Friday, February 28, 2025

ಸತ್ಯ | ನ್ಯಾಯ |ಧರ್ಮ

“ಇಡ್ಲಿ-ಸಾಂಬಾರ್” ಮಾರಾಟದಿಂದಾಗಿ ಗೋವಾದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ: ಗೋವಾ ಬಿಜೆಪಿ ಶಾಸಕ

ಗೋವಾದಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಗೆ ಬೀಚ್ ಶಾಕ್‌ಗಳಲ್ಲಿ ಇಡ್ಲಿ-ಸಾಂಬಾರ್ ಮಾರಾಟವೂ ಕಾರಣವಾಗಿದೆ ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಗುರುವಾರ ಹೇಳಿದ್ದಾರೆ.

ಉತ್ತರ ಗೋವಾದ ಕ್ಯಾಲಂಗುಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ನೀಡಿದರು. ಗೋವಾಕ್ಕೆ ವಿದೇಶಿ ಪ್ರವಾಸಿಗರ ಆಗಮನ ಕಡಿಮೆಯಾಗಿರುವುದಕ್ಕೆ ಕೇವಲ ಸರ್ಕಾರ ಮಾತ್ರ ಜವಾಬ್ದಾರಿಯಲ್ಲ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ಅವರು ಹೇಳಿದರು. ಗೋವಾದ ಸ್ಥಳೀಯ ಜನರು ಹೊರಗಿನವರಿಗೆ ಬೀಚ್‌ ಬದಿಯ ಜಾಗಗಳನ್ನು ಬಾಡಿಗೆಗೆ ನೀಡುತ್ತಿರುವುದು ಸಹ ಇದಕ್ಕೆ ಕಾರಣ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಉತ್ತರ ಗೋವಾದ ಕ್ಯಾಲಂಗುಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ನೀಡಿದರು. ಗೋವಾಕ್ಕೆ ಕಡಿಮೆ ವಿದೇಶಿಯರು ಬಂದರೆ, ಸರ್ಕಾರವನ್ನು ಮಾತ್ರ ದೂಷಿಸಲಾಗುವುದಿಲ್ಲ ಮತ್ತು ಎಲ್ಲಾ ಪಾಲುದಾರರು ಸಮಾನ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು. ಗೋವಾದವರು ತಮ್ಮ ಬೀಚ್ ಶ್ಯಾಕ್‌ಗಳನ್ನು ಇತರ ಪ್ರದೇಶಗಳ ಉದ್ಯಮಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ ಎಂದು ಲೋಬೊ ವಿಷಾದಿಸಿದರು.

ಬೆಂಗಳೂರಿನ ಕೆಲವರು ಬೀಚ್ ರೆಸ್ಟೋರೆಂಟ್‌ಗಳಲ್ಲಿ “ವಡಾ ಪಾವ್” ಮಾರುತ್ತಿದ್ದರೆ, ಇನ್ನೂ ಕೆಲವರು “ಇಡ್ಲಿ-ಸಾಂಬಾರ್” ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು. ಆದರೆ ಈ ತಿಂಡಿಗಳಿಂದ ಪ್ರವಾಸೋದ್ಯಮವನ್ನು ಹೇಗೆ ಕಡಿಮೆ ಮಾಡುತ್ತಿವೆ ಎಂಬುದನ್ನು ಲೋಬೊ ಸ್ಪಷ್ಟವಾಗಿ ವಿವರಿಸಲಿಲ್ಲ.

ಪ್ರವಾಸಿಗರ ಇಳಿಕೆ ಗೋವಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಮತ್ತು ಇದಕ್ಕೆ ಹಲವು ಕಾರಣಗಳಿವೆ ಎಂದು ಅವರು ಹೇಳಿದರು. ಪ್ರತಿ ವರ್ಷ ಗೋವಾಕ್ಕೆ ವಿದೇಶಿ ಪ್ರವಾಸಿಗರು ಬರುತ್ತಾರೆ, ಆದರೆ ಪ್ರಸ್ತುತ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದಲ್ಲಿ ತೊಡಗಿರುವ ಎಲ್ಲಾ ಪಾಲುದಾರರ ಸಭೆ ನಡೆಸಿ ಗೋವಾಕ್ಕೆ ಬರಲು ವಿದೇಶಿ ಪ್ರವಾಸಿಗರು ಹಿಂಜರಿಯುತ್ತಿರುವ ಬಗ್ಗೆ ಅಧ್ಯಯನ ಮಾಡುವಂತೆ ಕೇಳಿದೆ.

ಮತ್ತೊಂದೆಡೆ, ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವೂ ಒಂದು ಕಾರಣ ಎಂದು ಲೋಬೊ ಹೇಳಿದರು. ಕ್ಯಾಬ್ ಮತ್ತು ಟ್ಯಾಕ್ಸಿ ಶೋಷಣೆಯ ಬಗ್ಗೆ ಮಾತನಾಡಿದ ಅವರು, ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಸ್ಥಳೀಯ ಪ್ರವಾಸಿ ಟ್ಯಾಕ್ಸಿ ನಿರ್ವಾಹಕರ ನಡುವಿನ ವ್ಯತ್ಯಾಸಗಳು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಕರೆ ನೀಡಿದರು. ನಾವು ಒಂದು ಉತ್ತಮ ವ್ಯವಸ್ಥೆಯನ್ನು ಸ್ಥಾಪಿಸದಿದ್ದರೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರಾಳ ದಿನಗಳನ್ನು ನೋಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page