Tuesday, January 27, 2026

ಸತ್ಯ | ನ್ಯಾಯ |ಧರ್ಮ

ಮೋದಿಯನ್ನು ಸೋಲಿಸಿದರಷ್ಟೇ ಹಿಂದೂ ರಾಷ್ಟ್ರದ ಕಲ್ಪನೆ ನಿಜವಾಗಲು ಸಾಧ್ಯ: ಸುಬ್ರಮಣಿಯನ್‌ ಸ್ವಾಮಿ

ದೆಹಲಿ: ಬಿಜೆಪಿಯ ಮಡಿಲಿನ ಕೆಂಡವಾಗಿರುವ ಸುಬ್ರಮಣಿಯನ್‌ ಸ್ವಾಮಿ ಮತ್ತೆ ಬಿಜೆಪಿಯ ಮಡಿಲಿಗೆ ಕಿಚ್ಚಾಗಿ ಕಾಡಿದ್ದಾರೆ. ಈ ಬಾರಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಟಿಕೆಟ್‌ ನೀಡದಿರುವ ಕುರಿತು ಮೋದಿಯವರನ್ನು ಟೀಕಿಸಿರುವ ಸ್ವಾಮಿ ಮೋದಿಯನ್ನು ಸೋಲಿಸುವುದೊಂದೇ ಉಳಿದಿರುವ ದಾರಿ ಎಂದಿದ್ದಾರೆ.

ಪ್ರಜ್ಞಾ ಸಿಂಗ್‌ ಅವರಿಗೆ ಭೋಪಾಲ್‌ ಟಿಕೆಟ್‌ ತಪ್ಪಿಸಿ ಈ ಹಿಂದೆ RSS ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿದ್ದ ವ್ಯಕ್ತಿಗೆ ಟಿಕೆಟ್‌ ಕೊಟ್ಟ ಹಿನ್ನೆಲೆಯಲ್ಲಿ ಸ್ವಾಮಿ ಈ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಜ್ಞಾ ಸಿಂಗ್‌ ಎದುರು ಟಿಕೆಟ್‌‌ ಪಡೆದಿರುವ ಕೃಪಾ ಶಂಕರ್ ಸಿಂಗ್ ಮೂಲತಃ ಕಾಂಗ್ರೆಸ್‌ ಪಕ್ಷದವರಾಗಿದ್ದು, ಈ ಹಿಂದೆ 26/11 ಮುಂಬೈ ದಾಳಿ ಪ್ರಕರಣದಲ್ಲಿ RSS ಕೈವಾಡವಿದೆಯೆಂದು ಆರೋಪಿಸಿದ್ದರು. ಕೃಪಾ ಶಂಕರ್‌ ಈ ಹಿಂದೆ ಅಹ್ಮದ್‌ ಪಟೇಲ್‌, ದಿಗ್ವಿಜಯ ಸಿಂಗ್‌ ಮೊದಲಾದ ಕಾಂಗ್ರೆಸ್‌ ನಾಯಕರಿಗೆ ಹತ್ತಿರದವರಾಗಿದ್ದರು. ಮತ್ತು ಎರಡು ಪ್ಯಾನ್‌ ಕಾರ್ಡ್‌ ಹೊಂದಿರುವ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು. ಬಾಂಬ್‌ ದಾಳಿಯ ಹಿಂದೆ RSS ಪಾತ್ರವಿದೆ ಎನ್ನುವ ಪುಸ್ತಕವೊಂದರ ಬಿಡುಗಡೆಯಲ್ಲಿಯೂ ಅವರು ಪಾಲ್ಗೊಂಡಿದ್ದರು ಎನ್ನುಲಾಗಿದೆ.

ಈ ಕುರಿತು ವರದಿ ಮಾಡಿದ್ದ ಸುದ್ದಿ ಸಂಸ್ಥೆಯೊಂದರ ಸುದ್ದಿಯನ್ನು ಹಂಚಿಕೊಂಡಿರುವ ಸ್ವಾಮಿ “2024ರಲ್ಲಿ ಬಿಜೆಪಿ ಬಹುಮತ ಗಳಿಸುವುದರ ಜೊತೆಗೆ ಮೋದಿ ವಾರಣಾಸಿಯಲ್ಲಿ ಸೋತರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ” ಎಂದು ಬರದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page