ವ್ಯಾಪಾರ ಮಾತುಕತೆಯ ಪರಿಣಾಮ ಭಾರತ ಮತ್ತು ಪಾಕಿಸ್ತಾನ ಯುದ್ಧ ತಡೆಯಲು ಸಾಧ್ಯವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ವ್ಯಾಪಾರ ಒಪ್ಪಂದದ ಪ್ರಸ್ತಾಪದ ಹಿನ್ನೆಲೆಯಲ್ಲಿ ಯುದ್ಧ ನಿಲ್ಲಿಸಿದ ಕೀರ್ತಿ ಅಮೇರಿಕಾಗೆ ಸಲ್ಲುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ. ಅಮೇರಿಕಾ ಮಧ್ಯಸ್ಥಿಕೆಯನ್ನು ಭಾರತ ಪದೇ ಪದೆ ಅಲ್ಲಗಳೆದರೂ ನೇರವಾಗಿ ಟ್ರಂಪ್ ಈ ಬಗ್ಗೆ ಪುನರುಚ್ಚರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆಯೂ ತಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಾವ್ಯ ಯುದ್ದವನ್ನು ತಡೆದಿದ್ದೇನೆ. ವ್ಯಾಪಾರ ಮಾತುಕತೆಗಳ ಮೂಲಕ ಕದನ ವಿರಾಮ ಸಾಧ್ಯವಾಯಿತು ಎಂದಿದ್ದರು. ಆದರೆ ಭಾರತ ಇದನ್ನು ತಳ್ಳಿ ಹಾಕಿದೆ.
“ನಾವು ಭಾರತದೊಂದಿಗೆ ವ್ಯವಹರಿಸುತ್ತಿದ್ದೇವೆ, ಪಾಕಿಸ್ತಾನದೊಂದಿಗೆ ವ್ಯವಹರಿಸುತ್ತಿದ್ದೇವೆ ಮತ್ತು ಸಂಭಾವ್ಯ ಪರಮಾಣು ಯುದ್ಧವನ್ನು ವ್ಯಾಪಾರದ ಮೂಲಕ ನಿಲ್ಲಿಸಲು ಸಾಧ್ಯವಾಯಿತು ಎಂಬುದೇ ನನಗೆ ಅತ್ಯಂತ ಹೆಮ್ಮೆಯ ಒಪ್ಪಂದ ಎಂದು ನಾನು ಭಾವಿಸುತ್ತೇನೆ. ನಿಮಗೆ ತಿಳಿದಿದೆ, ಸಾಮಾನ್ಯವಾಗಿ ಅವರು ಅದನ್ನು ಗುಂಡುಗಳ ಮೂಲಕ ಮಾಡುತ್ತಾರೆ. ನಾವು ಅದನ್ನು ವ್ಯಾಪಾರದ ಮೂಲಕ ಮಾಡುತ್ತೇವೆ. ಹಾಗಾಗಿ ನನಗೆ ಅದರ ಬಗ್ಗೆ ತುಂಬಾ ಹೆಮ್ಮೆ ಇದೆ. ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ನಮಗೆ ತುಂಬಾ ಅಸಹ್ಯಕರ ಸಂಭಾವ್ಯ ಯುದ್ಧ ನಡೆಯುತ್ತಿತ್ತು. ಮತ್ತು ಈಗ, ನೀವು ನೋಡಿದರೆ ಅದೆಲ್ಲಾ ನಿಂತಿದೆ” ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.