Sunday, June 23, 2024

ಸತ್ಯ | ನ್ಯಾಯ |ಧರ್ಮ

ಲೋಗೋ ಬದಲಿಸಿದ ಟ್ವಿಟ್ಟರ್ ; ಟ್ವಿಟ್ಟರ್ ನಲ್ಲೇ ಬಾರೀ ಟ್ರೋಲ್

ಯಾವ ಮುನ್ಸೂಚನೆಯನ್ನೂ ಕೊಡದೇ ಟ್ವಿಟ್ಟರ್ ತನ್ನ ಲೋಗೋ ಬದಲಿಸಿದೆ. ಸುಪ್ರಸಿದ್ಧ ಟೆಸ್ಲಾ ಸಂಸ್ಥೆಯ ಸಿಇಓ ಎಲಾನ್ ಮಸ್ಕ್, ಟ್ವಿಟರ್ ನ್ನು ತನ್ನ ತೆಕ್ಕೆಗೆ ತಗೆದುಕೊಂಡ ನಂತರ ಟ್ವಿಟ್ಟರ್ ನಲ್ಲಿ ಹಲವಷ್ಟು ಬದಲಾವಣೆ ತಂದಿದ್ದು, ಈಗ ತನ್ನ ಲೋಗೋವನ್ನೇ ಬದಲಾವಣೆ ಮಾಡಿದ್ದಾರೆ.

ಇಲ್ಲಿಯವರೆಗೆ “ಲ್ಯಾರಿ” ಹಕ್ಕಿಯ ಚಿತ್ರ ಹೊಂದಿದ್ದ ಟ್ವಿಟ್ಟರ್ ಈಗ ‘X’ ಎಂಬ ಲೋಗೋ ಬಳಸಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ. ‘X’ ಅನ್ನೋ ಲೋಗೋ ಬಳಸಿ ಪೋರ್ನೋಗ್ರಫಿ ಅಡಿಯಲ್ಲಿ ಹೋಲಿಸಿ ಹೆಚ್ಚು ಮಂದಿ ಟ್ರೋಲ್ ಮಾಡುತ್ತಿದ್ದಾರೆ.

ಹೆಚ್ಚಿನ ಪ್ರಚಾರ ಪ್ರಿಯರಾಗಿರುವ ಎಲಾನ್ ಮಸ್ಕ್ ಗೆ ಈ ಬಗೆಯ ಟ್ರೋಲ್ ಕೂಡ ಪ್ರಚಾರದ ಒಂದು ಭಾಗ ಎಂದೇ ಭಾವಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ‘Space X’ ನ ಸಂಸ್ಥಾಪಕರೂ ಆಗಿರುವ ಎಲಾನ್ ಮಸ್ಕ್ ‘X’ ಸಿಂಬಲ್ ಬಳಕೆಗೆ ಕಾರಣವೂ ಇದು ಎಂದು ಅಂದಾಜಿಸಲಾಗಿದೆ. ಈ ಮೂಲಕವೂ ಸಹ ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಹೆಚ್ಚುವಂತೆ ಮಾಡುವುದೂ ಎಲಾನ್ ಮಸ್ಕ್ ತಂತ್ರಗಾರಿಕೆಯಲ್ಲಿ ಇದೆ ಎನ್ನಲಾಗಿದೆ.

ಇನ್ನು ಮಾರ್ಕ್ ಜುಕರ್ಬರ್ಗ್ ಹೊಸದಾಗಿ ಲಾಂಚ್ ಮಾಡಿರುವ ‘Threads’ ಕೂಡಾ ಟ್ವಿಟ್ಟರ್ ಗೆ ಪರ್ಯಾಯವಾಗಿ ಬಂದ App ಎಂದೇ ಮಾರುಕಟ್ಟೆಯಲ್ಲಿ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ತಂತ್ರಗಾರಿಕೆಗೆ ಎಲಾನ್ ಮಸ್ಕ್ ಬಿದ್ದಿದ್ದಾರೆ ಎನ್ನುವ ಮಾತು ಸಹ ಓಡಾಡುತ್ತಿದೆ.

ಟ್ವಿಟ್ಟರ್ ನಲ್ಲಿ ಟ್ರೋಲ್ ಆಗುತ್ತಿರುವ ಒಂದಷ್ಟು ಸಬ್ಜೆಕ್ಟ್ ಕೆಳಗಿವೆ.

Related Articles

ಇತ್ತೀಚಿನ ಸುದ್ದಿಗಳು