ಜಸ್ಟೀಸ್ ನಾಗಮೋಹನ್ ದಾಸ್ ವರದಿಯಂತೆ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ A ಪ್ರಾಶಸ್ತ್ಯ ನೀಡಿ ಶೇ 1 ಮೀಸಲಾತಿ ನೀಡಿದ್ದ ವರದಿಯನ್ನು ಪರಿಷ್ಕರಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಅನ್ಯಾಯ ಮಾಡಿರುವುದನ್ನು ಖಂಡಿಸಿ ಪ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಸತ್ಯಾಗ್ರಹದ ಟೆಂಟ್ ವಿಪರೀತ ಮಳೆಗೆ ಸಿಲುಕಿ ಮಗುಚಿ ಬಿದ್ದಿದೆ.
ಎಷ್ಟೆ ಮಳೆ ಗಾಳಿ ಬರಲಿ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ, ನಮ್ಮ ಪ್ರಾಣ ಹೋದರೂ ಹೋಗಲಿ ನಮಗಾದ ಅನ್ಯಾಯಕ್ಕೆ ನ್ಯಾಯ ಸಿಗುವವರೆಗೂ ಇಲ್ಲೆ ಇದೆ ಮಳೆಯಲ್ಲೇ ಹೋರಾಟ ನಡೆಸುತ್ತೇವೆ ಎಂದು ಅಸ್ಪೃಶ್ಯ ಅಲೆಮಾರಿ ಸಮುದಾಯದ ಮುಖಂಡರು ತಿಳಿಸಿದ್ದಾರೆ.