ದೇಶದಲ್ಲಿ ದಿನಕ್ಕೆ 13 ಸರ್ಕಾರಿ ಶಾಲೆಗಳು ಬಂದ್; ಯುಡಿಐಎಸ್ಇ ವರದಿಯಲ್ಲಿ ಆಘಾತಕಾರಿ ಸತ್ಯ ಬಯಲು!

ಹೊಸದೆಹಲಿ: ಭಾರತದಲ್ಲಿ 2025-26ರ ಶೈಕ್ಷಣಿಕ ವರ್ಷದಲ್ಲಿ ಪ್ರತಿ ದಿನ ಸರಾಸರಿ 13 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ದೇಶಾದ್ಯಂತ ಕೇವಲ ಒಂದು ವರ್ಷದ ಅವಧಿಯಲ್ಲಿ ಒಟ್ಟು 4,791 ಶಾಲೆಗಳು ಬಂದ್ ಆಗಿವೆ ಎಂದು ಯುಡಿಐಎಸ್ಇ ಬಿಡುಗಡೆ ಮಾಡಿರುವ ತಾಜಾ ವರದಿ ಬಹಿರಂಗಪಡಿಸಿದೆ.

ಈ ಪೈಕಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಅತ್ಯಧಿಕ ಅಂದರೆ 2,426 ಶಾಲೆಗಳನ್ನು ಮುಚ್ಚಲಾಗಿದ್ದು, ಇದು ದೇಶಾದ್ಯಂತ ಮುಚ್ಚಲ್ಪಟ್ಟ ಒಟ್ಟು ಶಾಲೆಗಳ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿದೆ. 2024-25ರಲ್ಲಿ ದೇಶದಲ್ಲಿ ಒಟ್ಟು 14,71,473 ಶಾಲೆಗಳಿದ್ದವು. ಆದರೆ 2025-26ರ ವೇಳೆಗೆ ಈ ಸಂಖ್ಯೆ 14,66,682ಕ್ಕೆ ಕುಸಿದಿದೆ.

ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಪರಸ್ಪರ ವಿಲೀನಗೊಳಿಸುತ್ತಿರುವುದೇ ಶಾಲೆಗಳ ಸಂಖ್ಯೆ ಕಡಿಮೆ ಆಗಲು ಪ್ರಮುಖ ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಕೆಲವು ರಾಜ್ಯಗಳಲ್ಲಿ ಹೊಸ ಶಾಲೆಗಳ ಸಂಖ್ಯೆ ಹೆಚ್ಚಾಗಿರುವುದು ಗಮನಾರ್ಹ. ಬಿಹಾರದಲ್ಲಿ 946, ಛತ್ತೀಸ್‌ಗಢದಲ್ಲಿ 234 ಮತ್ತು ದೆಹಲಿಯಲ್ಲಿ 87 ಹೊಸ ಶಾಲೆಗಳು ಆರಂಭವಾಗಿವೆ.

ಹೊಸ ಶಾಲೆಗಳು ತೆರೆದಿದ್ದರೂ ಸಹ ಬಿಹಾರದಲ್ಲಿ 4,37,037, ಛತ್ತೀಸ್‌ಗಢದಲ್ಲಿ 79,459 ಹಾಗೂ ದೆಹಲಿಯಲ್ಲಿ 45,250 ರಷ್ಟು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿದಿದೆ.

ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳು

ದೇಶದ ಒಟ್ಟು 5,663 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಇಲ್ಲ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಇಂತಹ ಶಾಲೆಗಳಲ್ಲಿ ಇನ್ನೂ 20,000 ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಶೂನ್ಯ ವಿದ್ಯಾರ್ಥಿಗಳನ್ನು ಹೊಂದಿದ್ದ ಶಾಲೆಗಳ ಸಂಖ್ಯೆ 7,993 ರಿಂದ 5,663 ಕ್ಕೆ ಇಳಿಕೆಯಾಗಿದೆ.

ಕಡಿಮೆಯಾದ ಏಕ-ಶಿಕ್ಷಕ ಶಾಲೆಗಳು

ದೇಶದಲ್ಲಿ ಇದೇ ಮೊದಲ ಬಾರಿಗೆ ಒಬ್ಬರೇ ಶಿಕ್ಷಕರಿರುವದೇಶದಲ್ಲಿ ದಿನಕ್ಕೆ 13 ಸರ್ಕಾರಿ ಶಾಲೆಗಳು ಬಂದ್; ಯುಡಿಐಎಸ್ಇ ವರದಿಯಲ್ಲಿ ಆಘಾತಕಾರಿ ಸತ್ಯ ಬಯಲು! ಶಾಲೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2024-25ರಲ್ಲಿ 1,04,125 ರಷ್ಟಿದ್ದ ಏಕ-ಶಿಕ್ಷಕ ಶಾಲೆಗಳ ಸಂಖ್ಯೆ 2025-26ರಲ್ಲಿ 1,00,843 ಕ್ಕೆ ತಗ್ಗಿದೆ. ಆದರೆ, ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ಮಾತ್ರ ಇಂತಹ ಶಾಲೆಗಳ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ.

Related Articles

ಇತ್ತೀಚಿನ ಸುದ್ದಿಗಳು