Home ರಾಜ್ಯ ಉತ್ತರ ಕನ್ನಡ ಉತ್ತರ ಕನ್ನಡ ಜಿಲ್ಲೆ: ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಸುನೀಲ್ ನಾಯಕ್ ಚಾಲನೆ

ಉತ್ತರ ಕನ್ನಡ ಜಿಲ್ಲೆ: ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಸುನೀಲ್ ನಾಯಕ್ ಚಾಲನೆ

0

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಕೋ ಬೀಚ್‌ನಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಬೀಚ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಸುನೀಲ್ ನಾಯಕ್ ಚಾಲನೆ ನೀಡಿದರು.

ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೀಚ್ ವಾಲಿಬಾಲ್ ಪಂದ್ಯಾವಳಿ ನಡೆಸುವ ಮೂಲಕ ಜಿಲ್ಲೆಯನ್ನು ಕ್ರೀಡಾ ಪ್ರವಾಸೋದ್ಯಮ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಹೊನ್ನಾವರದ ಇಕೋ ಬೀಚ್‌ನಲ್ಲಿ ವಾಲಿಬಾಲ್‌ ಪಂದ್ಯಾವಳಿ ನಡೆಯುತ್ತಿರುವ ದೃಶ್ಯ

ಕೇರಳದ ವಾಲಿಬಾಲ್ ಆಟಗಾರ್ತಿ ಅಮೃತ ಮಾತನಾಡಿ, ಹೊನ್ನಾವರದ ಸುಂದರ ಕಡಲತೀರದಲ್ಲಿ ವಾಲಿಬಾನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದೇ ಸಂಭ್ರಮ. ಹೀಗಾಗಿ ಇಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು ಉತ್ತಮ ಕೌಶಲ್ಯ ಪ್ರದರ್ಶಿಸಲಿ ಎಂದು ಹಾರೈಸಿದರು.

ಪಂದ್ಯಾವಳಿಯಲ್ಲಿ 8 ರಾಜ್ಯಗಳ 20 ತಂಡಗಳು ಪಾಲ್ಗೊಂಡಿವೆ.

You cannot copy content of this page

Exit mobile version