Home ವಿದೇಶ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ಕಮಲಾ ಹ್ಯಾರಿಸ್: ರಶ್ದಿ

ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ಕಮಲಾ ಹ್ಯಾರಿಸ್: ರಶ್ದಿ

0

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿರುವ ಮುಂಬೈ ಸಂಜಾತ ಲೇಖಕ ಸಲ್ಮಾನ್ ರಶ್ದಿ, ದೇಶವನ್ನು ನಿರಂಕುಶಾಧಿಕಾರದತ್ತ ಕೊಂಡೊಯ್ಯುವ ಡೊನಾಲ್ಡ್ ಟ್ರಂಪ್ ಅವರನ್ನು ತಡೆಯುವ ಶಕ್ತಿ ಇರುವ ಏಕೈಕ ವ್ಯಕ್ತಿ ಕಮಲಾ ಹ್ಯಾರಿಸ್ ಎಂದು ಹೇಳಿದ್ದಾರೆ.

ʼಕಮಲಾ ಹ್ಯಾರಿಸ್ ಪರ ದಕ್ಷಿಣ ಏಷ್ಯಾ ಜನರ ಬೆಂಬಲʼ ಎಂಬ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದ ಅವರು ಮಾತನಾಡಿದ ಅವರು ‘ಇದೊಂದು ನಿರ್ಣಾಯಕ ಕ್ಷಣ. ಮುಂಬೈ ಮೂಲದವನಾದ ನನಗೆ ಭಾರತ ಮೂಲದ ಮಹಿಳೆ ಶ್ವೇತಭವನದ ಚುಕ್ಕಾಣಿ ಹಿಡಿಯಲು ಸ್ಪರ್ಧೆಗಿಳಿದಿರುವುದನ್ನು ನೋಡುವುದು ಅದ್ಭುತ. ನನ್ನ ಪತ್ನಿ ಸಹ ಆಫ್ರಿಕಾ–ಅಮೆರಿಕದ ಮಹಿಳೆ. ಹಾಗಾಗಿ, ಕಪ್ಪು ವರ್ಣೀಯ ಮತ್ತು ಭಾರತ ಮೂಲದ ಮಹಿಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಮಗೆ ಅತ್ಯಂತ ಖುಷಿ ಕೊಟ್ಟಿದೆ’ಎಂದರು.

ಭಾರತ–ಅಮೆರಿಕ ಮೂಲದ ಸಂಸದರು, ಲೇಖಕರು, ನೀತಿ ನಿಪುಣರು, ಉದ್ಯಮಿಗಳು ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಜೋ ಬೈಡನ್ ಕಣದಿಂದ ಹಿಂದೆ ಸರಿದ ಬಳಿಕ 59 ವರ್ಷದ ಕಮಲಾ ಅವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಮುಂದಿನ ತಿಂಗಳು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ʼಅಮೆರಿಕದಲ್ಲಿ ಸದ್ಯ ಒಂದು ವಿಶೇಷ ವಾತಾರಣವಿದೆ. ಕಳೆದೊಂದು ವಾರದಲ್ಲಿ ಅಮೆರಿಕ ರಾಜಕಾರಣದಲ್ಲಿ ಪರಿವರ್ತನೆಯಾಗಿದೆ. ಅಧ್ಯಕ್ಷೀಯ ಚುನಾವಣೆಯ ಕಣಕ್ಕೆ ಕಮಲಾ ಹ್ಯಾರಿಸ್ ಬಂದ ಬಳಿಕ ಚರ್ಚೆಗಳೇ ಭಿನ್ನವಾಗಿ ನಡೆಯುತ್ತಿವೆ. ಖುಷಿ, ಆಶಾವಾದ, ಧನಾತ್ಮಕ ಮತ್ತು ಪ್ರಗತಿ ಪರ ಚಿಂತನೆಗಳು ಆರಂಭವಾಗಿವೆ. ಒಂದೇ ಒಂದು ಒಳ್ಳೆ ಗುಣಗಳಿಲ್ಲದ ಟೊಳ್ಳು ವ್ಯಕ್ತಿತ್ವದ ವ್ಯಕ್ತಿ(ಟ್ರಂಪ್) ದೇಶವನ್ನು ನಿರಂಕುಶಾಧಿಕಾರದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ’ ಎಂದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರನ್ನು ತಡೆಯಬಲ್ಲ ವ್ಯಕ್ತಿ ಕಮಲಾ ಹ್ಯಾರಿಸ್ ಮಾತ್ರ ಎಂದಿರುವ ರಶ್ದಿ, ಆ ಬಗ್ಗೆ ನನಗೆ ಶೇಕಡ 1,000 ದಷ್ಟು ವಿಶ್ವಾಸವಿದೆ ಎಂದಿದ್ದಾರೆ.

You cannot copy content of this page

Exit mobile version