ರೈಲ್ವೆ ನೇಮಕಾತಿ ಮಂಡಳಿ ಮತ್ತೊಂದು ಉದ್ಯೋಗ ಅಧಿಸೂಚನೆ ಬಿಡುಗಡೆ ಮಾಡಿದೆ. ದೇಶಾದ್ಯಂತ 8,113 ಹುದ್ದೆಗಳನ್ನು ಭರ್ತಿ ಮಾಡಲು ಅದು ನೇಮಕಾತಿ ಅಧಿಸೂಚನೆ ಹೊರಡಿಸಿದೆ.
ಕ್ರಮವಾಗಿ ರೈಲ್ವೇ ಇಲಾಖೆಯು 3,144 ಗೂಡ್ಸ್ ಟ್ರೈನ್ ಮ್ಯಾನೇಜರ್, 1,736 ಟಿಕೆಟ್ ಸೂಪರ್ ವೈಸರ್, 1,507 ಟೈಪಿಸ್ಟ್, 994 ಸ್ಟೇಷನ್ ಮಾಸ್ಟರ್ ಮತ್ತು 732 ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಕರೆದಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿಯನ್ನು ಪೂರ್ಣಗೊಳಿಸಿರಬೇಕು. 18ರಿಂದ 36 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 13ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ರೈಲ್ವೆ ಮಂಡಳಿ ಅವಕಾಶ ನೀಡಿದೆ. ಅದೇ ರೀತಿ ಅಕ್ಟೋಬರ್ 16ರಿಂದ 25ರವರೆಗೆ ಅರ್ಜಿಗಳನ್ನು ಮಾರ್ಪಾಡು ಮಾಡಲು ಮಂಡಳಿ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ರೂ.500 ಶುಲ್ಕ ಪಾವತಿಸಬೇಕು. ಆದರೆ ಪರೀಕ್ಷೆಗೆ ಹಾಜರಾದವರಿಗೆ ರೂ.400 ಮರುಪಾವತಿ ಮಾಡಲಾಗುತ್ತದೆ. ಪರೀಕ್ಷೆಗೆ ಹಾಜರಾಗಿ ಕೆಲಸಕ್ಕೆ ಅರ್ಹತೆ ಪಡೆದವರಿಗೆ ತಿಂಗಳಿಗೆ ರೂ.29,200ರಿಂದ ರೂ.35,400 ತನಕ ವೇತನ ದೊರೆಯುತ್ತದೆ. ಈ ಅಧಿಸೂಚನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳಿಗಾಗಿ RRB ಅಧಿಕೃತ ವೆಬ್ಸೈಟ್ https://www.rrbapply.gov.in/ ನೋಡಬಹುದು.
ಈ ಹುದ್ದೆಗಳ ಜೊತೆಗೆ 3,445 ಪದವಿಪೂರ್ವ ಮಟ್ಟದ ಹುದ್ದೆಗಳೂ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 21ರಿಂದ ಆರಂಭವಾಗಲಿದ್ದು, ಅಕ್ಟೋಬರ್ 20ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅರ್ಹ ಅಭ್ಯರ್ಥಿಗಳು ಈ ದಿನಾಂಕಗಳ ಪ್ರಕಾರ ಅರ್ಜಿ ಸಲ್ಲಿಸಬಹುದು. ಪದವಿಪೂರ್ವ ಹುದ್ದೆಗಳಿಗೆ ಇಂಟರ್ ಮೀಡಿಯೇಟ್ ತೇರ್ಗಡೆಯಾಗಿರಬೇಕು.