Home ಬೆಂಗಳೂರು ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖ ಇಟ್ಕೊಂಡು ಮತ ಕೇಳ್ತಾರೆ?...

ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖ ಇಟ್ಕೊಂಡು ಮತ ಕೇಳ್ತಾರೆ? ಸಿಎಮ್‌ ಸಿದ್ಧರಾಮಯ್ಯ

0

ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಆಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅ‌ನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು: ಸಿ.ಎಂ ಕರೆ

ಬೆಂಗಳೂರು ಏ 8: ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಆಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅ‌ನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯರೆಡ್ಡಿ ಪರವಾಗಿ ಎರಡನೇ ದಿನ ಬಿರುಸಿನ ರೋಡ್ ಶೋ ನಡೆಸಿದ ಮುಖ್ಯಮಂತ್ರಿಗಳು ಸಂಸದ ತೇಜಸ್ವಿಸೂರ್ಯ ಅವರ ಸರಣಿ ವೈಫಲ್ಯಗಳನ್ನು ಜನರ ಮುಂದಿಟ್ಟು ಸೌಮ್ಯರೆಡ್ಡಿ ಗೆಲ್ಲಿಸುವಂತೆ ಕರೆ ನೀಡಿದರು.

ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ ಕಾವೇರಿ ಸಂಪರ್ಕ ಇನ್ನಷ್ಟು ಆಗಬೇಕಿದೆ. ಈಗ ಆಗಿರುವುದು ಶೇ60 ರಷ್ಟು ಮಾತ್ರ. ಆದ್ದರಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯರೆಡ್ಡಿ ಅವರ ಗೆಲುವು ಅತ್ಯಗತ್ಯ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ. ಕೋರ್ಟ್ ನಲ್ಲಿ ನ್ಯಾಯ ಸಿಗುತ್ತದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ನೀವು ನ್ಯಾಯ ಕೊಡಿ ಎಂದು ಸಿ.ಎಂ.ಸಿದ್ದರಾಮಯ್ಯ ಮನವಿ ಮಾಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿಯಲ್ಲ; ಮೋದಿ ಮತ್ತು ಅವರ ಚೇಲಾಗಳು: ಸುಬ್ರಮಣಿಯನ್‌ ಸ್ವಾಮಿ

You cannot copy content of this page

Exit mobile version