ಹಾಸನ : ಹಿರಿಯ ಹೋರಾಟಗಾರರು ಹೆಚ್ ಎಂ ಶಿವಣ್ಣ ರವರು ಮದ್ಯಾಹ್ನ 3:30 ಕ್ಕೆ ನಿಧನರಾಗಿದ್ದರು, ಕೆಲವು ತಿಂಗಳುಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದು ಚೇತರಿಸಿಕೊಂಡಿದ್ದರು ನಂತರ ಪಾರ್ಶ್ಚವಾಯುವಿಗೆ ತುತ್ತಾಗಿ ಮತ್ತೆ ಆಸ್ಪತ್ರೆಗೆ ಸೇರಿದ್ದರು. ನಂತರದಲ್ಲಿ ಮತ್ತೆ ಸಮಸ್ಯೆ ಹೆಚ್ಚಾಗಿ ಮೂರನೇ ಬಾರಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಕಳೆದ ಒಂದು ತಿಂಗಳಿನಿಂದ ಪ್ರಗ್ನೆ ತಪ್ಪಿದ್ದರು ಅವರಿಗೆ ನಿರಂತರವಾಗಿ ಜನಪ್ರಿಯ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.
ನಾಳೆ ಮದ್ಯಾಹ್ನ ಅವರ ಉದಯಪುರ ಸಮೀಪ ಬಳದರೆ ಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಅವರು ಮೂಲತಹ ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾ ಹಂಗಳ ಗ್ರಾಮದಲ್ಲಿ 1933ರ ಮಾರ್ಚ್ 1 ರಂದು ಅವರ ಜನನ, ಅವರು ಸಣ್ಣ ವಯಸ್ಸಿನಲ್ಲೆ ಹೋರಾಟಕ್ಕೆ ಪಾಲ್ಗೊಳ್ಳುತ್ತಿದ್ದರು. ಶಿವಣ್ಣರವರ ಕ್ರಿಯಾಶೀಲತೆ ಗಮನಿಸಿದ ಹಿರಿಯ ನಾಯಕಿ ಯಶೋದರಮ್ಮ ದಾಸಪ್ಪರವರು ಶಿವಣ್ಣವರನ್ನು ಹಾಸನಕ್ಕೆ ಕರೆತಂದು ಕಸ್ತೂರಬಾ ಆಶ್ರಮದ ಟ್ರಸ್ಟಿಗೆ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿದ್ದರು. ನಗರದ ಗೃಹ ರಕ್ಷಕ ದಳದಲ್ಲಿ ಹಲವಾರು ಜಿಲ್ಲಾ ಕಮಾಂಡೆಂಟ್ ಆಗಿಕೆಲಸ ನಿರ್ವಹಿಸಿದರು ಮತ್ತು ಜಿಲ್ಲೆ ಅಗ್ನಶಾಮಕ ದಳ ಸ್ಥಾಪನೆಗೆ ಅವರಕೊಡುಗೆ ಅಪಾರ ಹಾಗೂ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಭಾರತ ಸೇವಾ ದಳದ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಅನೇಕ ಜನಪರ ಹೋರಾಟಗಳಲ್ಲಿ ಅವರ ತೊಡಗಿಸಿಕೊಂಡಿದ್ದರು. ಶಿವಣ್ಣ ರವರು ಹಾಸನಲ್ಲಿ ನಡೆಯುವ ಯಾವುದೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಶಿವಣ್ಣರವರು ಸರ್ಕಾರಿ ಕಾರ್ಯಕ್ರಮಗಳ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದರು. ಇವರು ಸರ್ವೋದಯ ಆಂದೋಲನಲ್ಲಿ ಪಾಲ್ಗೊಂಡು ಹಾಸನದ ಆತ್ಮ ಸಾಕ್ಷಿಯಾಗಿದ್ದರು. ಶಿವಣ್ಣರವರ ಸಾವಿಗೆ ಹಾಸನದ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.