ಇರಾನ್ ಮೇಲೆ ದಾಳಿಗೆ ಟ್ರಂಪ್ ಗ್ರೀನ್ ಸಿಗ್ನಲ್; ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಇಸ್ರೇಲ್ ಗೆ ಕಳಿಸಲು ಸಿದ್ಧತೆ

ಇಸ್ರೇಲ್ ಮೇಲೆ ಸಂಘರ್ಷಕ್ಕೆ ಇಳಿದಿರುವ ಇರಾನ್ ವಿರುದ್ಧ ಈಗ ಅಮೇರಿಕಾ ಯುದ್ಧಕ್ಕೆ ಸನ್ನದ್ಧರಾಗಿದೆ. ಈ ಸಂಘರ್ಷದಲ್ಲಿ ಇಸ್ರೇಲ್ ಪರ ನಿಂತಿರುವ ಅಮೇರಿಕಾ ಈಗ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಇಸ್ರೇಲ್ ಗೆ ತಂದಿಳಿಸಲು ಸಜ್ಜಾಗಿದೆ.

ನಿನ್ನೆ ಅಮೇರಿಕಾದಲ್ಲಿ ನಡೆದ ವಿಶೇಷ ಸಭೆಯಲ್ಲಿ ಇರಾನ್ ಮೇಲೆ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್‌’ಗೆ “ಭೀಕರ ಪರಿಣಾಮಗಳ” ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಎರಡು ರಾಷ್ಟ್ರಗಳ ನಡುವಿನ ವೈಮಾನಿಕ ದಾಳಿಗಳು ರಾತ್ರಿಯಿಡೀ ಮುಂದುವರೆದಿದ್ದು, ಯುದ್ಧದ ಆರನೇ ದಿನವನ್ನ ಗುರುತಿಸುತ್ತಿರುವುದರಿಂದ ಟೆಹ್ರಾನ್ ಇಸ್ರೇಲ್‌’ನ ದಾಳಿಗಳಿಗೆ ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅಕಸ್ಮಾತ್ ಈ ಯುದ್ಧದಲ್ಲಿ ಅಮೇರಿಕಾ ಇಸ್ರೇಲ್ ಪರ ನಿಂತರೂ ಅದಕ್ಕೆ ಶರಣಾಗುವುದಿಲ್ಲ ಎಂದು ಅಯತೊಲ್ಲಾ ಅಲಿ ಖಮೇನಿ ಪುನರುಚ್ಚರಿಸಿದ್ದಾರೆ. ಮತ್ತು ಯಾವುದೇ ಯುಎಸ್ ದಾಳಿಯ ನಂತರ ಸರಿಪಡಿಸಲಾಗದ ಗಂಭೀರ ಪರಿಣಾಮಗಳನ್ನ ಬೀರುತ್ತದೆ ಎಂದು ಎಚ್ಚರಿಸಿದರು.

ಯುದ್ಧ ಬಿಟ್ಟು ಬೇಷರತ್‌ ಶರಣಾಗಿ ಎಂಬ ಅಧ್ಯಕ್ಷ ಟ್ರಂಪ್‌ ಸೂಚನೆಯನ್ನು ಇರಾನ್‌ನ ಪರಮೋಚ್ಛ ಧಾರ್ಮಿಕ ನಾಯಕ ಖಮೇನಿ ತಳ್ಳಿ ಹಾಕಿದ್ದು ಶರಣಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು