ರಸ್ತೆ ಗುಂಡಿಗಳ ವಿಚಾರ ಸರ್ಕಾರಕ್ಕೆ ನ್ಯಾಯಾಲಯಗಳ ಚಿಮಾರಿ

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳು ಹೇರಳವಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿವೆ ಮತ್ತು ಜೀವಕ್ಕೆ ಆಪತ್ತು ತಂದಿವೆ. ಈ ಹಿನ್ನಲೆ ನ್ಯಾಯಾಲಯಗಳು ಸರ್ಕಾರಕ್ಕೆ ಚಿಮಾರಿ ಹಾಕಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಕಾಟ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಪ್ರಯಾಣಿಸುವಾಗ ರಸ್ತೆಗುಂಡಿಗಳಿಗೆ ಸಿಕ್ಕಿ ಕೆಲವರು ಗಾಯಗೊಂಡಿದ್ದಾರೆ ಮತ್ತು  ಪ್ರಾಣ ಕಳೆದು ಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಸರ್ಕಾರದ ಬೇಜವಾಬ್ದಾರಿ, ನಿಷ್ಕ್ರಿಯತೆ, ಕಾರ್ಪೊರೇಷನ್‌ನಲ್ಲಿರುವ ಭ್ರಷ್ಟಾಚಾರ  ಇದಕ್ಕೆಲ್ಲ ಕಾರಣ, ಹಾಗಾಗಿಯೇ ನ್ಯಾಯಾಲಯಗಳು ಸರ್ಕಾರಕ್ಕೆ ಚಿಮಾರಿ ಹಾಕಿವೆ ಎಂದು ಸಿದ್ದರಾಮಯ್ಯ ಗುಡುಗಿದರು.

Related Articles

ಇತ್ತೀಚಿನ ಸುದ್ದಿಗಳು