Home ಅಪರಾಧ ಟಿಸಿಎಸ್ ಕ್ಯಾಂಪಸ್‌ನಲ್ಲಿ ಲೈಂಗಿಕ ಕಿರುಕುಳ: ಎಚ್‌ಆರ್ ಮ್ಯಾನೇಜರ್ ಸೇರಿ ಏಳು ಮಂದಿ ಅಮಾನತು

ಟಿಸಿಎಸ್ ಕ್ಯಾಂಪಸ್‌ನಲ್ಲಿ ಲೈಂಗಿಕ ಕಿರುಕುಳ: ಎಚ್‌ಆರ್ ಮ್ಯಾನೇಜರ್ ಸೇರಿ ಏಳು ಮಂದಿ ಅಮಾನತು

0

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕ್ಯಾಂಪಸ್‌ನಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಆರ್ ಮ್ಯಾನೇಜರ್ ಸೇರಿದಂತೆ ಏಳು ಮಂದಿ ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ತಕ್ಷಣ ಪ್ರತಿಕ್ರಿಯಿಸಿರುವ ಟಿಸಿಎಸ್ ಆಡಳಿತ ಮಂಡಳಿಯು ಬಂಧಿತ ಏಳು ಮಂದಿ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ಕಿರುಕುಳ ಅಥವಾ ಅಸಭ್ಯ ವರ್ತನೆಯನ್ನು ಕಂಪನಿಯು ಸಹಿಸುವುದಿಲ್ಲ” ಎಂದು ಟಿಸಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

ತನ್ನ ಸಹೋದ್ಯೋಗಿಯೊಬ್ಬ ಮದುವೆಯ ಆಮಿಷವೊಡ್ಡಿ ತನಗೆ ವಂಚಿಸಿದ್ದಾನೆ ಎಂದು ಮಹಿಳಾ ಉದ್ಯೋಗಿಯೊಬ್ಬರು ಮೊದಲು ದೂರು ನೀಡಿದ್ದರು. ಇದರ ಬೆನ್ನಲ್ಲೇ ಮತ್ತೆ ಏಳು ಮಂದಿ ಮಹಿಳೆಯರು ತಮಗಾದ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಈ ದೂರುಗಳ ಆಧಾರದ ಮೇಲೆ ನಾಸಿಕ್ ಪೊಲೀಸರು ವಿಶೇಷ ‘ಅಂಡರ್ ಕವರ್ ಆಪರೇಷನ್’ ನಡೆಸಿದ್ದಾರೆ. ಏಳು ಮಂದಿ ಮಹಿಳಾ ಪೊಲೀಸರು ಮಾರು ವೇಷದಲ್ಲಿ ಟಿಸಿಎಸ್ ಕ್ಯಾಂಪಸ್‌ಗೆ ಉದ್ಯೋಗಿಗಳಂತೆ ಪ್ರವೇಶಿಸಿದ್ದರು. ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇತರ ಆರೋಪಿಗಳ ವಿರುದ್ಧದ ಪುರಾವೆಗಳಿಗಾಗಿ ಪೊಲೀಸರು ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.

You cannot copy content of this page

Exit mobile version