ದೀಪಾವಳಿ ದಿನದಂದೇ ಉತ್ತರಾಖಂಡದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಭೀಕರ (Tunnel Collapses) ಅಪಘಾತ ಸಂಭವಿಸಿದೆ.
ಕಾಮಗಾರಿ ವೇಳೆ ಸುರಂಗ ಕುಸಿದು ಹತ್ತಾರು ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ, ಈ ಸುರಂಗವನ್ನು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ನಿರ್ಮಿಸಲಾಗುತ್ತಿತ್ತು. ಈ ಹಿಂದೆ ಉತ್ತರಾಖಂಡದ ಚಮೋಲಿಯಲ್ಲಿ ಕೂಡ ಕಾರ್ಮಿಕರು ಇದೇ ರೀತಿಯ ಸುರಂಗದಲ್ಲಿ ಸಿಲುಕಿದ್ದರು.
ಉತ್ತರಕಾಶಿಯ ಬಾರ್ಕೋಟ್, ಸಿಲ್ಕ್ಯಾರ್ ಪೋಲ್ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಸುರಂಗದಲ್ಲಿ ಸುಮಾರು 30ರಿಂದ 35 ಜನರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆದಷ್ಟು ಬೇಗ ಸುರಂಗವನ್ನು ತೆರೆವುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮಾಹಿತಿ ಪ್ರಕಾರ, ಬೆಳಿಗ್ಗೆ ಕೆಲಸ ಮಾಡುವಾಗ ಸುರಂಗ ಕುಸಿಯಲು ಪ್ರಾರಂಭಿಸಿತು. ಸುರಂಗ ಕುಸಿದಿದ್ದರಿಂದ 30ರಿಂದ 35 ಕಾರ್ಮಿಕರು ಹಾಗೂ ಇತರೆ ನೌಕರರು ಅದರಲ್ಲಿ ಸಿಲುಕಿಕೊಂಡಿದ್ದಾರೆ.
#WATCH | Uttarakhand: A part of the tunnel under construction from Silkyara to Dandalgaon in Uttarkashi, collapsed. DM and SP of Uttarkashi district are present at the spot. SDRF, and Police Revenue teams are also present at the spot for relief work. Rescue operations underway. pic.twitter.com/hxrGqxWrsO
— ANI UP/Uttarakhand (@ANINewsUP) November 12, 2023
ಸದ್ಯದ ಮಾಹಿತಿ ಪ್ರಕಾರ ಎಲ್ಲರೂ ಸುರಕ್ಷಿತವಾಗಿದ್ದಾರೆ, ಆದರೆ ಆದಷ್ಟು ಬೇಗ ಸ್ಥಳಾಂತರಿಸಲು ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಅವರು ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಆದಷ್ಟು ಬೇಗ ಸುರಂಗವನ್ನು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 5:30ಕ್ಕೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ತಡವಾಗಿ ಮಾಹಿತಿ ಸಿಕ್ಕಿದೆ. ಪ್ರಸ್ತುತ, ಸುರಂಗದಲ್ಲಿ ಸಿಲುಕಿರುವ ನೌಕರರು ಮತ್ತು ಕಾರ್ಮಿಕರ ಸಂಖ್ಯೆ 30ರಿಂದ 35 ಇರಬಹುದು. ಸದ್ಯ ಈ ಕಾರ್ಮಿಕರಿಗೆ ಪೈಪ್‌ಗಳ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. ಸುರಂಗದಿಂದ 800 ಮೀಟರ್ ಅಂತರದಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದು, ಅವಶೇಷಗಳು 200 ಮೀಟರ್‌ಗೆ ತಲುಪಿವೆ. ಜನರನ್ನು ರಕ್ಷಿಸಲು ಅವಶೇಷಗಳನ್ನು ತೆಗೆಯಲಾಗುತ್ತಿದೆ. ಆದರೆ, ಅವಶೇಷಗಳು ನಿರಂತರವಾಗಿ ಬೀಳುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.