Home ವಿದೇಶ ಟ್ರಂಪ್ ಒಬ್ಬ ‘ರೇಪಿಸ್ಟ್ ಮತ್ತು ದ್ರೋಹಿ’: ವೈಟ್ ಹೌಸ್ ಡಿನ್ನರ್ ದಾಳಿಯ ಆರೋಪಿ ಬರೆದಿದ್ದ ತನ್ನ...

ಟ್ರಂಪ್ ಒಬ್ಬ ‘ರೇಪಿಸ್ಟ್ ಮತ್ತು ದ್ರೋಹಿ’: ವೈಟ್ ಹೌಸ್ ಡಿನ್ನರ್ ದಾಳಿಯ ಆರೋಪಿ ಬರೆದಿದ್ದ ತನ್ನ ಕುಟುಂಬಕ್ಕೆ ಪತ್ರ ಬಹಿರಂಗ

0

ವಾಷಿಂಗ್ಟನ್: ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ನಡೆದಿದ್ದ ಗುಂಡಿನ ದಾಳಿ ಪ್ರಕರಣದ ಆರೋಪಿ ಕೋಲ್ ಟೊಮಾಸ್ ಅಲೆನ್ ಕುರಿತಾದ ಹೊಸ ಮತ್ತು ಆಘಾತಕಾರಿ ವಿಷಯಗಳು ಇದೀಗ ಬೆಳಕಿಗೆ ಬಂದಿವೆ. ತಾನು ನಡೆಸಬೇಕೆಂದಿದ್ದ ದಾಳಿಗೂ ಮುನ್ನ ಆರೋಪಿ ಅಲೆನ್, ತನ್ನ ಕುಟುಂಬ ಸದಸ್ಯರಿಗೆ ಒಂದು ಪತ್ರ ಬರೆದು ಕಳುಹಿಸಿದ್ದಾನೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆ ಪತ್ರದಲ್ಲಿ ಅಲೆನ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾನೆ. ಟ್ರಂಪ್ ಅವರನ್ನು ‘ರೇಪಿಸ್ಟ್’ (ಬಲಾತ್ಕಾರಿ), ‘ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವ್ಯಕ್ತಿ’ ಮತ್ತು ‘ದ್ರೋಹಿ’ ಎಂದು ಕರೆದಿರುವ ಅಲೆನ್, ಅಂತಹ ವ್ಯಕ್ತಿಯನ್ನು ತಾನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾನೆ.

ಅಷ್ಟೇ ಅಲ್ಲದೆ, ತನ್ನ ದಾಳಿಯ ಯೋಜನೆ ಕುರಿತು ಅಲೆನ್ ಆ ಪತ್ರದಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿದ್ದಾನೆ. ತಾನು ಯಾರನ್ನು ಗುರಿಯಾಗಿಸಿಕೊಳ್ಳಬೇಕು ಎಂಬ ಬಗ್ಗೆ ಆರೋಪಿ ಮೊದಲೇ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದನು. ಹೋಟೆಲ್ ಭದ್ರತೆ ಅತ್ಯಂತ ಕಳಪೆಯಾಗಿದೆ ಎಂದು ಟೀಕಿಸಿರುವ ಅಲೆನ್, ತಾನು ಬೃಹತ್ ರೈಫಲ್ ಅನ್ನು ಹೊತ್ತು ತಂದರೂ ಯಾರೂ ಅದನ್ನು ಗುರುತಿಸಲಿಲ್ಲ ಎಂದು ಬರೆದಿದ್ದಾನೆ.

ತನ್ನ ದಾರಿಗೆ ಅಡ್ಡ ಬರದಿದ್ದಲ್ಲಿ, ಅಲ್ಲಿನ ಅತಿಥಿಗಳು, ಸಿಬ್ಬಂದಿ ಅಥವಾ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂದು ಆರೋಪಿ ಸ್ಪಷ್ಟಪಡಿಸಿದ್ದನು. ಈ ಘಟನೆಯು ಭದ್ರತಾ ದೃಷ್ಟಿಯಿಂದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಯ ಈ ಹೇಳಿಕೆಗಳು ಈಗ ತನಿಖೆಯಲ್ಲಿ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿವೆ.

You cannot copy content of this page

Exit mobile version