Home ಬ್ರೇಕಿಂಗ್ ಸುದ್ದಿ ಜಮ್ಮು : ಗುಂಡಿನ ದಾಳಿಗೆ ಮೂವರು ಪೊಲೀಸರು, ಮೂವರು ಭಯೋತ್ಪಾದಕರ ಸಾವು

ಜಮ್ಮು : ಗುಂಡಿನ ದಾಳಿಗೆ ಮೂವರು ಪೊಲೀಸರು, ಮೂವರು ಭಯೋತ್ಪಾದಕರ ಸಾವು

0

ಜಮ್ಮುವಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಜಮ್ಮು ಕಾಶ್ಮೀರ ಪೊಲೀಸರು ಮತ್ತು ಮೂವರು ಶಂಕಿತ ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜಮ್ಮು ವಿಭಾಗದ ಕಥುವಾ ಜಿಲ್ಲೆಯ ಸುಫೈನ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿಕೊಂಡಿದ್ದ ಬಂದೂಕುಧಾರಿಗಳ ಗುಂಡಿನ ದಾಳಿಗೆ ಒಳಗಾಗಿದ್ದಾರೆ. ಗುರುವಾರ ನಡೆದ ಈ ಚಕಮಕಿಯಲ್ಲಿ ಈ ಘಟನೆ ನಡೆದಿದೆ.

ಚಕಮಕಿಯಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದಲ್ಲದೇ, ಈ ಭಾಗದ ಡಿಎಸ್ಪಿ ಧೀರಜ್ ಕಟೋಚ್, ಇತರ ಇಬ್ಬರು ಪೊಲೀಸರು ಮತ್ತು 1 ವಿಶೇಷ ಪಡೆಯ ಒಬ್ಬ ಸೇನಾ ಸೈನಿಕ ಗಾಯಗೊಂಡಿದ್ದಾರೆ. ಪೊಲೀಸರು ಈ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಮೃತ ಪೊಲೀಸರಲ್ಲಿ ಒಬ್ಬ ಹೆಡ್ ಕಾನ್‌ಸ್ಟೆಬಲ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಗುರುವಾರ ತಡರಾತ್ರಿ ವರೆಗೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ. ಹಲವು ಗಂಟೆಗಳ ಕಾಲ ಮೃತ ಪೊಲೀಸರ ಶವಗಳನ್ನು ಇನ್ನೂ ಸ್ಥಳದಿಂದ ಸ್ಥಳಾಂತಗೊಳಿಸಿರಲಿಲ್ಲ.

ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಕಥುವಾ ಮತ್ತು ಜಮ್ಮು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ವರದಿಯ ಪ್ರಕಾರ ಗಾಯಗೊಂಡ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

You cannot copy content of this page

Exit mobile version