Home ಅಂಕಣ ವಂದೇ ಮಾತರಂ, ಇಸ್ಲಾಂ ಮತ್ತು ಬಿಜೆಪಿ!

ವಂದೇ ಮಾತರಂ, ಇಸ್ಲಾಂ ಮತ್ತು ಬಿಜೆಪಿ!

0

“..ಈ ದೇಶವನ್ನು ಆಳಲು ಬಿಜೆಪಿ ಎಂಬ ಪಕ್ಷಕ್ಕೆ ಸಾಧ್ಯವಾಗಿದ್ದೆ ಒಡೆದು ಆಳುವ ನೀತಿಯಿಂದ. ಬಾಬರಿ ಮಸೀದಿ ದ್ವಂಸದಿಂದ ಪ್ರಾರಂಭಿಸಿ ಈಗಿನ ವಂದೇ ಮಾತರಂ ಕೂಡ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವ ತಂತ್ರಗಳು..” ಅಬ್ಬಾಸ್ ಕಿಗ್ಗ ಅವರ ಬರಹದಲ್ಲಿ

ಎಲ್ಲಾವೂ   ಚೆನ್ನಾಗಿದೆ‌. ಈ ದೇಶದ ಪ್ರಸ್ತುತ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ ಯಾರಿಗೂ ಸಮಸ್ಯೆ ಇಲ್ಲ. ನಮ್ಮದು ಎಂಬ ಭಕ್ತಿ ಮತ್ತು ಪ್ರೇಮದಿಂದ ಪ್ರತಿಯೊಬ್ಬರು ಈ ದೇಶವನ್ನು, ದೇಶದ ಮೌಲ್ಯವನ್ನು ಗೌರವಿಸುತ್ತಿದ್ದಾರೆ. ಆದರೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಹಣೆ ಬರಹ ಸರಿ ಇದ್ದಂತೆ ಕಾಣುತ್ತಿಲ್ಲ. ಟ್ರಂಪ್ ಎಂಬ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿದ ವ್ಯಕ್ತಿ ಜಗತ್ತಿನ ದೊಡ್ಡಣ್ಣ ಅನಿಸಿದ ಅಮೇರಿಕಾದ ಚುಕ್ಕಾಣಿಯ ಅಧ್ಯಕ್ಷ. ಹೇಳಿ ಕೇಳಿ ಜಗತ್ತನ್ನು ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ತವಕ. ಆ ತವಕಕ್ಕೆ ಆತ ಪದೇ ಪದೇ ಎತ್ತುವ ಹೆಸರು ಭಾರತ. ಭಾರತ ಮತ್ತು   ಪಾಕಿಸ್ತಾನದ ಯುದ್ಧವನ್ನು ನಾನೇ ನಿಲ್ಲಿಸಿದ್ದು ಅನ್ನುವ ವಾಕ್ಯ ಆತ ಹೇಳಿ ಹೇಳಿ ಸುಸ್ತಾಗಿದ್ದರೂ ನಮ್ಮವರ ಮೌನ ಅಚ್ಚರಿ ಹುಟ್ಟಿಸುವಂತದ್ದು.

ಈಗ ಆತ ಮುಂದುವರೆದು ನಮ್ಮ ಪ್ರಧಾನಿ ಕೊಡಬಹುದಾದ ವರದಿಗಳನ್ನು ಆತನೇ ನಿಭಾಯಿಸುತ್ತಿದ್ದಾನೆ! ಭಾರತದ ಸಂಸತ್ತು ಹೊರಡಿಸಬೇಕಾದ ವರದಿಗಳನ್ನು ಶ್ವೇತಭವನ ಹೊರಡಿಸುತ್ತಿದೆ. ಇದು ನಮ್ಮನ್ನು ಆಳುವವರನ್ನು ದೇಶದ ಒಳಗೂ ಹೊರಗು ಪೇಚಿಗೆ ಸಿಕ್ಕಿಸುತ್ತಿದೆ. ದೇಶದ ಸುತ್ತಲೂ ಮಿತ್ರರಿಗಿಂತಲೂ ಶತ್ರುಗಳೆ ಹೆಚ್ಚಾದಂತೆ ಬಾಸವಾಗುತ್ತಿದೆ. ಚೀನಾ ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ಹೊಸ ಸೇರ್ಪಡೆ ಅನಿಸುತ್ತದೆ. ಇಂತಹ ಸಮಯದಲ್ಲಿ ನಮ್ಮ ನಂಬಿಕಾರ್ಹ ಸ್ನೇಹಿತನಾಗಿ ಜೊತೆಗಾರನಾಗಿ ನಿಲ್ಲಬಹುದಾದ ರಷ್ಯಾದ ಸಂಬಂಧವನ್ನು ಟ್ರಂಪ್ ನ ಅನತಿಯ ಪ್ರಕಾರ ದೂರ ತಳ್ಳಲಾಗುತ್ತಿದೆ. ಒಟ್ಟಿನಲ್ಲಿ ಭಾರತದ ರಾಜತಾಂತ್ರಿಕತೆ ಅತ್ಯಂತ ಕಳಪೆ ಮಟ್ಟದ್ದು ಅನ್ನುವ ಅಭಿಪ್ರಾಯ ದೇಶದ ಒಳಗೂ ಪಸರಿಸಿ ಮೋದಿ ಎಂಬ ಐವತ್ತಾರು ಇಂಚಿನ ಎದೆಯನ್ನು ಸೀಳುತ್ತಿದೆ.

ಈ ದೇಶವನ್ನು ಆಳಲು ಬಿಜೆಪಿ ಎಂಬ ಪಕ್ಷಕ್ಕೆ ಸಾಧ್ಯವಾಗಿದ್ದೆ ಒಡೆದು ಆಳುವ ನೀತಿಯಿಂದ. ಬಾಬರಿ ಮಸೀದಿ ದ್ವಂಸದಿಂದ ಪ್ರಾರಂಭಿಸಿ ಈಗಿನ ವಂದೇ ಮಾತರಂ ಕೂಡ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವ ತಂತ್ರಗಳು. ದೇಶದ ಹದಿನಾಲ್ಕು ಪರ್ಷೆಂಟ್ ಇರುವ ಮುಸ್ಲಿಮರಿಂದ ಇಡೀ ಹಿಂದೂ ಸಮಾಜಕ್ಕೆ ಕಂಟಕ ಇದೆ ಅನ್ನುವುದು ನಂಬಿಸಲು ಸಂಘ ಪರಿವಾರ ಮತ್ತು ಬಿಜೆಪಿ ಹಗಲಿರುಳು ಶ್ರಮಿಸಿದ ಕಾರಣ ಈ ದಿನ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಅಧಿಕಾರ ಹಿಡಿದಿದೆ. ಆದರೇ ಅಧಿಕಾರವನ್ನು ನಿಭಾಯಿಸಲು ಅದಕ್ಕೆ ಇನ್ನಷ್ಟು ವಿವಾದಗಳು ಬೇಕು. ರಾಮಮಂದಿರ ಈಗ ತಾರ್ಕಿಕ ಅಂತ್ಯ ಕಂಡಿರುವ ಕಾರಣ ಈಗ ಮುಸ್ಲಿಮರನ್ನು ಖಳನಾಯಕನ್ನಾಗಿಸಲು ವಂದೇ ಮಾತರಂ ನೆಪವಷ್ಟೆ ಅಲ್ಲದೇ ಯಾವ ದೇಶಪ್ರೇಮವೂ ಇಲ್ಲ.

ಜಗತ್ತಿನ ಅತ್ಯಂತ ಸುಂದರ, ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಕೊಂಡ ದೇಶ. ಇಂತಹ ದೇಶದಲ್ಲಿ ಎಲ್ಲಾರಿಗೂ ಒಪ್ಪುವಂತಹ ಒಂದು ಸಮಾನತೆಯ ರಾಷ್ಟ್ರಧ್ವಜ, ರಾಷ್ಟ್ರಗೀತೆ  ಸಂವಿಧಾನ ಅಷ್ಟು ಸುಲಭದ ಮಾತಲ್ಲ. ನಮ್ಮ ರಾಷ್ಟ್ರಧ್ವಜದಲ್ಲಿ ಒಂದೇ ಒಂದು ಪ್ರಾಣಿಯ ಚಿತ್ರವಿದ್ದರೂ ಸಹ ಮುಸ್ಲಿಮರು ಅದನ್ನು ಮನೆಯ ಗೋಡೆಗೆ ತೂಗು ಹಾಕಲು ಹಿಂಜರಿಯುತ್ತಿದ್ದರು‌. ಆದರೇ ಅಗಿನ ಕಾಲದವರ ದೂರದೃಷ್ಟಿ ಮತ್ತು ವಿವಾದ ರಹಿತವಾದ ಭಾರತಕ್ಕಾಗಿ ಎಲ್ಲಾರೂ ಒಪ್ಪುವಂತೆ ಭಾರತವನ್ನು ಸೃಷ್ಟಿಲಾಯಿತು.

ವಂದೇ ಮಾತರಂ ಕೂಡ ಆ ಕಾಲದ ಜನಪ್ರಿಯ ಗೀತೆಯಾದರೂ ಸಹ ರಾಷ್ಟ್ರಗೀತೆಯಾಗದೇ ಉಳಿಯಲು ಕಾರಣ ಧಾರ್ಮಿಕ ಸೂಕ್ಷ್ಮತೆ. ಪ್ರತಿಯೊಬ್ಬರೂ ಸಹ ರಾಷ್ಟ್ರಗೀತೆಯನ್ನು ಯಾವುದೇ ವಿವಾದವಿಲ್ಲದೆ ಅಂಗಿಕರಿಸಲು 1950 ಜನವರಿ 24ರಂದು ಜನಗಣಮನ ರಾಜೇಂದ್ರ ಪ್ರಸಾದ್ ಅಧಿಕೃತವಾಗಿ ಘೋಷಿಸಿದರು.

ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ಭಾರತಮಾತೆಯ ಸೌಂದರ್ಯವನ್ನು ವರ್ಣಿಸುತ್ತವೆಯಾದರೂ, ನಂತರದ ಚರಣಗಳಲ್ಲಿ ದುರ್ಗೆ, ಲಕ್ಷ್ಮಿ ಮುಂತಾದ ಹಿಂದೂ ದೇವತೆಗಳ ಉಲ್ಲೇಖವಿದೆ. ಇದು ಇಸ್ಲಾಂನ ಏಕದೇವತಾ ನಂಬಿಕೆಗೆ ವಿರುದ್ಧ. ಇದನ್ನೆ ಮುಸ್ಲಿಮರು ವಿರೋಧ ಮಾಡುತ್ತಿರುವುದೇ ಹೊರತು ದೇಶವನ್ನಲ್ಲ. ಈ ಹಿಂದೆಯೇ ದೇಶ ಕಟ್ದುವಾಗಲೇ ಇದು ದೊಡ್ಡ ವಿವಾದ ಆದ ಕಾರಣ ರವೀಂದ್ರನಾಥ ಠಾಗೋರ್, ಮಹಾತ್ಮಾ ಗಾಂಧೀಜಿ ಮತ್ತು ಇತರ ನಾಯಕರು ಸೇರಿದ ಸಮಿತಿ ಈ ಗೀತೆಯನ್ನು ಸಂಪೂರ್ಣವಾಗಿ ಅಂಗೀಕರಿಸದೆ, ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆ (national song) ಎಂದು ಆಯ್ಕೆ ಮಾಡಿತು. ಇದರ ಹಿಂದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶವಿತ್ತು.

1948ರಲ್ಲಿ ನೆಹರೂ ಅವರು ‘ವಂದೇ ಮಾತರಂ’ನ ಸ್ವರ ಮತ್ತು ಲಯವು ಆರ್ಕೆಸ್ಟ್ರಾ/ಬ್ಯಾಂಡ್‌ಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಅದು ಸ್ವಲ್ಪ ದುಃಖಮಯ, ಪುನರಾವರ್ತನೆಯಿಂದ ಕೂಡಿದೆ.

ವಿದೇಶಿಯರಿಗೆ ಅರ್ಥವಾಗುವುದು ಕಷ್ಟ.

ಭಾಷೆ ಸಾಮಾನ್ಯ ಜನರಿಗೆ ಕಷ್ಟಕರ.
ಇದಕ್ಕೆ ವಿರುದ್ಧವಾಗಿ ‘ಜನ ಗಣ ಮನ’ ಸರಳ, ಜಯಕಾರದ ಸ್ವರವನ್ನು ಹೊಂದಿದೆ ಮತ್ತು ಸಂಗೀತಕ್ಕೆ ಹೆಚ್ಚು ಸೂಕ್ತವೆಂದು ನೆಹರು ಪ್ರತಿಪಾದಿಸಿದರು.

ಹೀಗೆ ವಿವಾದ ರಹಿತವಾಗಿ ನಡೆಯುತ್ತಿದ್ದ ದೇಶವನ್ನು , ಕೇವಲ ಒಡೆದಾಳುವ ನೀತಿಯ ಕಾರಣಕ್ಕಾಗಿ ಬಿಜೆಪಿ ವಂದೇ ಮಾತರಂ ಮುನ್ನಲೆಗೆ ತಂದಿದೆ.

ಇನ್ನೂ ವಂದೇ ಮಾತರಂ ವಿರೋಧಿಸಲು ಮುಸ್ಲಿಮರಿಗೆ ಇರುವ ಕಾರಣ ಸಾಮಾನ್ಯ ಹಿಂದೂಗಳು ಅರಿತರೇ ಈ ಕುರಿತು ಅನುಮಾನಗಳು ಪರಿಹಾರವಾಗಿ ಆಳುವವರ ಕುತಂತ್ರವೂ ಬಯಲಾಗಬಹುದು‌.

ಭಾರತವನ್ನು ದೇಶ ಅಂತಲೂ , ತಾಯಿ ಅಂತಲೂ ಯಾವುದೇ ತಕರಾರು ಇಲ್ಲದೇ ಒಪ್ಪಿಕೊಳ್ಳುವ ಮುಸ್ಲಿಮರಿಗೆ ದೇಶವನ್ನು ದೇವರು ಎಂದು ವಂದಿಸಲು ತಕರಾರು ಇದೆ.

ಇಸ್ಲಾಂ ಧರ್ಮ ಇರುವುದೇ ಹಾಗೆ ಮುಸ್ಲಿಮರ ಮನೆಗಳಲ್ಲಿ ಹುಟ್ಟಿಸಿದ ತಂದೆ ತಾಯಿಯ ಪೋಟೋ ಕಾಣಲು ಸಾಧ್ಯವಿಲ್ಲ ಆಂದರೆ ಭಾರತದ ಭೂಪಟ ಕಾಣಬಹುದು. ಅಂದರೇ ತಂದೆ ತಾಯಿಯ ಫೋಟೋಗಳನ್ನು ತೂಗು ಹಾಕುವುದು ಧಾರ್ಮಿಕವಾಗಿ ನಿಷಿದ್ಧ‌. ಇನ್ನೂ ಹುಟ್ಟಿಸಿದ ತಂದೆ ತಾಯಿ ಆಗಲಿ ಗುರು ಹಿರಿಯರೇ ಗೌರವಕ್ಕೆ ಅರ್ಹರೇ ಹೊರತು ದೇವರಂತೆ ಪೂಜಿಸಲು ಅಲ್ಲ. ಸ್ವತಃ ತಂದೆ ತಾಯಿಗೆ ಕಾಲಿಗೆರಗಲು ಇಸ್ಲಾಂ ಅನುಮತಿ ನೀಡುವುದಿಲ್ಲ‌.‌ ಇದು ಏಕ ದೇವ ವಿಶ್ವಾಸ.

ಈ ಕಾರಣಕ್ಕಾಗಿ ಮುಸ್ಲಿಮರು ವಂದೇ ಮಾತರಂ ವಿರೋಧ ಮಾಡುತ್ತಾರೆ  ದೇಶವನ್ನು ದೇವರು ಅನ್ನೋದಿಲ್ಲ ಹೊರತು ತನ್ನ ದೇಶವನ್ನು ತನ್ನ ತಾಯಿಯಷ್ಟೆ ಪ್ರೀತಿಸಬಲ್ಲರು, ಗೌರವಿಸ ಬಲ್ಲರು.

ಆದರೆ ಕುತಂತ್ರಿಗಳಿಗೆ ಇದರ ಸ್ಪಷ್ಟವಾದ ಅರಿವಿದೆ. ಹಾಗಾಗಿ‌ ರಾಷ್ಟ್ರಗೀತೆಯಿಂದ ಯಾವುದೇ ವಿಧವಾದ ವಿವಾದಗಳು ಇಲ್ಲ ಅಂದ ತಕ್ಷಣ ವಂದೇ ಮಾತರಂ ಕಡ್ಡಾಯ ಮಾತುಗಳು ಬರುತ್ತದೆ. ಸಹಜವಾಗಿ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತ ಪಡಿಸುತ್ತದೆ. ದೇಶದ ಮುಸ್ಲಿಮರನ್ನು ಖಳನಾಯಕರಾಗಿ, ದೇಶದ್ರೋಹಿಗಳಾಗಿ ಚಿತ್ರಿಸಿ ಇನ್ನೊಂದಿಷ್ಡು ಒಡೆದು ಆಳುವ ದುಷ್ಟ ತಂತ್ರವೇ ಹೊರತು ದೇಶದ ಮೇಲಿಟ್ಟ ಪ್ರೀತಿ ಖಂಡಿತ ಅಲ್ಲ.

You cannot copy content of this page

Exit mobile version