Monday, June 17, 2024

ಸತ್ಯ | ನ್ಯಾಯ |ಧರ್ಮ

“ಹೇಳಲು ಹೆಚ್ಚೇನಿಲ್ಲ..” ಸಾಕರ್ ಜಗತ್ತಿಗೆ ಧನ್ಯವಾದ ತಿಳಿಸಿದ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ

ಮೊರಾಕೊ ವಿರುದ್ಧದ ಆಘಾತಕಾರಿ ಸೋಲಿನ ನಂತರ ಪೋರ್ಚುಗಲ್ಗಾಗಿ ವಿಶ್ವಕಪ್ ಗೆಲ್ಲುವ ಕನಸು ಕೊನೆಗೊಂಡಿದೆ ಎಂದು ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಭಾವನಾತ್ಮಕವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಕತಾರ್ (Qatar) ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್ ಫುಟ್ಬಾಲ್ ಕ್ವಾರ್ಟರ್ ಫೈನಲ್ ನಲ್ಲಿ ಮೊರಾಕೋ ವಿರುದ್ಧದ ಸೋಲಿನ ಬಳಿಕ ದಿಗ್ಬ್ರಮೆಗೊಂಡ ಒಂದು ದಿನದ ನಂತರ ಭಾನುವಾರದ ದಿನ ಕ್ರಿಸ್ಟಿಯಾನೋ ರೊನಾಲ್ಡೋ ಹಾಕಿದ ಒಂದು ಪೋಸ್ಟ್ ಫುಟ್ಬಾಲ್ ಪ್ರೇಮಿಗಳು ಅದರಲ್ಲೂ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳನ್ನು ಭಾವನಾತ್ಮಕವಾಗಿ ದುಃಖತಪ್ತರನ್ನಾಗಿಸಿದೆ.

ಕ್ವಾರ್ಟರ್ ಫೈನಲ್ ನಂತಹ ನಿರ್ಣಾಯಕ ಪಂದ್ಯಕ್ಕಾಗಿ ಬೆಂಚ್ ನಲ್ಲಿ ಇದ್ದ ರೊನಾಲ್ಡೋ ದ್ವಿತೀಯಾರ್ಧದ ಬದಲಿ ಆಟಗಾರನಾಗಿ ಅಂಕಣಕ್ಕೆ ಬಂದರು. ಆದರೆ ಮೊರಾಕೋ ಆಟಗಾರ ಯೂಸೆಫ್ ಎನ್-ನೆಸಿರಿ ಅವರ ಮೊದಲಾರ್ಧದ ಸ್ಟ್ರೈಕ್ ಅದಾಗಲೇ ಮೊರೊಕ್ಕೊವನ್ನು ಸೆಮಿ-ಫೈನಲ್ಗೆ ಕೊಂಡೊಯ್ಯಲು ಸಾಕಾಗಿದ್ದರಿಂದ ರೊನಾಲ್ಡೋ ತನ್ನ ಪ್ರಭಾವ ಬೀರಲು ಮತ್ತು ಪೋರ್ಚುಗಲ್ ನನ್ನು ಸೆಮಿಫೈನಲ್ ಗೆ ಕೊಂಡೊಯ್ಯಲು ವಿಫಲರಾದರು.

ಅದರಂತೆ ಕ್ರಿಸ್ಟಿಯಾನೋ ರೊನಾಲ್ಡೋ ಅವರ ವಯಕ್ತಿಕ ಜಾಲತಾಣದ ಪೋಸ್ಟ್ ನಲ್ಲಿ…
“ಪೋರ್ಚುಗಲ್ಗೆ ವಿಶ್ವಕಪ್ ಗೆಲ್ಲುವುದು ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸಾಗಿತ್ತು. ಅದೃಷ್ಟವಶಾತ್, ನಾನು ಪೋರ್ಚುಗಲ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಆಯಾಮದ ಪ್ರಶಸ್ತಿಗಳನ್ನು ಗೆದ್ದಿದ್ದೇನೆ, ಆದರೆ ನಮ್ಮ ದೇಶದ ಹೆಸರನ್ನು ವಿಶ್ವದಲ್ಲೇ ಉನ್ನತ ಮಟ್ಟದಲ್ಲಿ ಇಡುವುದು ನನ್ನ ದೊಡ್ಡ ಕನಸಾಗಿತ್ತು” ಎಂದು ರೊನಾಲ್ಡೊ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಮುಂದುವರಿದು “ನಾನು ಅದಕ್ಕಾಗಿ ಹೋರಾಡಿದೆ. ಈ ಕನಸು ಸಾಕಾರಗೊಳಿಸಲು ನಾನು ಕಠಿಣವಾಗಿ ಹೋರಾಡಿದೆ. 16 ವರ್ಷಗಳ ನನ್ನ ವೃತ್ತಿ ಜೀವನದ ವಿಶ್ವಕಪ್‌ನಲ್ಲಿ ಗಳಿಸಿದ 5 ಉಪಸ್ಥಿತಿಗಳಲ್ಲಿ, ಯಾವಾಗಲೂ ಶ್ರೇಷ್ಠ ಆಟಗಾರರೊಂದಿಗೆ ಮತ್ತು ಲಕ್ಷಾಂತರ ಪೋರ್ಚುಗೀಸ್ ಜನರ ಬೆಂಬಲದೊಂದಿಗೆ, ನಾನು ನನ್ನ ಎಲ್ಲವನ್ನೂ ನೀಡಿದ್ದೇನೆ. ನಾನು ಮೈದಾನದಲ್ಲಿ ಎಲ್ಲವನ್ನೂ ಬಿಟ್ಟುಬಿಟ್ಟೆ. ನಾನು ಎಂದಿಗೂ ನನ್ನ ಮುಖವನ್ನು ಹೋರಾಟದ ಕಡೆಗೆ ತಿರುಗಿಸಲಿಲ್ಲ ಮತ್ತು ನಾನು ಆ ಕನಸನ್ನು ಎಂದಿಗೂ ಬಿಡಲಿಲ್ಲ.” ಎಂದು ತಿಳಿಸಿದ್ದಾರೆ.

ಆದಾಗ್ಯೂ, 37 ವರ್ಷ ವಯಸ್ಸಿನ ರೊನಾಲ್ಡೋ ತಮ್ಮ ಭವಿಷ್ಯದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.

“ದುರದೃಷ್ಟವಶಾತ್, ನಿನ್ನೆ ನನ್ನ ಎಲ್ಲಾ ಕನಸು ಕೊನೆಗೊಂಡಿತು. ಇದನ್ನು ಉದ್ವೇಗಬರಿತವಾಗಿ ಹೇಳುವುದು ಈ ಸಂದರ್ಭದಲ್ಲಿ ಅಷ್ಟು ಸಮಂಜಸವಲ್ಲ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ, ಈಗಾಗಲೇ ಬಹಳಷ್ಟು ಹೇಳಲಾಗಿದೆ, ಬಹಳಷ್ಟು ಬರೆಯಲಾಗಿದೆ, ಹೆಚ್ಚು ಊಹಿಸಲಾಗಿದೆ, ಆದರೆ ಪೋರ್ಚುಗಲ್ಗೆ ನನ್ನ ಸಮರ್ಪಣೆಯು ಒಂದು ಕ್ಷಣವೂ ಆಚೀಚೆ ಆಗಿಲ್ಲ. ಪ್ರತಿಯೊಬ್ಬರ ಗುರಿಗಾಗಿ ಯಾವಾಗಲೂ ಹೋರಾಡಿದೆ. ಮತ್ತು ನನ್ನ ತಂಡದ ಸದಸ್ಯರು ಮತ್ತು ನನ್ನ ದೇಶಕ್ಕೆ ನಾನು ಎಂದಿಗೂ ಬೆನ್ನು ತಿರುಗಿಸಿಲ್ಲ.”

“ಸದ್ಯಕ್ಕೆ, ಹೇಳಲು ಹೆಚ್ಚೇನೂ ಇಲ್ಲ. ಧನ್ಯವಾದಗಳು, ಪೋರ್ಚುಗಲ್. ಧನ್ಯವಾದಗಳು, ಕತಾರ್. ಕನಸು ಇದ್ದಾಗಲೂ ಸುಂದರವಾಗಿತ್ತು. ಈಗ, ಉತ್ತಮ ಸಲಹೆಗಾರರಾಗಿ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವ ಸಮಯ,” ಅವರು ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಭಾವನಾತ್ಮಕವಾಗಿ ತಮ್ಮ ಜಾಲತಾಣದ ಪೋಸ್ಟ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಪೋರ್ಚುಗಲ್ ಮಾತ್ರವಲ್ಲದೆ, ವಿಶ್ವದಾದ್ಯಂತ ಬಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಈ ಪೋಸ್ಟ್ ಗೆ ವಿಶ್ವದ ದೊಡ್ಡ ದೊಡ್ಡ ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ ರೊನಾಲ್ಡೋ ಪಂದ್ಯ ಸೋತರೂ ಅಭಿಮಾನಿಗಳಿಂದ ಮತ್ತೊಮ್ಮೆ ಪ್ರೀತಿಯ ತಬ್ಬುಗೆ ಪಡೆದುಕೊಂಡಿದ್ದಾರೆ. ನಿರ್ಣಾಯಕ ಹಂತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಶ್ರಮ ವಹಿಸಬಹುದು, ಅದನ್ನು ಮೀರಿದ ಶ್ರಮ ನಿಮ್ಮದು ಎಂಬ ಪ್ರೀತಿಯ ಮಾತುಗಳನ್ನು ಪಡೆದುಕೊಂಡಿದ್ದಾರೆ.

ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಕೂಡಾ ರೊನಾಲ್ಡೋ ಬಗೆಗಿನ ತಮ್ಮ ಫೇಸ್ಬುಕ್ ಪೋಸ್ಟ್ ಕೂಡಾ ಅತ್ಯಂತ ಆಪ್ತವೆನಿಸಿದೆ. “ಯಾವುದೇ ಟ್ರೋಫಿ ಅಥವಾ ಯಾವುದೇ ಶೀರ್ಷಿಕೆಯು ನೀವು ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತದ ಕ್ರೀಡಾಭಿಮಾನಿಗಳಿಗೆ ಏನು ಮಾಡಿದ್ದೀರಿ ಎಂಬುದರಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ. ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ಯಾವುದೇ ಶೀರ್ಷಿಕೆಯಿಂದ ವಿವರಿಸಲು ಸಾಧ್ಯವಿಲ್ಲ ಮತ್ತು ನೀವು ಆಡುವುದನ್ನು ನಾವು ನೋಡಿದಾಗ ನಾನು ಮತ್ತು ಪ್ರಪಂಚದಾದ್ಯಂತದ ಅನೇಕರು ಏನನಿಸುತ್ತದೆ ಎಂಬುದನ್ನು ವಿವರಿಸಲೂ ಸಾಧ್ಯವಿಲ್ಲ. ಅದು ದೇವರ ಕೊಡುಗೆ. ಪ್ರತಿ ಬಾರಿಯೂ ತನ್ನ ಹೃದಯದಿಂದ ಆಡುವ ವ್ಯಕ್ತಿಗೆ ನಿಜವಾದ ಆಶೀರ್ವಾದ ಮತ್ತು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿರೂಪವಾಗಿದೆ ಮತ್ತು ಯಾವುದೇ ಕ್ರೀಡಾಪಟುವಿಗೆ ನಿಜವಾದ ಸ್ಫೂರ್ತಿಯಾಗಿದೆ. ನೀವು ನನಗೆ ಸಾರ್ವಕಾಲಿಕ ಶ್ರೇಷ್ಠರು.” ಎಂದು ವಿರಾಟ್ ಕೊಹ್ಲಿ ತಮ್ಮ ಅಭಿಮಾನ ಮೆರೆದಿದ್ದಾರೆ.

ತನ್ನ ಐದನೇ ಮತ್ತು ಬಹುಶಃ ತನ್ನ ಕೊನೆಯ ವಿಶ್ವಕಪ್‌ನಲ್ಲಿ ಆಡುತ್ತಿರುವ ರೊನಾಲ್ಡೊ, ಇಷ್ಟು ವರ್ಷಗಳಲ್ಲಿ ತಮ್ಮನ್ನು ಬೆಂಬಲಿಸಿದ ಪೋರ್ಚುಗೀಸ್ ಜನರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು