ದೆಹಲಿಯ ಮಾದರಿ ಶಾಲಾ ಯೋಜನೆಗೆ ತಮಿಳುನಾಡು ಸಿದ್ದತೆ

ತಮಿಳುನಾಡು: ರಾಜ್ಯ ಸರ್ಕಾರ ಸೋಮವಾರ (ಸೆಪ್ಟಂಬರ್‌ 5) ಜಾರಿಗೆ ತಂದ ʼಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ಮತ್ತು ಮಾಡೆಲ್‌ ಸ್ಕೂಲ್ಸ್‌ ಸ್ಕೀಮ್‌ʼ ಯೋಜನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರು ಈ ಯೋಜನೆ ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ ಮತ್ತು ದೆಹಲಿಯ ಶಾಲೆಗಳ ಮಾದರಿಯಲ್ಲಿ ಮೂಲಸೌಕರ್ಯ ಮತ್ತು ಸುಧಾರಿತ ಕಲಿಕೆಯ ಅವಕಾಶಗಳನ್ನು ಆಧಾರಿಸಿದೆ ಎಂದರು.

ಭಾರತಿ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ನಂತರ ಮಾತನಾಡಿದ ದೆಹಲಿ ಸಿಎಂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿದರೆ, 5 ವರ್ಷಗಳಲ್ಲಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬಹುದು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು