Home ಬ್ರೇಕಿಂಗ್ ಸುದ್ದಿ ಕಾಂತಾರ ವಿರುದ್ಧ ತಿರುಗಿಬಿದ್ದ ದೈವಾರಾಧಕರು ; ದೈವಗಳ ದುರುಪಯೋಗದ ಬಗ್ಗೆ ದೂರು

ಕಾಂತಾರ ವಿರುದ್ಧ ತಿರುಗಿಬಿದ್ದ ದೈವಾರಾಧಕರು ; ದೈವಗಳ ದುರುಪಯೋಗದ ಬಗ್ಗೆ ದೂರು

0

ಕಾಂತಾರ ಸಿನಿಮಾದಲ್ಲಿ ದೈವಾರಾಧನೆ ಬಳಕೆ ಮತ್ತು ನಮ್ಮ ನಂಬಿಕೆಗಳ ದುರುಪಯೋಗ ಆಗಿದೆ ಎಂದು ಕರಾವಳಿ ಭಾಗದ ದೈವಾರಾಧಕರು ದೂರು ನೀಡಿದ್ದಾರೆ. ದೈವಾರಾಧನೆ ಬಳಕೆಯ ವಿರುದ್ಧ ದೈವಾರಾಧಕರು ನೇರವಾಗಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಹಾಗು ದೈವ ನರ್ತನದ ವಿರುದ್ಧ ದೈವನರ್ತಕರು ಹಾಗು ದೈವಾರಾಧಕರು ಅಪಸ್ವರ ಎತ್ತಿದ್ದಾರೆ. ಇದಲ್ಲದೇ ಸಿನಿಮಾ ಬಿಡುಗಡೆ ಬೆನ್ನಲ್ಲೇ ಅನೇಕ ಪ್ರೇಕ್ಷಕರು ದೈವಾರಾಧನೆಯ ಅನುಕರಣೆ ಮಾರುತ್ತಿರುವುದು ಹಾಗು ಮೈಮೇಲೆ ದೆವ್ವ ಬಂದಂತೆ ವಿಕೃತಿ ಮೆರೆಯುತ್ತಿರುವುದು, ದೈವಾರಾಧಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರಿಂದ ಇಂದು (ಅಕ್ಟೋಬರ್ 09) ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ದೈವದ ಎದುರು ಸಿನಿಮಾ ಬಗ್ಗೆ ದೂರು ಸಲ್ಲಿಸಲಾಗುತ್ತಿದೆ. ಹಾಗೂ ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ. ಇದೊಂದು ಪಾರಂಪರಿಕ ನಂಬಿಕೆಯಾಗಿದ್ದು, ಸಿನೆಮಾದಲ್ಲಿ ಈ ಬಗ್ಗೆ ತೋರಿಸಲಾದ ಅಂಶಕ್ಕೂ ದೈವ ಆರಾಧನೆಗೂ ಬಹಳಷ್ಟು ವ್ಯತ್ಯಾಸವಿದೆ ಎಂದು ದೂರಲಾಗಿದೆ.

ಸಿನಿಮಾಗಳಿಂದ ದೈವದ ಆರಾಧನೆಗೆ ಮಹತ್ವ ಸಿಕ್ಕಿತೆಂಬುದು ಸುಳ್ಳು’ ಎಂದು ಕೆಲವರು ದೈವಾರಾಧನೆಯ ಮಹತ್ವವವನ್ನು ಹೇಳಿದ್ದಾರೆ. ‘ಕಾಂತಾರ’ ಸಿನಿಮಾ ಏನೋ ಕೋಟಿ-ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತರ ಭಕ್ತಿ ಮಾರಾಟವಾಯ್ತು’ ಎಂದು ವ್ಯಂಗ್ಯವಾಡಿದ್ದಾರೆ.

You cannot copy content of this page

Exit mobile version