Sunday, June 23, 2024

ಸತ್ಯ | ನ್ಯಾಯ |ಧರ್ಮ

ಪಿಎಂ ಫಸಲ್ ಬಿಮಾ ಯೋಜನೆಯಲ್ಲಿ ಅಗತ್ಯ ಬದಲಾವಣೆ ತರಲು ಕೇಂದ್ರ ಕೃಷಿ ಸಚಿವಾಲಯ ಸಿದ್ದ

ಹೊಸದಿಲ್ಲಿ: ದೇಶದ ಕೃಷಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಅಗತ್ಯ ಬದಲಾವಣೆ ತರಲು ಸಿದ್ದವಿರುವುದಾಗಿ ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಈ ಕುರಿತು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಮನೋಜ್‌ ಅಹುಜಾ ಅಧಿಕೃತ ಹೇಳಿಕೆ ಹೋರಡಿಸಿದ್ದು, ಹೇಳಿಕೆಯಲ್ಲಿ ಹವಾಮಾನ ಬದವಾಣೆ ಮತ್ತು ಮುಂದುವರೆದ ತಂತ್ರಜ್ಞಾನವನ್ನು ಗಮನದಲ್ಲಿ ಇರಿಸಿ, ಸುಧಾರಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

2016ರ ಬಳಿಕ ನೂತನ ಸವಾಲುಗಳನ್ನು ಹೆದುರಿಸಲು ಯೋಜನೆಯಲ್ಲಿ ಬದಲಾವಣೆ ತರಲಾಗಿತ್ತು. 2018 ರಲ್ಲಿ ಹೊಸ ಅನುಕೂಲ ಕಲ್ಪಿಸಲಾಗಿತ್ತು. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಅಭೂತಪೂರ್ವ ಆವಿಷ್ಕಾರಗಳಾಗಿತ್ತಿವೆ. ಡಿಜಿಟೆಲ್‌ ಬಳಕೆ ಹಾಗೂ ತಂತ್ರಜ್ಞಾನಗಳು ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಿವೆ ಎಂದು ಮನೋಜ್‌ ಅಹುಜಾ ಹೇಳಿದ್ದಾರೆ.

ಕೃಷಿ ಸಚಿವಾಲಯದ ಪ್ರಕಾರ ರೈತರ ದಾಖಲಾತಿ ದೃಷ್ಟಿಯಿಂದ ಈ ಯೋಜನೆ ವಿಶ್ವದಲ್ಲಿಯೇ ಅತೀ ಡೊಡ್ಡ ಬೆಳೆ ವಿಮೆ ಯೋಜನೆಯಾಗಿದೆ. ಹಾಗೆಯೇ ವಿಮೆ ಮೊತ್ತ ಪಾವತಿಯಾಗುವಲ್ಲಿ 3ನೇ ಅತೀಡೊಡ್ಡ ಯೋಜನೆಯಾಗಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು