Home ಬೆಂಗಳೂರು ಇದೇ ಆಗಸ್ಟ್ 30 ಭಾನುವಾರಂದು “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50″ರ ಸಮಾರೋಪ ಸಮಾರಂಭ

ಇದೇ ಆಗಸ್ಟ್ 30 ಭಾನುವಾರಂದು “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50″ರ ಸಮಾರೋಪ ಸಮಾರಂಭ

ಬೆಂಗಳೂರು : ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಚ್ಚಳಿಯದ ಗುರುತುಮೂಡಿಸಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಸ್ಥಾಪನೆಯಾಗಿ ಐವತ್ತು ವರ್ಷ ಪೊರೈಸಿರುವ ಸಂದರ್ಭದಲ್ಲಿ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50” ಆಚರಣೆಯ ಭಾಗವಾಗಿ ಕಳೆದ ಒಂದುವರ್ಷದಿಂದ ರಾಜ್ಯದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೆಡೆಸಿದೆ, ಕಳೆದ ವರ್ಷ ಆಗಸ್ಟ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಉತ್ಸವದೊಂದಿಗೆ ಉದ್ಘಾಟನೆಗೊಂಡ ಈ ಕಾರ್ಯಕ್ರಮಗಳು ನಂತರ ಮೈಸೂರು, ರಾಯಚೂರು, ಕುಂದಾಪುರ, ಕೋಲಾರ, ಧಾರವಾಡ, ಶಿವಮೊಗ್ಗ, ಗುಲ್ಬರ್ಗ ಮುಂತಾದ ಕಡೆ ರಂಗೋತ್ಸವ, ವಿಚಾರ ಸಂಕಿರಣಗಳು, ಕಲಾ ಶಿಬಿರಗಳು, ಬೀದಿನಾಟಕ, ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿದೆ.

ವರ್ಷವಿಡೀ ನೆಡೆದ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50”ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಇದೇ ಆಗಸ್ಟ್ 28 ರಿಂದ 30 ರವರೆಗೆ ಧಾರಾವಾಡದಲ್ಲಿ ನೆಡೆಯಲಿದೆ. ಸಮಾರೋಪ ಕಾರ್ಯಕ್ರಮದ ಭಾಗವಾಗಿ ಚಿತ್ರಕಲಾ ಶಿಬಿರ, ರಂಗನಾಟಕಗಳು, ಬೀದಿನಾಟಕಗಳು, ಜನಪರ ಹಾಗೂ ರಂಗಗೀತೆಗಳ ಗಾಯನ, ವಿಚಾರ ಗೋಷ್ಠಿ ಹಾಗೂ ರಂಗಗೌರವ ಕಾರ್ಯಕ್ರಮಗಳು ನೆಡೆಯಲಿವೆ. ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಹೆಚ್ ಎನ್ ನಾಗಮೋಹನದಾಸ್ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಪ್ರಖ್ಯಾತ ಕಲಾವಿದ ಪ್ರಕಾಶ್ ರೈ ಸಮಾರೋಪದ ಮುಖ್ಯ ಅತಿಥಿಯಾಗಿ ಮಾತನಾಡಲಿದ್ದಾರೆ. ಇನ್ನೂ ಹಲವಾರು ರಂಗಕರ್ಮಿಗಳು ಚಿಂತಕರು ವಿವಿಧ ಕಾರ್ಯಕ್ರಮಗಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ.

You cannot copy content of this page

Exit mobile version