ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣನ ಕುತ್ತಿಗೆಯ ಸುತ್ತ ಲೈಂಗಿಕ ಹಗರಣದ ಕುಣಿಕೆ ಬಿಗಿಗೊಳ್ಳುತ್ತಲೇ ಇದ್ದು, ಈ ವಿಷಯದಲ್ಲಿ ಇನ್ನೂ ಎರಡು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆಯೆಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.
ʼಟ್ರಾನ್ಸ್‌ಫರ್ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಹೋದ ಸಂದರ್ಭದಲ್ಲಿ ಪ್ರಜ್ವಲ್ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ನಂತರ ವರ್ಗಾವಣೆಯ ಆಸೆ ಹುಟ್ಟಿಸಿ ಮತ್ತೆ ಮತ್ತೆ ದೌರ್ಜನ್ಯ ಎಸಗಿದ್ದಾರೆʼ ಎಂದು ಇಬ್ಬರು ಸಂತ್ರಸ್ತ ಮಹಿಳಾ ಅಧಿಕಾರಿಗಳು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಆಧರಿಸಿ ಈಗಾಗಲೇ ಅಧಿಕಾರಿಗಳು ಸಂತ್ರಸ್ತೆಯರಿಂದ ಹೇಳಿಕೆ ಪಡೆಯುತ್ತಿದ್ದು, ಇನ್ನೂ ಕೆಲವರಿಂದ ಆಪ್ತ ಸಮಾಲೋಚನೆಯ ನಂತರ ಹೇಳಿಕೆ ಪಡೆಯುವ ಸಾಧ್ಯತೆಯಿದೆ.
ಈ ಪ್ರಕರಣಗಳ ವಿಷಯಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕೊ ಅಥವಾ ಈಗಾಗಲೇ ದಾಖಲಿಸಲಾಗಿರುವ ಪ್ರಥಮ ವರ್ತಮಾನ ಮಾಹಿತಿಯಲ್ಲಿ ಇವುಗಳನ್ನೂ ಸೇರಿಸಬೇಕೋ ಎನ್ನುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ಅಧಿಕಾರಿಗಳು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಈ ನಡುವೆ ತನಿಖಾ ತಂಡವು ಸಂತ್ರಸ್ತೆಯರ ಸಹಾಯಕ್ಕಾಗಿ ಸಹಾಯವಾಣಿಯನ್ನು (6360938947) ಸ್ಥಾಪಿಸಿದ್ದು, ಅದಕ್ಕೆ ಕರೆ ಮಾಡುತ್ತಿರುವ ಸಂತ್ರಸ್ತೆಯರಿಗೆ ತಂಡ ಸಹಾಯ ಹಸ್ತವನ್ನು ನೀಡುತ್ತಿದೆ.
ಉಳಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನದಲ್ಲಿರುವ ಶಾಸಕ ರೇವಣ್ಣನಿಗೆ ನಿನ್ನೆ ಕೋರ್ಟ್ ಜಾಮೀನು ನೀಡದೆ ವಿಚಾರಣೆಯನ್ನು ಮುಂದೂಡಿತ್ತು, ನಂತರ ನಿನ್ನೆ ಸಂಜೆ ರೇವಣ್ಣನಿಗೆ ಹೊಟ್ಟೆ ನೋವು ಹಾಗು ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರಜ್ವಲ್ ಬಂಧನಕ್ಕೆ ಇಂಟರ್‌ಪೋಲ್ ತನ್ನ ಬಲೆ ಬೀಸಿದೆ,