Home ದೇಶ ಪಕ್ಷದ ಚಿನ್ಹೆ ಬಿಡುಗಡೆ ಮಾಡಿದ ನಟ ದಳಪತಿ ವಿಜಯ್;‌ ತಮಿಳುನಾಡು ರಾಜಕೀಯದಲ್ಲಿ ಹೊಸ ಕಂಪನ!

ಪಕ್ಷದ ಚಿನ್ಹೆ ಬಿಡುಗಡೆ ಮಾಡಿದ ನಟ ದಳಪತಿ ವಿಜಯ್;‌ ತಮಿಳುನಾಡು ರಾಜಕೀಯದಲ್ಲಿ ಹೊಸ ಕಂಪನ!

0

ಚೆನ್ನೈ: ತಮಿಳು ಚಿತ್ರನಟ ದಳಪತಿ ವಿಜಯ್‌ ಈ ಹಿಂದೆ ತಾನು ರಾಜಕೀಯ ಪಕ್ಷ ಕಟ್ಟಿಸುವುದಾಗಿ ಘೋಷಿಸಿದ್ದರು. ಜೊತೆಗೆ 2026ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದ್ದರು.

ಇದೀಗ ಅವರು ತಾನು ಹೇಳಿದಂತೆಯೇ ತನ್ನ ಪಕ್ಷ ತಮಿಳಗ ವೆಟ್ರಿ ಕಳಗಂ(Tamilaga Vettri Kazhagam)ನ ಬಾವುಟ ಹಾಗೂ ಚಿಹ್ನೆಯನ್ನು ಗುರುವಾರ ಅನಾವರಣಗೊಳಿಸಿದ್ದಾರೆ. ಇದರೊಂದಿಗೆ ಡಿಎಮ್‌ಕೆ, ಎಐಡಿಎಮ್‌ಕೆ ಪಕ್ಷಗಳಿಗೆ ಹೊಸ ಸ್ಪರ್ಧಿಯೊಬ್ಬರು ಹುಟ್ಟಿಕೊಂಡಂತಾಗಿದೆ.

ಚೆನ್ನೈಯ ಪಕ್ಷದ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಪಕ್ಷದ ಬಾವುಟ ಮತ್ತು ಚಿಹ್ನೆ ಬಿಡುಗಡೆ ಕಾರ್ಯಕ್ರಮದ ವೇಳೆ ವಿಜಯ್ ಅವರ ಅಪ್ಪ ಮತ್ತು ಅಮ್ಮ ಜೊತೆಗಿದ್ದರು. ಈ ಸಂದರ್ಭದಲ್ಲಿ ಅವರು ಪ್ರತಿಜ್ಞಾ ವಿಧಿಯನ್ನೂ ಓದಿದರು.

“ನಮ್ಮ ದೇಶದ ವಿಮೋಚನೆಗಾಗಿ ಹೋರಾಡಿದ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹೋರಾಟಗಾರರನ್ನು ಮತ್ತು ತಮಿಳು ನೆಲದಿಂದ ನಮ್ಮ ಜನರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡಿದ ಅಸಂಖ್ಯಾತ ಸೈನಿಕರನ್ನು ನಾವು ಯಾವಾಗಲೂ ಶ್ಲಾಘಿಸುತ್ತೇವೆ. ನಾನು ಜಾತಿ, ಧರ್ಮ, ಲಿಂಗ, ಹುಟ್ಟಿದ ಸ್ಥಳದ ಹೆಸರಿನಲ್ಲಿ ಸಮಾಜದಲ್ಲಿ ಮಾಡುವ ವ್ಯತ್ಯಾಸಗಳನ್ನು ತೆಗೆದುಹಾಕುತ್ತೇನೆ. ಜನರಲ್ಲಿ ಜಾಗೃತಿ ಮೂಡಿಸಿ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳಿಗಾಗಿ ಶ್ರಮಿಸುತ್ತೇನೆ. ನಾನು ಎಲ್ಲಾ ಜೀವಿಗಳಿಗೆ ಸಮಾನತೆಯ ತತ್ವವನ್ನು ಎತ್ತಿಹಿಡಿಯುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದು ಪ್ರತಿಜ್ಞಾ ವಿಧಿ ಓದಿದರು.

ಹಿಂದಿನ ಲೋಕಸಭಾ ಚುನಾವಣಾ ವೇಳೆ ವಿಜಯ್‌ ರಾಜಕೀಯವಾಗಿ ತಟಸ್ಥರಾಗಿ ಉಳಿದಿದ್ದರು. ಡಿಎಮ್‌ಕೆ ಹಾಗೂ ಕಾಂಗ್ರೆಸ್‌ ಆ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಇನ್ನು ತಮಿಳುನಾಡಿನಲ್ಲಿ ನೆಲೆ ಹುಡುಕುತ್ತಿರುವ ಬಿಜೆಪಿ ಇತ್ತೀಚೆಗೆ ತನ್ನ ಮಿತ್ರಪಕ್ಷವಾದ ಎಐಡಿಎಮ್‌ಕೆ ಪಕ್ಷದೊಂದಿಗೆ ಸಂಬಂಧ ಕಡಿದುಕೊಂಡು ಅಲ್ಲಿ ಏಕಾಂಗಿಯಾಗಿದೆ.

ತಮಿಳುನಾಡಿನಲ್ಲಿ ಚಿತ್ರನಟರು ರಾಜಕೀಯಕ್ಕೆ ಬರುವುದು ತೀರಾ ಸಾಮಾನ್ಯವಾದರೂ ಇತ್ತೀಚೆಗೆ ರಜನೀಕಾಂತ್‌ ಒಂದು ಕೈ ನೋಡಲು ಹೋಗಿ ತಕ್ಷಣವೇ ಹಿಂದಕ್ಕೆ ಸರಿದಿದ್ದರು. ಅತ್ತ ಕಮಲಹಾಸನ್‌ ಆರಕ್ಕೇರದೆ ಮೂರಕ್ಕಿಳಿಯದೆ ತಮಿಳುನಾಡು ರಾಜಕೀಯದಲ್ಲಿ ಸೈಕಲ್‌ ಹೊಡೆಯುತ್ತಿದ್ದಾರೆ. ಇನ್ನು ದಳಪತಿ ವಿಜಯ್‌ ಏನು ಮಾಡಲಿದ್ದಾರೆ, ತಮಿಳರು ಅವರ ಕೈ ಹಿಡಿಯಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

You cannot copy content of this page

Exit mobile version