Wednesday, June 19, 2024

ಸತ್ಯ | ನ್ಯಾಯ |ಧರ್ಮ

ND TV ಗೆ ರಾಜೀನಾಮೆ ನೀಡಿದ ಹಿರಿಯ ಪತ್ರಕರ್ತ ರವೀಶ್ ಕುಮಾರ್

RRPR ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ND TV ಚಾನೆಲ್‌ನ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡಿದ ಒಂದು ದಿನದ ನಂತರ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಬುಧವಾರ ND TV ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. ರವೀಶ್‌ ಕುಮಾರ್‌ ರಾಜೀನಾಮೆಯ ವಿಷಯವು ಎನ್‌ಡಿಟಿವಿಯ ಆಂತರಿಕ ಇಮೇಲ್‌ ಮೂಲಕ ಪ್ರಕಟಗೊಂಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ರಾಜೀನಾಮೆ ಅಂಗೀಕೃತವಾಗಿದೆ. ಈ ಮೂಲಕ ಎನ್‌ಡಿಟಿವಿಯು ಆದಾನಿ ಸಮೂಹದ ತೆಕ್ಕೆಗೆ ಸಂಪೂರ್ಣ ಬಿದ್ದಂತಾಗಿದೆ.

ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ರವೀಶ್ ಕುಮಾರ್ ಅವರು ಚಾನೆಲ್‌ನ ಪ್ರಮುಖ ವ್ಯಕ್ತಿಯಾಗಿ ಹೆಸರಾಗಿದ್ದರು. ಚಾನೆಲ್‌ನ ಪ್ರಮುಖ ವಾರದ ದಿನದ ಶೋ ಹಮ್ ಲೋಗ್, ರವೀಶ್ ಕಿ ರಿಪೋರ್ಟ್, ದೇಶ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಎರಡು ಬಾರಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸಹ ಪಡೆದ ಕೀರ್ತಿ ಅವರದ್ದಾಗಿದೆ. ಕರ್ನಾಟಕದಲ್ಲಿ ಕೊಡಮಾಡುವ ʼಗೌರಿ ಲಂಕೇಶ್‌ʼಯನ್ನು ಪಡೆದ ಮೊದಲ ಪತ್ರಕರ್ತ ರವೀಶ್‌ ಕುಮಾರ್‌ ಆಗಿದ್ದಾರೆ.

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿರುವ ಸಂಘಟಿತ ಸಂಸ್ಥೆಯಾಗಿದ್ದು, ಆಗಸ್ಟ್ 23 ರಂದು ಚಾನೆಲ್ NDTV ಲಿಮಿಟೆಡ್‌ನಲ್ಲಿ 29.18 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಆ ಸಂದರ್ಭದಲ್ಲೇ ರವೀಶ್ ಕುಮಾರ್ ಅವರ ರಾಜೀನಾಮೆ ವದಂತಿ ಹರಿದಾಡಿತ್ತು. ನವೆಂಬರ್ 28 ಕ್ಕೆ ಅದಾನಿ ಗ್ರೂಪ್ ND TVಯ ಸಂಪೂರ್ಣ 99 ರಷ್ಟು ಷೇರು ಪಡೆದುಕೊಂಡ ನಂತರ ರವೀಶ್ ಕುಮಾರ್ ಅವರ ರಾಜೀನಾಮೆ ನಿರೀಕ್ಷಿತ ಎಂದೇ ಪತ್ರಿಕೋದ್ಯಮ ವಲಯದಲ್ಲಿ ಹರಿದಾಡಿತ್ತು. ನಿರೀಕ್ಷೆಯಂತೆ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಎನ್‌ಡಿಟಿವಿ ಗ್ರೂಪ್‌ನ ಅಧ್ಯಕ್ಷೆ ಸುಪರ್ಣಾ ಸಿಂಗ್‌ ಅವರು, ʼರವೀಶ್‌ ಕುಮಾರ್‌ ಅವರು ಜನರನ್ನು ಪ್ರಭಾವಿಸಿರುವ ರೀತಿಯಲ್ಲಿ ಪ್ರಭಾವಿಸಿರುವ ಪತ್ರಕರ್ತರು ಬಹಳ ವಿರಳ. ಅವರ ಕುರಿತು ಬಂದಿರುವ ಅಭಿಪ್ರಾಯಗಳ ಮೂಲಕ ಇದು ತಿಳಿಯುತ್ತದೆ. ಅವರು ಹೋದಲ್ಲೆಲ್ಲಾ ಜನ ಸೇರುತ್ತಾರೆ. ಅವರಿಗೆ ದೊರೆತಿರುವ ಪ್ರತಿಷ್ಠಿತ ಪ್ರಶಸ್ತಿಗಳೂ ಇದಕ್ಕೆ ಸಾಕ್ಷಿಯಾಗಿವೆʼ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು