Friday, June 28, 2024

ಸತ್ಯ | ನ್ಯಾಯ |ಧರ್ಮ

ದೇವರ ಹೆಸರಲ್ಲಿ ನಡೆಯುವ ಮಹಿಳಾ ಲೈಂಗಿಕ ದೌರ್ಜನ್ಯಗಳ ಕನ್ನಡಿ ಈ “ಮಹಾರಾಜ” ಮೂವಿ

ಅಮೀರ್ ಖಾನ್ ರ ಮಗ, ಜುನೈದ್ ಖಾನ್ ಅಭಿನಯದ ಚೊಚ್ಚಲ ಚಿತ್ರವಾದ ಮಹಾರಾಜ OTT ಅಲ್ಲಿ ಬಿಡುಗಡೆಯಾಗಿದೆ. ಮಹಾರಾಜ ಚಿತ್ರ 1832-1875ರಲ್ಲಿ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ,ಹೋರಾಡಿದ್ದ ಕರ್ಸಂದಾಸ್ ಮುಲ್ಜಿ ರವರ ಜೀವನ ಆಧಾರಿತ ಚಿತ್ರವಾಗಿದೆ.

ಧರ್ಮ ಮತ್ತು ರಿಲಿಜಿನ್ ಬೇರೆಯೇ.ಆದರೆ ಭಾರತದಲ್ಲಿ ನಾವು ಧರ್ಮ ಮತ್ತು ರಿಲಿಜಿಯನ್ ಜೊತೆಯಾಗಿಯೇ ನೋಡುತ್ತೇವೆ. ಧರ್ಮದ ಹೆಸರಲ್ಲಿ ಶೋಷಣೆಗಳು ಸಾಮಾಜಿಕವಾಗಿ ಒಪ್ಪಿತವಾಗಿ ಬೇರೂರಿವೆ. ಅದರಲ್ಲಿನ ಕೊಳಕುಗಳನ್ನು ಪ್ರಶ್ನೆ ಮಾಡುವುದು, ಸಹನಶೀಲತೆ ಕಡಿಮೆ ಆಗಿರುವ ಸಂದರ್ಭದಲ್ಲಿ ಕ್ರಾಂತಿಯೇ ಸರಿ.

ಹಿಂದೆ ಸತಿ ಸಹಗಮನ ಪದ್ದತಿ, ಒಂದೆಡೆ ವಿಧವಾ ಮರು ವಿವಾಹಕ್ಕೆ ಅವಕಾಶವೇ ಇರಲಿಲ್ಲ.ಇನ್ನೂ ಧರ್ಮದ ಬ್ರೋಕರ್ ಜನರ ಭಾವನೆಗಳನ್ನು ಬಂಡವಾಳವಾಗಿಸಿಕೊಂಡು ತಾನೇ ದೇವರ ಪ್ರತಿರೂಪವೆಂದು ಮೆರೆಯುತ್ತಿದ್ದರು. ಮುಗ್ಧ ಜನರ ಭಕ್ತಿಯನ್ನೇ ಅಸ್ತ್ರ ಮಾಡಿಕೊಂಡು ತನ್ನ ಮಂಚದವರೆಗೂ ಮಹಿಳೆಯರನ್ನು ಕರೆತಂದು ಸೇವೆ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಮಾಡುತ್ತಿರುವುದು ಇವತ್ತಿಗೂ ಭಾರತದ ಅಲ್ಲಲ್ಲಿ ಸುದ್ಧಿಯಾಗುವದನ್ನು ಕಾಣಬಹುದು.

ಇದೇ ರೀತಿಯಾಗಿ ವೈಷ್ಣವ ಸಮಾಜದಲ್ಲಿ ಕೃಷ್ಣನ ಪ್ರತಿರೂಪ ನಾನೆಯೆಂದು 18ನೇ ಶತಮಾನದಲ್ಲಿ ಬಾಂಬೆಯಲ್ಲಿದ್ದ ಹವೇಲಿಯ ಮಹಾರಾಜ ಎಂಬುವನ ಜೊತೆಗೆ, ಕರ್ಸಂದಾಸ್ ಮುಲ್ಜಿಯ ನಡುವಿನ ಬಾಂಬೆಯ ಸುಪ್ರೀಂ ಕೋರ್ಟ್‌ನಲ್ಲಿ 1862 ರ ಪ್ರಸಿದ್ಧ ಮಹಾರಾಜ್ ಮಾನಹಾನಿ ಪ್ರಕರಣದ ಚರ್ಚೆಯೂ ಮಹಾರಾಜ ಚಿತ್ರದ ಮೂಲವಾಗಿದೆ.

ಇಲ್ಲಿನ ಅನೇಕ ದೃಶ್ಯಗಳು ಮನ ಕಲಕುತ್ತದೆ.
ಅವತ್ತಿನ ಸಾಮಾಜಿಕ,ಧಾರ್ಮಿಕ ವಸ್ತುಸ್ಥಿತಿಯನ್ನ ಪ್ರತಿಬಿಂಬಿಸುತ್ತದೆ. ಕರ್ಸಂದಾಸ್ ಮುಲ್ಜಿ ಎಂಬ ಯುವಕ ಡಿ.ಉಮಾಪತಿ ಹೇಳುವಂತೆ ಪ್ರಶ್ನಿಸುವುದು ನ್ಯಾಯ ಸಮ್ಮತವೆಂದು ಅವನು ನಂಬಿದ್ದ.ತಾನು ನೋಡುವ ,ಕೇಳುವ ಆಚಾರ ವಿಚಾರ,ಸಂಪ್ರದಾಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಹೋಗುತ್ತಾನೆ.

ಚಿಕ್ಕವನು ಇದ್ದಾಗ ತಂದೆ,ತಾಯಿ ಜೊತೆಗೆ ದೇವಸ್ಥಾನಕ್ಕೆ ಹೋದಾಗ ತಾಯಿ ಮೆಟ್ಟಿಲಿನಲ್ಲಿ ಎಡವುತ್ತಲೇ ಆಗ ಅಮ್ಮ ಗುಂಗಾಟ್ (ಮುಖ ಕಾಣದಂತೆ ಮುಚ್ಚಿಕೊಳ್ಳುವ ಸೆರಗು) ಯಾಕೆ ಹಾಕಬೇಕು ಅಂತ ತಂದೆಯನ್ನು ಪ್ರಶ್ನೆ ಮಾಡ್ತಾನೆ.ತಂದೆ ಮಹಿಳೆಯರಿಗೆ ಬೇರೆಯವರ ದೃಷ್ಟಿ ಬೀಳದಂತೆ ತಡೆಯಲು ಅಂತ ಹೇಳಿದಾಗ ಪಪ್ಪಾ ತಮ್ಮದೇ ದೃಷ್ಟಿ ಕಾಣದ ಇಂತಹ ಗುಂಗಾಟ್ ನಿಂದಾ ಅವರಿಗೇನು ಲಾಭ! ಎಂದಾಗ ಅಪ್ಪ ಮೌನಕ್ಕೆ ಶರಣಾಗುತ್ತಾರೆ. ದೇವರಿಗೆ ಗುಜರಾತಿ ಬರುತ್ತೆಯೇ? ವಲ್ಲಭ ದೇವರು ನಮ್ಮೂರಿನವರೆ ಎಂದು ಮಗು ಕೇಳಿದಾಗ ಅವರಿಗೆಲ್ಲ ಉತ್ತರವೇ ಇರುವುದಿಲ್ಲ. ಹೀಗೆ ಕರಸನ್ ಬೆಳೆಯುತ್ತಾ ಅವನ ಆಲೋಚನೆ ಮತ್ತು ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ.

ಮದುವೆಯ ಗೊತ್ತು ಮಾಡಿದ್ದ ಹುಡುಗಿ ಕೃಷ್ಣನ ಭಕ್ತೆ.ಹೋಳಿಯ ದಿನ ಬಣ್ಣ ಆಡಿದ ಮೇಲೆ ಮಹಾರಾಜ ಹೆಸರಿನ ಹವೇಲಿಯ (ರಾಜ ಪುರೋಹಿತ) ಕರಸನ್ ಮದುವೆ ಆಗಬೇಕಿದ್ದ ಹುಡುಗಿಯನ್ನು ಚರಣ ಸೇವೆಗೆ ಆಯ್ಕೆ ಮಾಡುತ್ತಾನೆ. ಅವಳು ಕೂಡ ಪ್ರಿಯತಮನಗಿಂತ ಮಹಾರಾಜಾ ದೊಡ್ಡವರು,ಪ್ರೀತಿಗಿಂತ ಧರ್ಮವೇ ಮುಖ್ಯ ಎಂದು ತುಂಬಾ ಶ್ರದ್ಧೆಯಿಂದ ನಂಬಿದ್ದ ಹುಡುಗಿ.

ಚರಣಸೇವೆ (ಕಾಲು ಸೇವೆ) ಮಾಡುವುದು ನಿನಗೆ ಸಿಕ್ಕಿರುವುದು, ಅವರ ಚಿಕ್ಕಮ್ಮನೇ ನೀನು ಅದೃಷ್ಟವಂತೆ ಅಂತ ಹೇಳುತ್ತ, ಮಹಾರಾಜ ನ ಮಂಚದ ಕೋಣೆಗೆ ಬಿಟ್ಟು ಹೋಗುತ್ತಾಳೆ.ಕರಸನ್ ಪ್ರಿಯತಮೆಯನ್ನು ಹುಡುಕುತ್ತಿರುವಾಗ ತಿಳಿಯುತ್ತೆ ಸೇವೆಗೆ ಹೋಗಿದ್ದಳೆಂದು.ಏನೆಂದು ನೋಡಲು ಬರುತ್ತಾನೆ.ಮಹಾರಾಜ ಸೇವೆಯ ಹೆಸರಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ನೋಡಲು ದುಡ್ಡು,ಬಂಗಾರ ಕೊಟ್ಟು ನೋಡಲು ಬಾಲ್ಕನಿ ಇರುತ್ತೆ.ಪುರುಷರ ದಂಡೆ ಅಲ್ಲಿರುತ್ತೆ. ಇವನಿಗೆ ಇದನ್ನು ನೋಡಿ ಕೆಂಡ ಮಂಡಲವಾಗಿ ಕೋಣೆಗೆ ಹೋದರೆ ಅವನ ಪ್ರೇಯಸಿ ಕೂಡ ಅವನೊಂದಿಗೆ ಬರುವುದಿಲ್ಲ.ಯಾಕಂದ್ರೆ ಇದು ದೇವರ ಸೇವೆ ಇದರಿಂದ ಒಳ್ಳೇದಗುತ್ತೇ ಎಂಬ ಅಂಧತೆಯನ್ನು ಈಗಾಗಲೇ ಸಮಾಜ ಮತ್ತು ಪಾಕಂಡಿ ಸ್ವಾಮಿಗಳು ತಲೆಗೆ ತುಂಬಿರುತ್ತಾರೆ.

ಕೊನೆಗೆ ಆಕೆಗೆ ತನ್ನ ಅಂಧ ಶ್ರದ್ಧೆಯ ಅರಿವು ಆಗುತ್ತೆ. ಆ ಗಿಲ್ಟಿಯಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾಳೆ.ಎಲ್ಲ ಪುರುಷರು ಮದುವೆಗಿಂತ ಮುಂಚೆ ತಮ್ಮ ಹೆಂಡತಿ,ಮಗಳನ್ನು ಆತನ ಬಳಿಗೆ ಕಳಿಸಿಬೇಕಿತ್ತು.ಇದು ಸಂಪ್ರದಾಯ ಅದನ್ನು ಪ್ರಶ್ನೆ ಮಾಡುವುದು ಮತ್ತು ವಿರುದ್ಧ ನಡೆಯುವುದು ಪಾಪ ಮತ್ತು ಆ ಧರ್ಮವೆಂದು ನಂಬಿದ್ದರು.

ಇದರ ಕುರಿತು ಕರಸನ್ ಮುಲ್ಜಿ ಬರೆಯುತ್ತಾನೆ.ದಾದಬಾಯಿ ನವರೋಜಿ ನೇರವಾಗಿ ಬರೆಯಲು ಭಯ ಪಡುವ ಸಂದರ್ಭದಲ್ಲಿ ಇವನು ಸತ್ಯ ಪ್ರಕಾಶವೆಂಬ ವಾರ ಪತ್ರಿಕೆ ಆರಂಭ ಮಾಡಿ. ಧರ್ಮ ಹೆಸರಲ್ಲಿ ನಡೆಯುತ್ತಿದ್ದ ಈ ಲೈಂಗಿಕ ಶೋಷಣೆಯ ವಿರುದ್ಧ,ವಿಧವಾ ಪುನರ ವಿವಾಹ,ಜಾತಿ ತಾರತಮ್ಯದ ಕುರಿತು ನಿರರ್ಗಳವಾಗಿ ಹರಿತವಾಗಿ ಪತ್ರಿಕೆಯಲ್ಲಿ ಬರೆದು ಜನಜಾಗೃತಿ ಮೂಡಿಸಲು ಮುಂದಾಗುತ್ತಾನೆ.

ಇದರಿಂದ ಕೋಪಗೊಂಡ ಮಹಾರಾಜ ಅವನ ಮೇಲೆ 50 ಸಾವಿರದ ಮಾನಹಾನಿ ಮೊಕದ್ದಮೆ ಹೂಡುತ್ತಾನೆ.ತನ್ನ ಶಕ್ತಿ ಮೀರಿ ಸಾಕ್ಷಿ ನಾಶ,ಪತ್ರಿಕೆಗೆ ತೊಂದ್ರೆ ಕೊಟ್ಟು ಸುಟ್ಟು ಹಾಕಿಸುತ್ತಾನೆ. ಕೋರ್ಟ್ ಅಲ್ಲಿ ಮೊಕದ್ದಮೆ ನಡೆಯುತ್ತೆ.ಅದರಲ್ಲಿ ಕರಸನ್ ಎತ್ತುವ ಪ್ರಶ್ನೆಗಳು ಮಹಾರಾಜನಿಗೆ ಅಪರಾಧಿಯನ್ನಾಗಿ ಮಾಡಿಸುತ್ತೆ.ಈ ಕೇಸ್ ನಿಂದಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆ ಜನ ಸಾಮಾನ್ಯರಿಗೆ ಮೂಡಲು ಅರಂಭವಾಗುತ್ತೆ.

ನಿಜವಾದ ಭಕ್ತನು ಯಾರು? ಯಾರು ಪ್ರಶ್ನೆ ಮಾಡುತ್ತಾನೆ ಅವನು,ನಿಜವಾದ ಧರ್ಮ ಭಕ್ತನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು. ಉತ್ತರಿಸದೆ ಹೋದಲ್ಲಿ ಅದು ಧರ್ಮವೇ ಅಲ್ಲ ಎಂಬ ಈತರಹದ ವೈಚಾರಿಕ ಸಂಭಾಷಣೆಗಳು ಚಿತ್ರದ ಉದ್ದಕ್ಕೂ ಸಿಗುತ್ತವೆ. ಚಿತ್ರ ನಿಧನಾಗಿ ಸಾಗಿದರು ನೋಡುಗರನ್ನು ಹಿಡಿದಿಡುತ್ತೆ.
ಅನೇಕ ಪ್ರಶ್ನೆಗಳನ್ನು ನಮ್ಮುಂದಿಡುತ್ತದೆ.ಧರ್ಮದ ಪರಿಕಲ್ಪನೆಯನ್ನು ಹೇಗೆ ಪೂಜಾರಿಗಳು ರಾಂಗ್ ನಂಬರ್ ಮೂಲಕ ತಪ್ಪಾಗಿ ಅರ್ಥೈಸಿ ಜನರನ್ನು ವಂಚಿಸಿ ಅಂಧತೆಯಲ್ಲಿ ಜೀವಿಸಲು ಪ್ರೇರೇಪಣೆ ನೀಡುತ್ತಾ ಬರುತ್ತಿದ್ದಾರೆಂದು ಈ ಚಿತ್ರ ಅರಿವು ಮೂಡಿಸುತ್ತೆ.

ಹಳೆಯ ಆಚರಣೆ ಸಂಪ್ರದಾಯಗಳು ಹಳೆವೆಂದು ಒಪ್ಪದೇ,ತಾರ್ಕಿಕವಾಗಿ ಪ್ರಶ್ನಿಸಿ ಮಾನವೀಯ ಮೌಲ್ಯಗಳನ್ನು,ಘನತೆಯ ವಿಚಾರಗಳನ್ನು ಮುಂದುವರೆಸಿ,ಶೋಷಿತ ವಿಚಾರಗಳನ್ನು ಧಿಕ್ಕರಿಸಬೇಕು.ಅನ್ಯಾಯ,ಶಿಷಣೆಗಳ ವಿರುದ್ಧ ನಿರ್ಭಯವಾಗಿ ಪ್ರಶ್ನೆ ಮಾಡಲೇ ಬೇಕು. ಸತ್ಯವಂತ,ಧೈರ್ಯವಂತ ಒಬ್ಬ ವ್ಯಕ್ತಿಯು ತುಂಬಾ ದುಬಾರಿ ಆಗುತ್ತಾನೆ.ಎಂಬುದು ಈ ಚಿತ್ರದಿಂದ ಕಲಿಯಬಹುದು.

M.K ಸಾಹೇಬ್ ನಾಗೇಶನಹಳ್ಳಿ

Related Articles

ಇತ್ತೀಚಿನ ಸುದ್ದಿಗಳು