ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಿಂಗಳ ಬಳಿಕ ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ತಂಡ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಕೆಯ ಪೋಸ್ಟ್ ಹಾಕಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ಧವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ ಎಂದು X ಮೂಲಕ ಪೋಸ್ಟ್ ಹಾಕಿದೆ.
ಯಾವುದೇ ಪೂರ್ವಾನುಮತಿ ಇಲ್ಲದೆ ಆರ್‌ಸಿಬಿ ಫ್ರಾಂಚೈಸಿ ಸಂಭ್ರಮಾಚರಣೆಯ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಗೆಲುವಿನ ಸಂಭ್ರಮಕ್ಕೆ ಬರಲು ಆಹ್ವಾನಿಸಿತ್ತು. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತದಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ಈ ಬೆಳವಣಿಗೆ ಐಪಿಎಲ್ ಇತಿಹಾಸದ ಕರಾಳ ದಿನಗಳಾಗಿ ಉಳಿಯಿತು. ಸಧ್ಯ ಮುಂದಿನ ದಿನಗಳಲ್ಲಿ ಐಪಿಎಲ್ ಶುರುವಾಗುವ ಈ ಹಂತದಲ್ಲಿ ಬೆಂಬಲಕ್ಕಾ ಮತ್ತೆ ಅಭಿಮಾನಿಗಳ ಬಳಿ ಅಂಗಲಾಚಿರುವ ಪೋಸ್ಟ್ ಮುಂದಿನ ದಿನಗಳಲ್ಲಿ ಬೆಂಬಲ ಕೋರಿದ ಪೀಠಿಕೆ ಎಂಬಂತೆ ಕಂಡಿದೆ. ಅಷ್ಟೇ ಅಲ್ಲದೆ ದುರ್ಘಟನೆ ಸಂಭವಿಸಿ, ಮೂರು ತಿಂಗಳ ಬಳಿಕ ಈ ಪೋಸ್ಟ್ ಹರಿದಾಡಿದ್ದು ಆರ್‌ಸಿಬಿ ಮತ್ತೆ ಅಖಾಡಕ್ಕೆ ಬರುವ ಮುನ್ಸೂಚನೆ ನೀಡಿದೆ.
ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒ೦ದು ಯೋಜನೆ.ಇ೦ದು ನಾವು ಮರಳಿದ್ದೇವೆ; ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮು೦ದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ.ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ” ಎಂಬಂತೆ X ಮೂಲಕ ಪೋಸ್ಟ್ ಹಾಕಿದೆ.