ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಗೃಹ ಸಚಿವ ಅಮಿತ್ ಶಾ ಅವರ ಸಹಾಯ ಕೋರಿದ್ದಾರೆ. ಅವರು ತಮ್ಮ ಎಕ್ಸ್ ಹ್ಯಾಂಡಲ್ (ಹಿಂದಿನ ಟ್ವಿಟರ್) ನಲ್ಲಿ ಸಹಾಯಕ್ಕಾಗಿ ಅಮಿತ್ ಶಾ ಅವರ ಬಳಿ ಮನವಿಯೊಂದನ್ನು ಮಾಡಿದ್ದಾರೆ.
ಅವರ ಭಾರತದ ರೆಸಿಡೆನ್ಸ್ ಪರ್ಮಿಟ್ ಜುಲೈನಲ್ಲಿ ಮುಕ್ತಾಯಗೊಂಡಿದೆ ಮತ್ತು ಗೃಹ ಸಚಿವಾಲಯ ಅದನ್ನು ನವೀಕರಿಸುತ್ತಿಲ್ಲ ಎಂದು ಅವರು X ನಲ್ಲಿ ಬರೆದಿದ್ದಾರೆ.
Taslima Nasreen Appeal To Amit Shah: ಭಾರತ ತನ್ನ ಎರಡನೇ ತವರು ಎಂದು ಬಣ್ಣಿಸಿರುವ ಅವರು, ಪರ್ಮಿಟ್ ನವೀಕರಣ ಆಗದೇ ಇರುವುದಕ್ಕೆ ತುಂಬಾ ಬೇಸರವಾಗಿದೆ ಎಂದಿದ್ದಾರೆ. ಭಾರತದಲ್ಲಿ ಇರಲು ಸರ್ಕಾರ ಅವಕಾಶ ನೀಡಿದರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಸ್ಲೀಮಾ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ಭಾರತದಲ್ಲಿ ತನ್ನ ರೆಸಿಡೆನ್ಸ್ ಪರ್ಮಿಟ್ ಜುಲೈ 27ರಂದು ಮುಕ್ತಾಯಗೊಂಡಿದೆ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಇದರ ನಂತರ, ಹಲವಾರು ಪ್ರಯತ್ನಗಳ ಹೊರತಾಗಿಯೂ, ಭಾರತ ಸರ್ಕಾರದಿಂದ ಅದನ್ನು ನವೀಕರಿಸಿಲ್ಲ.