ತಿಥಿ ಸಿನಿಮಾದ ಮೂಲಕ ರಾಜ್ಯದಾದ್ಯಂತ ಖ್ಯಾತಿ ಪಡೆದಿದ್ದ ಸಂಗ್ರೇಗೌಡ ಅಲಿಯಾಸ್ ‘ಸೆಂಚೂರಿ ಗೌಡ’ ಅವರು ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲು ಗ್ರಾಮದಲ್ಲಿ ವಾಸವಾಗಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ರಾತ್ರಿ ವಿಧಿವಶರಾದರು.
ತಿಥಿ ಸಿನಿಮಾದಲ್ಲಿ ಅಭಿನಯಿಸಿ ‘ಸೆಂಚೂರಿ ಗೌಡ’ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಸಂಗ್ರೇಗೌಡ ಅವರ ನಿಧನ ಸುದ್ದಿ ನೋವಿನ ಸಂಗತಿ ಎಂದು ಕಲಾವಿದರು ತಿಳಿಸಿದ್ದಾರೆ. ಸರಳ ಗ್ರಾಮೀಣ ಹಿನ್ನೆಲೆಯ ವ್ಯಕ್ತಿಯಾಗಿದ್ದರೂ ತಮ್ಮ ಸಹಜ ಅಭಿನಯದ ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದರು.
ಸೆಂಚೂರಿ ಗೌಡ ಅವರ ಅಂತ್ಯ ಸಂಸ್ಕಾರ ಇಂದು ಸಿಂಗ್ರೇಗೌಡನ ಕೊಪ್ಪಲು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚೆಗೆ ತಿಥಿ ಸಿನಿಮಾದ ಮತ್ತೊಬ್ಬ ಪ್ರಮುಖ ಪಾತ್ರಧಾರಿ ಗಡ್ಡಪ್ಪ ಅವರೂ ನಿಧನರಾಗಿದ್ದು, ಒಂದೇ ಸಿನಿಮಾದ ಕಲಾವಿದರ ಸರಣಿ ಅಗಲಿಕೆ ನೋವಿನ ವಾತಾವರಣ ನಿರ್ಮಿಸಿದೆ.
