ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೋಗಿಯಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ

ಭೋಪಾಲ್:‌ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಹೊಸದೆಹಲಿಗೆ ತೆರಳುತ್ತಿದ್ದ ವಂದೇ ರೈಲಿನ ಬೋಗಿಯೊಂದರ ಬ್ಯಾಟರಿ ಬಾಕ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋಗಿಯೊಳಗೆ ಸುಮಾರು 20-22 ಪ್ರಯಾಣಿಕರಿದ್ದರು. ನಂತರ ಅವರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಳಿಗ್ಗೆ 6.45 ರ ಸುಮಾರಿಗೆ ಸಿ -12 ಬೋಗಿಯ ಬ್ಯಾಟರಿ ಬಾಕ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕೆಲವು ರೈಲ್ವೆ ಸಿಬ್ಬಂದಿ ಗಮನಿಸಿದರು, ನಂತರ ರಾಣಿ ಕಮಲಾಪತಿ-ಹಜರತ್ ನಿಜಾಮುದ್ದೀನ್ ವಂದೇ ಭಾರತ್ ರೈಲನ್ನು ತಕ್ಷಣ ವಿದಿಶಾ ಜಿಲ್ಲೆಯ ಕುರ್ವಾಯಿ ಮತ್ತು ಕೈಥೋರಾ ನಿಲ್ದಾಣಗಳ ನಡುವೆ ನಿಲ್ಲಿಸಲಾಯಿತು ಎಂದು ಅವರು ಹೇಳಿದರು.

ಬೆಂಕಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದು, ರೈಲ್ವೆ ಸಿಬ್ಬಂದಿ ದುರಸ್ತಿ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು