Wednesday, August 6, 2025

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ ಹೆಚ್ಚಿದ ವಿಮಾನ ದುರಂತಗಳು ; ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ

ಅಹಮದಾಬಾದ್ ವಿಮಾನ ದುರಂತದ ನಂತರ ದೇಶದಲ್ಲಿ ವಿಮಾನ ದುರ್ಘಟನೆ ಒಂದರಿಂದ ಹಿಂದೆ ಒಂದು ನಡೆಯುತ್ತಿರುವುದು ಈಗ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಸಂಸತ್ತಿನಲ್ಲಿ ಎದ್ದ ಚರ್ಚೆಯ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರಾಜ್ಯಸಭೆಗೆ ಮಾಹಿತಿ ನೀಡಿದರು.

“2025 ರಲ್ಲಿ, ಜನವರಿಯಿಂದ ಜುಲೈವರೆಗೆ (ಇಲ್ಲಿಯವರೆಗೆ), ಒಟ್ಟು 6 ಎಂಜಿನ್ ಸ್ಥಗಿತದ ಘಟನೆಗಳು ಮತ್ತು ಮೇ ಡೇ ಕರೆಗಳ ಒಟ್ಟು 3 ಘಟನೆಗಳು ವರದಿಯಾಗಿವೆ” ಎಂದು ಸಚಿವ ಮುರಳೀಧರ ಮೋಹೋಲ್ ಹೇಳಿದರು.

ವಿಮಾನ ದುರಂತದಲ್ಲಿ ಒಟ್ಟಾರೆಯಾಗಿ ಇಂಡಿಗೊ ಮತ್ತು ಸ್ಪೈಸ್ ಜೆಟ್ ನಲ್ಲಿ ತಲಾ ಒಂದು ಮತ್ತು ಅಲಯನ್ಸ್ ಏರ್ ಮತ್ತು ಏರ್ ಇಂಡಿಯಾದಲ್ಲಿ ತಲಾ ಒಂದು ವಿಮಾನಯಾನ ಸಂಸ್ಥೆಗಳನ್ನು ಒಳಗೊಂಡ ಆರು ಎಂಜಿನ್ ಸ್ಥಗಿತದ ಪ್ರಕರಣ ದಾಖಲಾಗಿವೆ ಎಂದು ಲಿಖಿತ ವರದಿ ನೀಡಿದ್ದಾರೆ.

ಜೂನ್ 12 ರಂದು ಸಂಭವಿಸಿದ ಅಪಘಾತದ ತನಿಖೆಯ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಜುಲೈ 12 ರಂದು ಲಭ್ಯವಿರುವ ವಾಸ್ತವಿಕ ಮಾಹಿತಿಯ ಆಧಾರದ ಮೇಲೆ ಪ್ರಕಟವಾದ ವಿಮಾನ ಅಪಘಾತ ತನಿಖಾ ಬ್ಯೂರೋದ ಪ್ರಾಥಮಿಕ ವರದಿಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಯಾವುದೇ ತೀರ್ಮಾನವಿಲ್ಲ ಮತ್ತು ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page