ಚೆನ್ನೈ: ಚೆನ್ನೈನ ಎನ್ನೂರ್‌ನಲ್ಲಿರುವ ಥರ್ಮಲ್ ಪವರ್ ಪ್ಲಾಂಟ್‌ನ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ನಿರ್ಮಾಣ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು, ಉತ್ತರ ಭಾರತದ ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಂಗಳವಾರದಂದು ನಡೆಸುತ್ತಿದ್ದ ಕಾಮಗಾರಿಯ ವೇಳೆ ಈ ದುರಂತ ಸಂಭವಿಸಿದೆ. ಪ್ಲಾಂಟ್‌ನ ಮುಂಭಾಗದಲ್ಲಿ (ಮುಖಭಾಗ) ಅಳವಡಿಸಲಾಗಿದ್ದ ಸ್ಕೇಲ್‌ಫೋಲ್ಡಿಂಗ್ (ತಾತ್ಕಾಲಿಕ ವೇದಿಕೆ) ಅಕಸ್ಮಾತ್ತಾಗಿ ಕುಸಿದು ಬಿದ್ದಿದೆ. ಈ ಕಾರಣದಿಂದಾಗಿ, ಒಂಬತ್ತು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಾದವರೆಲ್ಲರೂ ಉತ್ತರ ಭಾರತಕ್ಕೆ ಸೇರಿದ ಕಾರ್ಮಿಕರು ಎಂದು ತಿಳಿದುಬಂದಿದೆ.
ಭಾರಿ ಕಮಾನು (ಆರ್ಚ್) ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಮೃತಪಟ್ಟಿದ್ದು, ಸ್ಕೇಲ್‌ಫೋಲ್ಡಿಂಗ್ ಮೇಲೆ ಬಿದ್ದ ಪರಿಣಾಮ ದೇಹಗಳು ನಜ್ಜುಗುಜ್ಜಾಗಿವೆ. ಗಾಯಗೊಂಡ ಇತರ ಕಾರ್ಮಿಕರನ್ನು ಚೆನ್ನೈನ ರಾಯಪುರದಲ್ಲಿರುವ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ವಿಷಮವಾಗಿದೆ ಎಂದು ವರದಿಯಾಗಿದೆ.