Saturday, April 27, 2024

ಸತ್ಯ | ನ್ಯಾಯ |ಧರ್ಮ

ಚಿತ್ರದುರ್ಗ | ವಿದ್ಯಾರ್ಥಿನಿಯ ಬೆನ್ನಿನ ಮೇಲೆ ಆಸಿಡ್‌ ಸುರಿದ ಆರೋಪ – ಮುಖ್ಯೋಪಾಧ್ಯಾಯ ಅಮಾನತು

ಚಿತ್ರದುರ್ಗ: ವಿದ್ಯಾರ್ಥಿನಿಯೊಬ್ಬಳ ಮೇಲೆ ಶೌಚಾಲಯ ಸ್ವಚ್ಛಗೊಳಿಸಲು ಇಟ್ಟಿದ್ದ ಆ್ಯಸಿಡ್‌ ಎಸೆದ ಆರೋಪದ ಮೇಲೆ ಇಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿರುವ ರಂಗಸ್ವಾಮಿ ಅಮಾನತುಗೊಂಡ ಮುಖ್ಯೋಪಾಧ್ಯಾಯ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ರವಿಶಂಕರ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ.

ಆರೋಪಿ ಮುಖ್ಯೋಪಾಧ್ಯಾಯನ ವಿರುದ್ಧ ಸಂತ್ರಸ್ತೆಯ ಪೋಷಕರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಕ್ಟೋಬರ್ 25ರಂದು ದಸರಾ ರಜೆ ಮುಗಿಸಿ ವಿದ್ಯಾರ್ಥಿಗಳು ಶಾಲೆಗೆ ಮರಳಿದಾಗ ಮುಖ್ಯೋಪಾಧ್ಯಾಯರು ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದರು.

2ನೇ ತರಗತಿ ವಿದ್ಯಾರ್ಥಿನಿಯಾಗಿರುವ ಎಂಟು ವರ್ಷದ ಸಿಂಚನಾ ಹಿರಿಯರು ಶುಚಿಗೊಳಿಸುತ್ತಿದ್ದ ಶೌಚಾಲಯದ ಬಳಿ ಹೋದಾಗ ಸಿಟ್ಟಿಗೆದ್ದ ಮುಖ್ಯೋಪಾಧ್ಯಾಯ ಟಾಯ್ಲೆಟ್ ಕ್ಲೀನ್ ಮಾಡಲು ಇಟ್ಟಿದ್ದ ಆಸಿಡ್ ಆಕೆಯ ಮೇಲೆ ಎರಚಿದ್ದಾರೆ ಎನ್ನಲಾಗಿದೆ.

ಬಾಲಕಿಯ ಬೆನ್ನಿಗೆ ಗಂಭೀರವಾದ ಸುಟ್ಟ ಗಾಯಗಳಾಗಿದ್ದು, ಮುಖ್ಯೋಪಾಧ್ಯಾಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.

ಹಿರಿಯರು ಶೌಚಾಲಯ ಸ್ವಚ್ಛಗೊಳಿಸುತ್ತಿದ್ದಾಗ ಸಿಂಚನಾ ಅಲ್ಲಿಗೆ ಬಂದಿದ್ದು, ತಾನು ಆಕೆಯನ್ನು ವಾಪಸ್ ಹೋಗುವಂತೆ ಹೇಳಿದ್ದೆ ಅಷ್ಟರಲ್ಲಿ ಜೇಬಿನಲ್ಲಿಟ್ಟಿದ್ದ ಪೌಡರ್ ಆಕಸ್ಮಿಕವಾಗಿ ಆಕೆಯ ಮೇಲೆ ಬಿದ್ದಿದೆ ಎಂದು ಸಮರ್ಥಿಸಿಕೊಂಡಿದ್ದರು.

ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆದಿಲ್ಲ ಎಂದು ಆರೋಪಿಗತಿಳಿಸಿದ್ದಾರೆ. ಆದರೆ, ಘಟನೆಯ ವಿಷಯ ತಿಳಿದ ಸಿಂಚನಾ ತಾಯಿ ಹೆಡ್ ಮಾಸ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು