಂದ ಹರಿದು ಬಂದ ನೀರು ಸಾಲದು ಎಂದು ಕಾವೇರಿ ನೀರು ಪ್ರಾಧಿಕಾರದ ಎದುರು ವಾದಿಸುತ್ತಿದ್ದಾರೆ.

ಈವರೆಗೂ ಹರಿಸಿರುವ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಗಂಭೀರ ಚರ್ಚೆ ನಡೆಸುತ್ತಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೂ 123 ಟಿಎಂಸಿ ನೀರನ್ನು ಹರಿಸಬೇಕಿತ್ತು ಕರ್ನಾಟಕ ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಆದ್ದರಿಂದ ಬಾಕಿ ಇರುವ 83 ಟಿಎಂಸಿ ನೀರನ್ನು ಶೀಘ್ರದಲ್ಲೇ ಹರಿಸಬೇಕು ಎಂದು ವಾದಿಸಿದೆ.

ಇನ್ನು ಬಿಳಿಗೊಂಡ್ಲು ಮೂಲಕ ಹರಿಸಿರುವ ನೀರಿನ ಪ್ರಮಾಣದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ತಮಿಳುನಾಡು, ಕಾವೇರಿ ಕೊಳ್ಳದಲ್ಲಿನ ನೀರಿನ ಕೊರತೆ ಪ್ರಮಾಣದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಶೀಘ್ರದಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ 15 ದಿನಗಳ ಹಿಂದೆ CWRC ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯುಸೇಕ್ ನೀರು ಹರಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು ಇದರ ಪರಿಣಾಮವಾಗಿ ಇಂದು ರಾಜ್ಯದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಪ್ರತಿಭಟನೆ ಹೋರಾಟಗಳು ನಡೆಯುತ್ತಿವೆ.

You cannot copy content of this page

Exit mobile version