ಲೈಂಗಿಕ ಶಿಕ್ಷಣ ಪ್ರೌಢಶಾಲಾ ಪಠ್ಯಕ್ರಮದ ಭಾಗವಾಗಬೇಕು, ಯೌವ್ವನಕ್ಕೆ ಕಾಲಿಟ್ಟ ಹರೆಯದವರು ತಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನ್‌ಗಳ ಬದಲಾವಣೆ ಬಗ್ಗೆ ಮುಂಚಿತವಾಗಿ ಅರಿವು ಹೊಂದಿದಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅತ್ಯಾಚಾರ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಅಡಿಯಲ್ಲಿ ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ಅವರಿದ್ದ ದ್ವಿಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದೆ.
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು, 9ನೇ ತರಗತಿಯಿಂದ ಆರಂಭವಾಗಬಾರದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಆಲೋಚಿಸಿ, ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು, ಹೀಗಾಗಿ ಮಕ್ಕಳಿಗೆ ಯೌವನದ ಬಳಿಕ ನಡೆಯುವ ದೇಹದ ಬದಲಾವಣೆಗಳು ಹಾಗೂ ಸಂಬಂಧಿತ ಮುಂಜಾಗ್ರತೆ ಬಗ್ಗೆ ತಿಳುವಳಿಕೆ ಸಿಗಲಿ ಎಂದು ಪೀಠ ತಿಳಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ 15 ವರ್ಷದ ಬಾಲಕನಿಗೆ ಷರತ್ತುಗಳ ಮೇಲೆ ಜಾಮೀನು ನೀಡುವಂತೆ ಕೋರ್ಟ್ ನಿರ್ದೇಶಿಸಿತು. ಆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ರೀತಿಯ ಅಭಿಪ್ರಾಯ ಹೊರಹಾಕಿದೆ.