Tuesday, October 15, 2024

ಸತ್ಯ | ನ್ಯಾಯ |ಧರ್ಮ

ರೈಲ್ವೆ ಪ್ರಯಾಣಿಕರ ಗಮನಕ್ಕೆ : ರಾಜ್ಯದ 8 ಮಾರ್ಗಗಳ ರೈಲು ಸಂಚಾರ ಒಂದು ವಾರಗಳ ಕಾಲ ಸಂಪೂರ್ಣ ರದ್ದು ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ರೈಲುಗಳ ಮಾರ್ಗಗಳ ಸಂಚಾರವನ್ನು ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ಹೊರಡಿಸಿದೆ.

ತುಮಕೂರು ಮತ್ತು ತಿಪಟೂರು ಸಮೀಪದ ನಿಟ್ಟೂರು ಮತ್ತು ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಯಲ್ಲಿ ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ಸಂಚರಿಸುವ ಒಟ್ಟು ಎಂಟು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ರದ್ದು ಮಾಡಿ ನೈಋತ್ಯ ರೈಲ್ವೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಡುವಿನ ನಿಲ್ದಾಣಗಳ ರೈಲ್ವೆ ಮೇಲ್ಸೇತುವೆಗೆ ಅ.17 ರಿಂದ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಅ.17 ರಿಂದ 24ರವರೆಗೆ ಅಂದರೆ ಒಂದು ವಾರಗಳ ಕಾಲ ಈ ರೈಲುಗಳ ಸಂಚಾರ ಸಂಪೂರ್ಣ ರದ್ದುಗೊಳಿಸಲಾಗಿದೆ.

ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರದ್ದಾಗಿರುವ ರೈಲು ಮಾರ್ಗ
ರೈಲು ಸಂಖ್ಯೆ: 07346 ತುಮಕೂರು-ಚಾಮರಾಜನಗರ ಪ್ಯಾಸೆಂಜರ್​​
ರೈಲು ಸಂಖ್ಯೆ: 07328 ಚಾಮರಾಜನಗರ-ಮೈಸೂರು ಪ್ಯಾಸೆಂಜರ್​
ರೈಲು ಸಂಖ್ಯೆ: 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 06576 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು
ರೈಲು ಸಂಖ್ಯೆ: 06575 ಕೆಎಸ್​ಆರ್​ ಬೆಂಗಳೂರು-ತುಮಕೂರು ಮೆಮು
ರೈಲು ಸಂಖ್ಯೆ: 16579 ಯಶವಂತಪುರ-ಶಿವಮೊಗ್ಗ ಟೌನ್​
ರೈಲು ಸಂಖ್ಯೆ: 16580 ಶಿವಮೊಗ್ಗ ಟೌನ್​-ಯಶವಂತಪುರ ರೈಲು ಸಂಚಾರ ಒಂದು ವಾರ ಸಂಪೂರ್ಣ ರದ್ದಾಗಲಿದೆ.

ಭಾಗಶಃ ರದ್ದು
ರೈಲು ಸಂಖ್ಯೆ: 06571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು ಹಿರೇಹಳ್ಳಿ-ತುಮಕೂರು ರೈಲು ನಿಲ್ದಾಣದ ನಡುವೆ ಸಂಚರಿಸುವುದಿಲ್ಲ.
ರೈಲು ಸಂಖ್ಯೆ: 06572 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು-ಹಿರೇಹಳ್ಳಿ ಮಧ್ಯೆ ಸಂಚರಿಸುವುದಿಲ್ಲ.
ರೈಲು ಸಂಖ್ಯೆ: 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸಿಕೆರೆ-ಕೆಎಸ್​ಆರ್​​ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.
ರೈಲು ಸಂಖ್ಯೆ: 12725 ಕೆಎಸ್​ಆರ್​ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು ಅರಸಿಕೆರೆ-ಕೆಎಸ್​ಆರ್​ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.
ರೈಲು ಸಂಖ್ಯೆ: 12726 ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್​ಪ್ರೆಸ್​​ ರೈಲು ಅರಸಿಕೆರೆ-ಕೆಎಸ್​ಆರ್​ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.

ರೈಲುಗಳ ಮಾರ್ಗ ಬದಲಾವಣೆ
ರೈಲು ಸಂಖ್ಯೆ: 17310 ವಾಸ್ಕೋ ಡ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸುತ್ತದೆ.
ರೈಲು ಸಂಖ್ಯೆ: 22687 ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.
ರೈಲು ಸಂಖ್ಯೆ: 82653 ಯಶವಂತಪುರ-ಜೈಪುರ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.
ರೈಲು ಸಂಖ್ಯೆ: 19668 ಮೈಸೂರು-ಉದಯಪುರ ಸಿಟಿ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸುತ್ತದೆ.
ರೈಲು ಸಂಖ್ಯೆ: 17326 ಮೈಸೂರು-ಬೆಳಗಾವಿ ಎಕ್ಸ್​ಪ್ರೆಸ್​ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ ಮಾರ್ಗವಾಗಿ ಸಂಚರಿಸುತ್ತದೆ.

ರೈಲು ನಿಯಂತ್ರಣ
ರೈಲು ಸಂಖ್ಯೆ: 20651 ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್​ಪ್ರೆಸ್​ ರೈಲನ್ನು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ: 17325 ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ: 07345 ಚಾಮರಾಜನಗರ-ತುಮಕೂರು ಪ್ಯಾಸೆಂಜರ್​​ ರೈಲನ್ನು 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ: 17309 ಯಶವಂತಪುರ – ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲನ್ನು 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ: 06513 ತುಮಕೂರು-ಶಿವಮೊಗ್ಗ ಟೌನ್​ ರೈಲನ್ನು 85 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page