ಮೆಹ್ಸಾನಾ: ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ರಸ್ತೆ ಜಲಾವೃತಗೊಂಡ ಕಾರಣ, ಸೈಕಲ್‌ನಲ್ಲಿ ಶಾಲೆಯಿಂದ ಮನೆಗೆ ತೆರಳುತಿದ್ದ ವಿಧ್ಯಾರ್ಥಿನಿಯೊಬ್ಬಳು ರಸ್ತೆ ಬದಿಗೆ ಇರುವ ತೆರದಿದ್ದ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಗುಜರಾತಿನ ಮೆಹ್ಸಾನಾ ಜಿಲ್ಲೆಯ ವಿಸ್ನಗರ್‌ನಲ್ಲಿರುವ ತಲೋಟಾ ಕ್ರಾಸ್ ರಸ್ತೆ ಬಳಿ ದೊಡ್ಡದಾದ ಗಟಾರ ತೆರೆದಿದ್ದು ಮಳೆಗೆ ಜಲಾವೃತಗೊಂಡಿದೆ. ಆದೇ ಮಾರ್ಗವಾಗಿ ಸೈಕಲ್‌ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿನಿ ಜಿಯಾನಯಿ (14) ಮಳೆಯ ನೀರು ಆವೃತವಾಗಿದ್ದರಿಂದ ಚರಂಡಿ ತೆರೆದಿರುವುದು ಕಾಣದ ಕಾರಣ, ವಿಧ್ಯಾರ್ಥಿನಿ ಅದರೋಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಸ್ಥಳಕ್ಕೆ ಬೇಟಿ ನೀಡಿದ್ದ ವಿಸ್ನಗರ್ ಪುರಸಭೆಯ ಅಧಿಕಾರಿಯೊಬ್ಬರು ಘಟನೆಯ ಕುರಿತು ಮಾತನಾಡಿದ್ದು, ಬಾಲಕಿ ಬಿದ್ದ ಕೂಡಲೇ ಅಲ್ಲಿದ್ದ ಕ್ರೇನ್ ಬಳಸಿ ಬಾಲಕಿಯನ್ನು ರಕ್ಷಿಸುವ ಕಾರ್ಯಚರಣೆ ನೆಡೆಸಲಾಯಿತು, ನಂತರ ಆಕೆಯನ್ನು ಚರಂಡಿಯಿಂದ ಹೊರಗೆ ತೆಗೆದಿದ್ದು ಕೂಡಲೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಯಾಯಿತು. ಆದರೆ ಬಾಲಕಿಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಆಕೆ ಸಾವನ್ನಪಿದ್ದಾಳೆ ಎಂದು ತಿಳಿಸಿದ್ದಾರೆ.
ಗಟಾರ ತೆರದ ಕಾರಣ, ಸಂಬಂಧಿಸಿದ ಅಧಿಕಾರಿಗಳು ಅಥವ ಕಾರ್ಯನಿರ್ವಯಿಸುವವರು ಆ ಸ್ಥಳದಲ್ಲಿ ಸೂಚನೆಗಾಗಿ ಏನನ್ನಾದರು ಸೂಚಿಸಬೇಕಿತ್ತು, ಆದರೆ ಅಧಿಕಾರಿಗಳ ಬೇಜವಬ್ದಾರಿತನದಿಂದ ಈ ಸಾವು ಸಂಭವಿಸಿದೆ ಎಂದು ಅಲ್ಲಿನ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಗುಜರಾತಿನ ಆರೋಗ್ಯ, ಜಲ ಸಂಪನ್ಮೂಲ ಮತ್ತು ನೀರು ಸರಬರಾಜು ಖಾತೆ ಸಚಿವ ಹೃಷಿಕೇಶ್ ಪಟೇಲ್ ಅವರ ಕ್ಷೇತ್ರದಲ್ಲಿ ನಡೆದ ಕಾರಣ ಘಟನೆಯ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.