Thursday, December 26, 2024

ಸತ್ಯ | ನ್ಯಾಯ |ಧರ್ಮ

ಉತ್ತಮ ಸಮಾಜ ಕಟ್ಟಲು ಎಲ್ಲಾರು ಸಾಕ್ಷರರನ್ನಾಗಿ ಮಾಡಬೇಕು – ಅಹಮದ್ ಹಗರೆ


ಹಾಸನ:
ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮತ್ತು ಸಹಕಾರ ಮನೋಭಾವವುಳ್ಳ ಸಮಾಜವೊಂದನ್ನು ಕಟ್ಟಲು ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು. ಅತ್ಯಂತ ಅಗತ್ಯವಾಗಿದೆ. ನಮಗಿಂತಲೂ ತಡವಾಗಿ ಸ್ವತಂತ್ರಗೊಂಡ ದೇಶಗಳು ಇಂದು ಆರ್ಥಿಕವಾಗಿ ಮುಂದುವರೆದಿರಲು ಕಾರಣ ಅವರು ಅನುಸರಿಸಿದ ಜನ ಸಾಕ್ಷರತೆ. ಸಾಮಾನ್ಯ ಜನರು ಜಲಸಾಕ್ಷರತೆ, ಪರಿಸರ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ರಾಜಕೀಯ ಸಾಕ್ಷರತೆ ಮತ್ತು ಅಕ್ಷರ ಸಾಕ್ಷರತೆಗಳಲ್ಲಿ ಸಾಕ್ಷರರಾಗದ ಹೊರತು ಅವರು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಅಭಿಪ್ರಾಯ ಪಟ್ಟರು.


ಇತ್ತೀಚಿಗೆ ಹಾಸನ ನಗರದ ಬಿಜಿವಿಎಸ್ ಕಚೇರಿಯಲ್ಲಿ ಜಿಲ್ಲಾ ಬಿಜಿವಿಎಸ್ ಹಮ್ಮಿಕೊಂಡಿದ್ದ ಬಿಜಿವಿಎಸ್ ಸಂಸ್ಥಾಪನಾ ದಿನದಲ್ಲಿ `ಸಮಾಜ ಬದಲಾವಣೆಗಾಗಿ ವಿಜ್ಞಾನ' ಕುರಿತು ಮಾತನಾಡಿ, ಭಾರತ ಸ್ವತಂತ್ರಗೊAಡ ನಂತರ ಅದು ಹಾಕಿಕೊಂಡ ಗುರಿ ಭಾರತವನ್ನು ಸಮಾಜವಾದಿ ರಾಷ್ಟçವನ್ನಾಗಿ ನಿರ್ಮಿಸುವುದು ಇದಕ್ಕಾಗಿ ಭಾರತ ಕಂಡುಕೊಂಡ ಮಾರ್ಗ ಜನಸತ್ತಾತ್ಮಕ ಮಾರ್ಗ ಆದರೆ ಈ ಪ್ರಜಾಪ್ರಭುತ್ವ ತನ್ನ ಹಾದಿಯಲ್ಲಿ ಇಪ್ಪತ್ತೆöÊದೇ ವರ್ಷಗಳಲ್ಲಿ ಪಾಳೆಗಾರಿ, ಜಾತಿವಾದಿ ಮಾರ್ಗದತ್ತ ಹೊರಳಿ ನಿಂತಿತು ಮತ್ತೆ ಈ ಹೊರಳು ಹಾದಿಯನ್ನು ಜನಸತ್ತಾತ್ಮಕ ಹಾದಿಗೆ ಕೊಂಡೊಯ್ಯಲು ಹೊಸಪೀಳಿಗೆಯಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬಿತ್ತಬೇಕಾಗಿದೆ ಎಂದು ತಿಳಿಸಿದ ಅವರು ಬಿಜಿವಿಎಸ್ ಕಳೆದ 36ವರ್ಷಗಳಲ್ಲಿ ಇದನ್ನು ಬÀಹುಮುಖಿನೆಲೆಯಲ್ಲಿ ಮಾಡುತ್ತಿದೆ ಆದರೆ ಅದರ ಕಾರ್ಯಕ್ಷಮತೆ ಹೆಚ್ಚಾಗಲು ಜನರನ್ನು ಹೆಚ್ಚಾಗಿ ಪಾಳ್ಗೊಳಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ, 1984 ಡಿಸೆಂಬರ್ 3 ಭಾರತವನ್ನು ತಲ್ಲಣಗೊಳಿಸಿದ ಭೂಪಾಲ್ ದುರಂತದ ಕ್ಷಣದಲ್ಲಿ 2000ಕ್ಕೂ ಅಧಿಕ ಸಾವು, 50ಸಾವಿರಕ್ಕೂ ಅಧಿಕ ಜನ ತೀವ್ರ ಗಾಯದಿಂದಾಗಿ ಊರನ್ನೇ ತ್ಯಜಿಸುವ ಸ್ಥಿತಿ, ನಂತರದ ದಿನಗಳಲ್ಲಿ ಇದರಿಂದ 22ಸಾವಿರಕ್ಕೂ ಅಧಿಕ ಸಾವು ಭಾರತವನ್ನು ಜರ್ಜರಿತ ಗೊಳಿಸಿಬಿಟ್ಟಿತ್ತು ಈ ದುರಂತದ ಹಿನ್ನಲೆಯಲ್ಲಿ ಜನರಿಗೆ ತಮ್ಮ ಜೀವ ರಕ್ಷಣೆಗೆ ವಿಜ್ಞಾನದ ಜ್ಞಾನ ತಿಳಿಸಿ ಕೊಡಲಿಕ್ಕಾಗಿ ಎಲ್ಲ ವಿಜ್ಞಾನ ಸಂಘಟನೆಗಳ ನೇತೃತ್ವದಲ್ಲಿ 1987ರಲ್ಲಿ ಬಿಜೆವಿಜೆ ಜಾಥಾ(ಭಾರತ ಜ್ಞಾನ ವಿಜ್ಞಾನ ಜಾಥಾ)ಫಲಶೃತಿ ಭಾರತ ಮೂಢನಂಬಿಕೆ, ಅಂಧಕಾರ, ಬಡತನ ಮತ್ತು ಸಾಕ್ಷರವಾಗಿ ಹಿಂದುಳಿದಿದೆ ಎಂಬ ಅರಿವಿಗೆ ಬಂತು ಜನರ ಈ ಅನಿಷ್ಠಗಳನ್ನ ನಿರ್ಮೂಲನಗೊಳಿಸಲು ಮೊದಲು ಜನರನ್ನು ಸಾಕ್ಷರರನ್ನಾಗಿಸುವುದೇ ಆದ್ಯತೆಯಾಗಬೇಕು ಆಮೂಲಕ ವಿಜ್ಞಾನ ಜ್ಞಾನ ತುಂಬಬೇಕು ಎಂಬ ತೀರ್ಮಾನಕ್ಕೆ ಬಂದು 1989ರ ಡಿಸೆಂಬರ್22ರಂದು ಬಿಜಿವಿಎಸ್ ಸಂಸ್ಥಾಪನೆಯಾಯಿತು ಎಂದು ಬಿಜಿವಿಎಸ್ ಸ್ಥಾಪನೆ ಆದ ಹಿನ್ನಲೆ ತಿಳಿಸಿ ಕಳೆದ 36ವರ್ಷಗಳಿಂದ ನೂರಾರು ವಿಜ್ಞಾನಿಗಳು, ಸಾವಿರಾರು ತಂತ್ರಜ್ಞರು, ಲಕ್ಷಾಂತರ ಶಿಕ್ಷಕರು, ಯುವಕರು ಸ್ವಯಂಪ್ರೇರಣೆಯಿಂದ ಈ ವಿಜ್ಞಾನಾಂದೋಲನಗಳಲ್ಲಿ ಭಾಗವಹಿಸಿ ಸಾಕ್ಷರತಾ ಆಂದೋಲನ, ಶಾಲಾಶಿಕ್ಷಣದ ಬೊಧನಾ ವಿಧಾನ ಉತ್ತಮಪಡಿಸುವಿಕೆ, ಪರಿಸರ ಅಧ್ಯಯನ ಚಟುವಟಿಕೆಗಳನ್ನು ವ್ಯವಸಸ್ಥಿತವಾಗಿ ನಡೆಸಿ, ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಹವಾಮಾನ ಬದಲಾವಣೆ ಮುಂತಾದ ವಿಷಯಗಳಲ್ಲಿ ಸರ್ಕಾರದ ಜೊತೆ ನೀತಿನಿರ್ಣಯರೂಪಿಸಲು ಒತ್ತಡ ತಂತ್ರ ನಡೆಸಲು ಹಾಗೂ ಕೆಲ ಸಂದರ್ಭಗಳಲ್ಲಿ ಅವುಗಳ ಜೊತೆ ಪಾಲ್ಗೊಳ್ಳಲು ಕೂಡ ಕಾರಣವಾಯಿತು ಎಂದರು. ವಿಜ್ಞಾನ ಲೇಖಕ ಕೆ.ಎಸ್ ರವಿಕುಮಾರ್ ತಮ್ಮ ಅನುಭವ ಹಂಚಿಕೊAಡು, 2014ರವರೆಗೂ ಭಾರತದಲ್ಲಿ ಜನಕೇಂದ್ರಿತ ವಿಜ್ಞಾನ ಮುಂಚೂಣೀಯಲ್ಲಿತ್ತು 2014ರ ನಂತರ ಭಾರತದಲ್ಲಿದನ’ಕೇಂದ್ರಿತ ವಿಜ್ಞಾನ ಮುಂಚೂಣಿಯಲ್ಲಿದೆ. ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುದಾನ ಕಡಿತಗೊಳಿಸಲಾಗಿದೆ ಆದರೆ ಅದೇ ಸಂದರ್ಬದಲ್ಲಿ ದನದ ಪ್ರಾಡಕ್ಟಳ ಇಂಟರ್‌ಪ್ರಿಟೇಶನ್ ಕುರಿತು ಅಂದರೆ ಗೋಮೂತ್ರ, ದನದ ಸಗಣಿಯಲ್ಲಿ ಔಷಧ ಗುಣಗಳ ಚರ್ಚೆಗೆ ಹಣ ವಿನಿಯೋಗ ಆಗುತ್ತಿದೆ ಎಂದು ವಿಡಂಬಿಸಿದ ಅವರು ಕೋವಿಡ್ ಬಂದಾಗ ಪಾಠಕಲಿಯಬೇಕಿತ್ತು ಆದರೆ ಕಲಿಯಲಿಲ್ಲ ನಾವು ಸಾವನ್ನು ಸಹಜವಾಘಿ ಸ್ವೀಕರಿಸಿಬಿಟ್ಟಿದ್ದೇವೆ, ಸಂವೇದನಾಶೂನ್ಯರಾಗಿದ್ದೇವೆ ಎಂದರು.


ಬಿಜಿವಿಎಸ್ ಸಂಸ್ಥಾಪಕ ಸದಸ್ಯ ಪಿ.ಶಾಡ್ರಾಕ್ ಸರ್ಕಾರದ ಸಾಕ್ಷರತಾ ಆಂದೋಲನಾ, ಶಿಕ್ಷಣ ಇಲಾಖೆಯ ನಲಿ-ಕಲಿ ಎನ್ನುವ ಶಿಕ್ಷಣದ ಹೊಸ ಪ್ರಯೋಗಗಳು ಬಿಜಿವಿಎಸ್ ಮೊದಲೇ ನಡೆಸಿದ Zಸಂತಸಕಲಿಕೆಯ ಚಿಣ್ಣರಮೇಳ, ಬಾಲಮೇಳ ಚಟುಚಟಿಕೆಗಳ ಮಾದರಿಗಳ ನಕಲುಗಳು ಹಾಗೂ ಸರ್ವಶಿಕ್ಷ ಅಭಿಯಾನದ ಆರಂಭದ ಬಹುಪಾಲು ಸಂಪನ್ಲೂಲ ವ್ಯಕ್ತಿಗಳು ಬಿಜಿವಿಎಸ್ ಜೊತೆ ಬೆಳೆದ ಶಿಕ್ಷಕರುಗಳೇ ಆಗಿದ್ದರು ಎಂದು ತಮ್ಮ ಅನುಭವ ಹಂಚಿಕೊAಡರು.
ಈ ಸಂದರ್ಬದಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜಿವಿಎಸ್ ಕಟ್ಟಿಬೆಳೆಸಿದ ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಪಿ.ಶಾಡ್ರಾಕ್, ಸಿ.ಸೌಭಾಗ್ಯ ಹಾಗೂ ಅಂತೋಣಿಸ್ವಾಮಿ ಉಪಸ್ಥಿತರಿದ್ದು ತಮ್ಮಗಳ ಅನುಭವ ಹಂಚಿಕೊAಡು ಸಾಕ್ಷರತೆ ಹಾಗೂ ವಿಜ್ಞಾನ ಗೀತೆಗಳನ್ನು ಹಾಡಿದರು.
ಬಿಜಿವಿಎಸ್ ತಾಲ್ಲೂಕು ಸಮಿತಿ ಸದಸ್ಯೆ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಮೊದಲಿಗೆ ಬಿಜಿವಿಎಸ್ ತಾಲ್ಲೂಕು ಉಪಾಧ್ಯಕ್ಷ ಚಿನ್ನೇನಹಳ್ಳಿ ಸ್ವಾಮಿ ಸ್ವಾಗತಿಸಿದರು, ತಾಕಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಪ್ರಾಸ್ತವಿಕವಾಗಿ ಮಾತನಾಡಿದರು, ಕಡೆಯಲ್ಲಿ ಸಮತಾ ಜಿಲ್ಲಾ ಸಂಚಾಲಕಿ ಮಮತಾಶಿವು ವಂದಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page