ದೇಶ ಅಂದ್ರೆ ದೋಸೆ ಅಲ್ಲ: ತೇಜಸ್ವಿಗೆ ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ದೇಶ ವಿಭಜನೆ ಶಕ್ತಿಗಳಿಗೆ ಭಾರತ ಐಕ್ಯತಾ ಯಾತ್ರೆ ಪ್ರೊತ್ಸಾಹ ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ಘಟಕ ತಿರುಗೇಟು ನೀಡಿದೆ.

ಭಾರತ ಐಕ್ಯತಾ ಯಾತ್ರೆ ಪ್ರಾರಂಭವಾದಾಗಿನಿಂದಲು ದೇಶ ವಿಭಜನೆ ಶಕ್ತಿಗಳಿಗೆ ರಾಹುಲ್‌ ಗಾಂಧಿ ಪ್ರೋತ್ಸಾಹ ತುಂಬುತ್ತಿದ್ದಾರೆ. ಇದು ಐಕ್ಯತಾ ಯಾತ್ರೆ ಅಲ್ಲ ದೇಶ ವಿಭಜನೆ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯಾತ್ರೆ ಎಂದು ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದರು.

ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದ್ದು, ಮಿಸ್ಟರ್ ತೇಜಸ್ವಿ ಸೂರ್ಯ ಅವರೇ, ದೇಶ ಅಂದ್ರೆ ದೋಸೆ ಅಲ್ಲ. ಕನ್‌ಫ್ಯೂಸ್ ಆಗ್ಬೇಡಿ! ಹಾಗೆಯೇ ತಮಗಿರುವ ಮಾನಸಿಕ ದೋಷವನ್ನು ಚಿಕಿತ್ಸೆ ಪಡೆದು ಸರಿಪಡಿಸಿಕೊಂಡು ಶೀಘ್ರವೇ ಗುಣಮುಖರಾಗಿ ಎಂದು ಹಾರೈಸುತ್ತೇವೆ! ಎಂದು ವ್ಯಂಗ್ಯವಾಡಿದೆ.

Related Articles

ಇತ್ತೀಚಿನ ಸುದ್ದಿಗಳು