Home ಅಪರಾಧ ಸ್ನೇಹಿತನನ್ನೆ ಕೊಲೆ ಮಾಡಿ ಶಿರಾಡಿ ಘಾಟ್ ಪ್ರಪಾತಕ್ಕೆ ಎಸೆದ ಪಾತಕಿಗಳು

ಸ್ನೇಹಿತನನ್ನೆ ಕೊಲೆ ಮಾಡಿ ಶಿರಾಡಿ ಘಾಟ್ ಪ್ರಪಾತಕ್ಕೆ ಎಸೆದ ಪಾತಕಿಗಳು

ಹಾಸನ: ಕಳೆದ ಮೂರು ದಿನಗಳ ಹಿಂದೆ ದಿಢೀರ್ ಕಾಣೆಯಾಗಿದ್ದ ತಾಲೂಕಿನ ಹರಳಹಳ್ಳಿಯ ಚಾಲಕ ಶಿವಕುಮಾರ್(34) ಸ್ನೇಹಿತರಿಂದಲೇ ಕೊಲೆಯಾಗಿರುವುದು ಖಾತ್ರಿಯಾಗಿತ್ತು . ತಾವು ಜಾನುವಾರು ಹಾಗೂ ಕುರಿ ಕಳವು ಮಾಡಿದ್ದು ಗೊತ್ತಿದ್ದ ಶಿವಕುಮಾರ್, ಅದನ್ನು ಬೇರೆಯವರಿಗೆ ಹೇಳಿ ಬಿಡುತ್ತಾನೆ ಎಂದುಸ್ನೇಹಿತರೇ ಆತನಿಗೆ ಕಂಠಪರ‍್ತಿ ಕುಡಿಸಿ ಜೀವ ತೆಗೆದಿದ್ದರು. ಶಿವಕುಮಾ‌ರ್ ಮೃತದೇಹ ಸಕಲೇಶಪುರದಿಂದ 20 ಕಿಮೀ ದೂರ ರಾಷ್ಟ್ರೀಯ ಹೆದ್ದಾರಿ 75 ( ಶಿರಾಡಿ ಘಾಟ್ ) ರ ಪ್ರಪಾತದಲ್ಲಿ ಸೋಮವಾರ ಪತ್ತೆಯಾಗಿತ್ತು. ಘಟನೆ ನಂತರ ಆರೋಪಿಗಳಲ್ಲಿ ಒಬ್ಬನಾದ ದಿಲೀಪ್ ಎಂಬಾತ,ಪೊಲೀಸರಿಗೆ ಶರಣಾಗಿದ್ದು, ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಅದೇ ಊರಿನ ಪ್ರದೀಪ್ ಮತ್ತು ಶರತ್ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾಗಿರುವ ಶಿವಕುಮಾರ್ 10 ರವರ್ಷಗಳ ಹಿಂದೆ ಮದುವೆ ಯಾಗಿದ್ದು, ನಂತರದಲ್ಲಿ ಅತಿಯಾಗಿ ಸಾಲ ಮಾಡಿಕೊಂಡಿದ್ದ.

ಇದೇ ಕಾರಣಕ್ಕೆ ಕಲಹ ಉಂಟಾಗಿ ಕೆಲ ವರ್ಷಗಳಿಂದ ಪತ್ನಿ ಈತನಿಂದ ದೂರವಾಗಿದ್ದಳು. ನಂತರ ಆಟೋ ಓಡಿಸಿಕೊಂಡಿದ್ದ ಶಿವಕುಮಾ‌ರ್, ಇತ್ತೀಚಿಗೆ ಹೈದರಾಬಾದ್‌ನಲ್ಲಿ ಬೇಕರಿ ಕೆಲಸಕ್ಕೆ ಸೇರಿಕೊಂಡಿದ್ದ. ಆತ್ಮೀಯ ಸ್ನೇಹಿತರೇ ಆಗಿದ್ದ ಅದೇ ಊರಿನಶರತ್ ಹಾಗೂ ಪ್ರದೀಪ್ ಹಸು-ಕರು ಮತ್ತು ಕುರಿ ಕಳವು ಮಾಡಿದ್ದರು. ಈ ವಿಚಾರ ಶಿವಕುಮಾರ್‌ಗೆ ತಿಳಿದಿತ್ತು ಎನ್ನಲಾಗಿದೆ. ಎಲ್ಲಿ ತಮ್ಮ ನಿಜ ಬಣ್ಣವನ್ನು ಶಿವಕುಮಾರ್ ಊರಿನವರು ಅಥವಾ ಮಾಲೀಕರಿಗೆ ಹೇಳಿ ಬಿಡುತ್ತಾನೋ ಎಂದು ಇಬ್ಬರೂಆತಂಕಗೊಂಡಿದ್ದರು. ಪದೇ ಪದೆ ಶಿವಕುಮಾರ್‌ಗೆ ಕರೆ ಮಾಡಿ ನೀನು ರ‍್ಜೆಂಟ್ ಆಗಿ ಊರಿಗೆ ಬಾ ನಿನ್ನ ಬಳಿ ಮಾತನಾಡಬೇಕೆಂದು ಪೀಡಿಸುತ್ತಿದ್ದರು. ಕಡೆಗೂ ಸ್ನೇಹಿತರ ಒತ್ತಡಕ್ಕೆ ಕಟ್ಟುಬಿದ್ದು ಶಿವಕುಮಾರ್ ಕಳೆದ ಬುಧವಾರ ಊರಿಗೆ ಬಂದ. ಆದರೆ ಬೇಕರಿಯಲ್ಲಿ ಕೆಲಸ ಮಾಡುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದ ಶಿವಕುಮಾರ್, ಆ ನೋವಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಕಳೆದ ಶುಕ್ರವಾರ ಶರತ್ ಹಾಗೂ ಪ್ರದೀಪ್, ಶಿವಕುಮಾರ್ ಸಂಬಂಧಿ ದಿಲೀಪನ ಮೂಲಕ ಶಿವಕುಮಾರ್‌ನನ್ನು ತಮ್ಮಲ್ಲಿಗೆ ಕರೆಸಿಕೊಂಡರು. ನಂತರ ನಾಲ್ವರೂಜೊತೆಯಾಗಿ ಢಾಬಾವೊಂದಕ್ಕೆ ತೆರಳಿದರು. ಈ ವೇಳೆ ಶಿವಕುಮಾರ್‌ಗೆ ಮಧ್ಯಾಹ್ನದಿಂದಲೇ ಕಂಠಪರ‍್ತಿ ಕುಡಿಸಿದರು.

ಈ ವೇಳೆಯೂ ಮಾತಿಗೆ ಮಾತು ಬೆಳೆದಿದೆ. ನಂತರ ನಾಲ್ವರೂನರ‍್ಜನ ಪ್ರದೇಶಕ್ಕೆ ತೆರಳಿದರು. ಶಿವಕುಮಾರ್ ಕುಡಿದ ಮತ್ತಿನಲ್ಲಿ ಒಂದು ರೀತಿ ಪ್ರಜ್ಞಾಹೀನನಾಗಿದ್ದಾಗ ಆತನ ತಲೆ ಮೇಲೆ ಕಲ್ಲುಎತ್ತಿಹಾಕಿ ದೊಣ್ಣೆ ಇತ್ಯಾದಿ ವಸ್ತುಗಳಿಗೆ ಹೊಡೆದು ಕೊಲೆ ಮಾಡಿದ್ದರು. ದಿಲೀಪ್, ಶಿವಕುಮಾರ್‌ನನ್ನು ಬಿಟ್ಟುಬಿಡಿ ಎಂದು ಕಾಲಿಗೆ ಬಿದ್ದು ಬೇಡಿಕೊಂಡರೂ ಕಟುಕರ ಮನಸು ಕರಗಲಿಲ್ಲ.ಬದಲಾಗಿ ದಿಲೀಪ್‌ ಗೂ ಚೆನ್ನಾಗಿ ಥಳಿಸಿ ಬಾಯಿ ಮುಚ್ಚಿಸಿದರು. ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಶಿವಕುಮಾರ್ ನನ್ನ ಎಸೆದಿದ್ದರು. ಜ.10 ರಿಂದ ಕಾಣೆಯಾಗಿದ್ದ, 12 ರಂದು ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. 13 ರಂದು ಮಗನ ಕೊಲೆಯಾಗಿದೆ ಎಂದು ಮಂಜೇಗೌಡ ಮತ್ತೊಂದು ದೂರು ನೀಡಿದ್ದರು. ಇದೀಗ ಡೆ ..ಡ್ ಬಾಡಿ ಸಿಕ್ಕಿದೆ. ದಿಲೀಪನನ್ನೂ ಬಂಧಿಸಲಾಗಿದೆ. ಕೊಲೆ ಆರೋಪಿಗಳು ಕ .‌ಳ್ಳತನ ಮಾಡಿದ್ದರೆ ಎಂಬ ಬಗ್ಗೆಯೂ ತನಿಖೆ ಮಾಡ ಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಶವ ಹಾಕಿ ಗೂಡ್ಸ್ ವಾಹನದಲ್ಲಿ ಶಿರಾಡಿಘಾಟ್‌ಗೆ ಕೊಂಡೊಯ್ದು ಹಳ್ಳಕ್ಕೆ ಎಸೆದು ಬಂದಿದ್ದ ಅವರು ಆದರೆ ಇದಾವುದೂ ಗೊತ್ತಿಲ್ಲದ ಶಿವಕುಮಾರ್ ತಂದೆ ಮಂಜೇಗೌಡ ಮಿಸ್ಸಿಂಗ್ ಕೇಸ್ ನೀಡಿದ್ದರು. ಈ ನಡುವೆ ಶಿವಕುಮಾ‌ರ್ ಕೊಲೆ ವಿಷಯವನ್ನು ದಿಲೀಪ್ ಎಲ್ಲಿ ಬಾಯಿ ಬಿಡುತ್ತಾನೋ ಎಂಬ ಶಂಕೆಯಿಂದ ಆತನನ್ನೂ ಮುಗಿಸಲು ಮುಂದಾಗಿದ್ದರು. ಆದರೆ ದಿಲೀಪ್ ನಾನು ಯಾರಿಗೂ ಹೇಳಲ್ಲ. ಹೈದ್ರಾಬಾದ್ ಗೆ ಬೇಕರಿಗೆ ಹೋಗುತ್ತೇನೆಂದು ಕಾಲಿಗೆ ಬಿದ್ದು ಬೇಡಿಕೊಂಡು ಬಚಾವಾಗಿದ್ದ. ಇಬ್ಬರು ಶವದೊಂದಿಗೆ ಸಕಲೇಶಪುರ ಕಡೆಗೆ ತೆರಳಿ ದಾಗದಿಲೀಪ್ ತಪ್ಪಿಸಿಕೊಂಡು ಬಂದು ಗ್ರಾಮದ ಪ್ರಮುಖರಿಗೆ ನಿಜ ಸಂಗತಿ ತಿಳಿಸಿದ್ದ. ನಂತರ ಪೊಲೀಸರ ಮುಂದೆಯೂ ಎಲ್ಲವನ್ನೂ ವಿವರಿಸಿದ. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಈಗ ಮೃತ ದೇಹ ದೊರೆತಿದ್ದು, ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version