Home ದೆಹಲಿ BRICS‌ ನಿಂದ ಭಾರತಕ್ಕೆ ಏನು ಲಾಭ ಹೇಳಿ – ಪಿ. ಚಿದಂಬರಂ ಪ್ರಶ್ನೆ

BRICS‌ ನಿಂದ ಭಾರತಕ್ಕೆ ಏನು ಲಾಭ ಹೇಳಿ – ಪಿ. ಚಿದಂಬರಂ ಪ್ರಶ್ನೆ

0

ನವದೆಹಲಿ: BRICS, SCO, G20, QUAD ಶೃಂಗಸಭೆಗಳಿಂದ ಭಾರತಕ್ಕೇನೂ ಲಾಭವಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ ಚಿದಂಬರಂ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಮಹತ್ವದ BRICS ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಅವರು BRICS‌ನಿಂದ ಭಾರತಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು? ಎಂದು ಪ್ರಶ್ನಿಸಿದ್ದಾರೆ.

ಕಳೆದ ಎರಡು-ಮೂರು BRICS ಶೃಂಗಸಭೆಗಳಿಂದ ಭಾರತಕ್ಕೆ ಯಾವುದೇ ಗಮನಾರ್ಹ ಅಥವಾ ಸ್ಪಷ್ಟ ಫಲಿತಾಂಶಗಳು ದೊರೆತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

2026ರ BRICS ಶೃಂಗಸಭೆ ಕುರಿತು ಮಾತನಾಡಿದ ಅವರು, BRICS ಮಾತ್ರವಲ್ಲದೆ ಶಾಂಘೈ ಸಹಕಾರ ಸಂಘಟನೆ (SCO), G20 ಮತ್ತು QUAD ಸೇರಿದಂತೆ ಭಾರತವು ಹಲವು ಬಹುಪಕ್ಷೀಯ ಸಂಘಟನೆಗಳ ಭಾಗವಾಗಿದೆ. ಆದರೆ, ಇವುಗಳಿಂದ ದೇಶಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘ಎಷ್ಟು ಅಧ್ಯಕ್ಷರು, ಎಷ್ಟು ಪ್ರಧಾನಮಂತ್ರಿಗಳು ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಕಳೆದ ಎರಡು-ಮೂರು BRICS ಶೃಂಗಸಭೆಗಳಿಂದ ಯಾವುದೇ ಸ್ಪಷ್ಟ ಪ್ರಯೋಜನ ಅಥವಾ ಸ್ಪಷ್ಟ ಫಲಿತಾಂಶ ಸಿಕ್ಕಿದೆ ಎಂದು ನನಗೆ ಅನಿಸುವುದಿಲ್ಲ’ ಎಂದು ಚಿದಂಬರಂ ಅವರು ತಿಳಿಸಿದ್ದಾರೆ.

‘ನಾವು BRICS‌ನಲ್ಲಿದ್ದೇವೆ, SCOನಲ್ಲಿದ್ದೇವೆ, G20 ಮತ್ತು QUADನಲ್ಲೂ ಇದ್ದೇವೆ. ಆದರೆ ಇದರಿಂದ ನಮಗೆ ಏನು ಲಾಭ ಸಿಗುತ್ತಿದೆ? ನನಗೆ ಕಾಣುತ್ತಿಲ್ಲ. ಕಳೆದ ಎರಡು-ಮೂರು ಶೃಂಗಸಭೆಗಳಿಂದ ಯಾವುದೇ ಪ್ರಯೋಜನ ಕಂಡಿಲ್ಲ. ಈ ಹಿಂದೆ ನಡೆದ BRICS ಶೃಂಗಸಭೆಗಳಿಂದ ಕೆಲವು ಸ್ಪಷ್ಟ ಪ್ರಯೋಜನಗಳು ದೊರೆತಿದ್ದವು’ ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version