Saturday, September 21, 2024

ಸತ್ಯ | ನ್ಯಾಯ |ಧರ್ಮ

ಗ್ರಾಹಕರ ಖಾತೆಗೆ ಕನ್ನ ಹಾಕಿದ್ದ ಬ್ಯಾಂಕ್ ಉದ್ಯೋಗಿ ಆತ್ಮ*ತ್ಯೆ

ಗ್ರಾಹಕರ ಖಾತೆಗೇ ಕನ್ನ ಹಾಕಿದ ಬ್ಯಾಂಕ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಸುನಿಲ್ ( 35 ವರ್ಷ ) ಮೃತ ದುರ್ದೈವಿ.

ಕಳೆದ 2023 ರ ಡಿಸೆಂಬರ್ ನಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 8 ಮಂದಿ ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಆ ದಿನಗಳಲ್ಲಿ ಇಡೀ ತಾಲ್ಲೂಕಿನಾದ್ಯಂತ ಸಂಚಲನ ಸೃಷ್ಟಿಸಿತ್ತು.

ಈತ ಕೆಲಸ ಮಾಡುತ್ತಿರುವ ಹೊಸನಗರ ತಾಲೂಕಿನ ಯಡೂರು ಕೆನರಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ 8 ಅಕೌಂಟ್‌ಗಳಿಂದ ಠೇವಣಿ ಇಟ್ಟಿದ್ದ ಸುಮಾರು 6 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದನು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸುನಿಲ್ ಜೈಲಿಗೆ ಹೋಗಿದ್ದ.

ಇದನ್ನೂ ಓದಿ : ಠೇವಣಿದಾರರೇ ಹುಷಾರ್ : ಬ್ಯಾಂಕ್ ನೌಕರನಿಂದಲೇ ಕೋಟಿಗಟ್ಟಲೆ ಹಣ ಲೂಟಿ Peepal TV ವಿಶೇಷತೆ

ಬ್ಯಾಂಕ್ ಗೆ ಕನ್ನ ಹಾಕಿದ ಅಷ್ಟೂ ಹಣವನ್ನು ಆನ್‌ಲೈನ್ ಬೆಟ್ಟಿಂಗ್, ಶೋಕಿ ಜೀವನಕ್ಕೆ ವಿನಿಯೋಗಿಸಲಾಗಿದೆ. ಈತನ ಅರೆಸ್ಟ್ ಮಾಡುವ ಸಂದರ್ಭದಲ್ಲಿ ಒಂದು ರೂಪಾಯಿ ಕೂಡ ಕೈಯಲ್ಲಿ ಇರಲಿಲ್ಲ. ಅಷ್ಟೂ ಹಣವನ್ನು ಅದಾಗಲೇ ಆನ್ ಲೈನ್ ಬೆಟ್ಟಿಂಗ್ ಆಪ್, ಟ್ರೇಡಿಂಗ್ ದಂಧೆಗಳಲ್ಲಿ ವಿನಿಯೋಗಿಸಿದ ಈತನಿಂದ ಸುಮಾರು 6 ಕೋಟಿಗಳಷ್ಟು ಅಧಿಕ ಮೊತ್ತದ ನಷ್ಟಕ್ಕೆ ಕೆನರಾ ಬ್ಯಾಂಕ್ ಹೊರೆ ಹೊರಬೇಕಾಯ್ತು.

ಆ ನಂತರ ಬೇಲ್ ಮೂಲಕ ಹೊರಬಂದಿದ್ದ ಆರೋಪಿ ಸುನೀಲ್ ಕೈಲಿದ್ದ ಹಣವನ್ನೂ ಸಹ ಕಳೆದುಕೊಂಡಿದ್ದ. ಈ ಎಲ್ಲ ಬೆಳವಣಿಗೆಗಳಿಂದ ಮನನೊಂದ ಸುನೀಲ್ ಮೊನ್ನೆ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page