Home ಬ್ರೇಕಿಂಗ್ ಸುದ್ದಿ ಟ್ವಿಟರಿಗೆ ಮರಳಿದ ಟ್ರಂಪ್!

ಟ್ವಿಟರಿಗೆ ಮರಳಿದ ಟ್ರಂಪ್!

0

ಇಲಾನ್‌ ಮಸ್ಕ್‌ ಕೈಸೇರಿದ ನಂತರ ಅಕ್ಷರಶಃ ಮನರಂಜನಾ ತಾಣವಾಗಿರುವ ಟ್ವಿಟರ್‌ಗೆ ಈಗ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮರಳುವುದರೊಂದಿಗೆ ಇನ್ನಷ್ಟು ರಂಗು ಬಂದಂತಾಗಿದೆ. ಮೊನ್ನೆಯಷ್ಟೇ ಟ್ರಂಪ್‌ ಅವರನ್ನು ಟ್ವಿಟರಿಗೆ ಮರಳಿ ಕರೆತರುವ ಕುರಿತು ಜನಾಭಿಪ್ರಾಯ ಕೋರಿ ಪೋಲ್‌ ನಡೆಸಿದ್ದ ಇಲಾನ್‌ ಮಸ್ಕ್‌ ಇಂದು ಅವರ ಅಕೌಂಟನ್ನು ಮರುಸ್ಥಾಪಿಸಿದ್ದಾರೆ.

2021ರಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿ ಟ್ರಂಪ್‌ ಆ ದೇಶದ ಎಲ್ಲೆಡೆ ಗದ್ದಲ ಎಬ್ಬಿಸಿ, ಆತನ ಬೆಂಬಲಿಗರು ವೈಟ್‌ ಹೌಸಿಗೆ ದಾಳಿ ಮಾಡಿದ್ದರಿಂದಾಗಿ ನಡೆದ ಗುಂಡಿನ ಚಕಮಕಿ ಹಲವು ಸಾವುಗಳಿಗೂ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಈ ಟ್ರಂಪ್‌ ಸಾಮಾಜಿಕ ಜಾಲತಾಣಗಳನ್ನು ಬಳಸಿ ತನ್ನ ಬೆಂಬಲಿಗರ ಜೊತೆ ಸಂವಾದ ನಡೆಸುತ್ತಿದ್ದ ಕಾರಣ ಟ್ರಂಪ್‌ಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಅತ್ತ ಟ್ರಂಪ್‌ ಮರಳಿಬರುತ್ತಿದ್ದಂತೆ ಇತ್ತ ಸದಾ ದ್ವೇಷ ಕಾರುತ್ತಾ ತಲೆಬುಡವಿಲ್ಲದ ಟ್ವೀಟ್‌ ಮಾಡುವುದರಲ್ಲಿ ಖ್ಯಾತರಾಗಿದ್ದ ಕಂಗನಾ ರಾಣವತ್‌ ಅವರ ಖಾತೆಯೂ ಮರುಸ್ಥಾಪನೆಯಾಗುವ ಆಸೆ ಆಕೆಯ ಅಭಿಮಾನಿಗಳಲ್ಲಿ ಗರಿಗೆದರಿದೆ.

ಒಟ್ಟಾರೆ ಸದಾ ಹಲವು ಸಕಾರತ್ಮಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದ್ದ ಟ್ವಿಟರ್‌ ಇಲಾನ್‌ ಮಸ್ಕ್‌ ನಿಯಂತ್ರಣಕ್ಕೆ ಬಂದ ನಂತರ ಥೇ ಹುಚ್ಚಾಸ್ಪತ್ರೆಯ ವಾರ್ಡಿನಂತಾಗಿ, ತಮಾಷೆಯ ತಾಣವಾಗಿ ಬದಲಾಗಿದೆ. ಯಾವ ಸಮಯದಲ್ಲಿ ಟ್ವಿಟರ್‌ ಮುಚ್ಚಿಹೋಗಬಹುದೋ ಎನ್ನುವ ಭಯದಿಂದ ಅಲ್ಲಿರುವ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ತಮ್ಮ ಇನ್ಸ್ಟಾ ಅಕೌಂಟ್‌ ಲಿಂಕ್‌ ಕೊಟ್ಟು ಅಲ್ಲಿ ಫಾಲೋ ಮಾಡುವಂತೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಉತ್ತಮ ಸಾಮಾಜಿಕ ಜಾಲತಾಣ ಯೋಗ್ಯನಲ್ಲದ ವ್ಯಕ್ತಿಯೊಬ್ಬನ ಕೈಗೆ ಸಿಕ್ಕರೆ ಏನಾಗಬಹುದೆನ್ನುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.

You cannot copy content of this page

Exit mobile version