ಚಿತ್ರದುರ್ಗ : ವಿದ್ಯಾರ್ಥಿಯನ್ನು (Student) ಮನಸ್ಸೋ ಇಚ್ಛೆ ಥಳಿಸಿದ ಶಿಕ್ಷಕನನ್ನು (Teacher) ಇದೀಗ ಪೊಲೀಸರು ಬಂಧಿಸಿದ್ದಾರೆ (Arrest).
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಶಿಕ್ಷಕ ವಿದ್ಯಾರ್ಥಿಗೆ ಹಲ್ಲೆಗೈಯುವ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದವರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಂಧಿತ ಶಿಕ್ಷಕನನ್ನು ವೀರೇಶ್ ಹಿರೇಮಠ್ ಎಂದು ಗುರುತಿಸಲಾಗಿದೆ. ಈತ 9 ವರ್ಷದ ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪೋಷಕರಿಗೆ ಫೋನ್ ಮಾಡಿದ್ದ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯನ್ನು ಶಿಕ್ಷಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಮೂರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದನು. ತಪ್ಪಾಯಿತು ಬಿಟ್ಟು ಬಿಡಿ ಎಂದು ಕೈ ಮುಗಿದರೂ ಕೂಡ ಬಿಡದ ಶಿಕ್ಷಕ ಕಾಲಿನಿಂದ ಒದ್ದು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಯಕನ ಹಟ್ಟಿ ಗುರು ತಿಪ್ಪೇರುದ್ರ ಸ್ವಾಮಿ ದೇವಾಲಯದ ಸುಪರ್ಧಿಯ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.ಸದ್ಯ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ವಿದ್ಯಾರ್ಥಿಯ ಮೇಲಿನ ಹಲ್ಲೆಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿದ್ದು, ಮುಖ್ಯ ಶಿಕ್ಷಕ ವೀರೇಶ್ ಹಿರೇಮರ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಶಿಕ್ಷಕನ ವಿರುದ್ಧ ಮಠದ ಇಓ ಗಂಗಾಧರಪ್ಪ ನೀಡಿದ ದೂರು ನೀಡಿದ್ದರು. ಈ ಹಿನ್ನೆಲೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದು, ಈ ಸಂಬಂಧ ವಿರೇಶ್ ಹಿರೇಮಠ್ ಬಂಧಿಸಲಾಗಿದೆ.ಮೂಲಗಳ ಪ್ರಕಾರ, ಇದು ಒಂದು ವರ್ಷದ ಹಿಂದಿನ ವಿಡಿಯೋ ಎನ್ನಲಾಗಿದ್ದು, ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಂಸ್ಕೃತ ಶಿಕ್ಷಕನ ಕ್ರೌರ್ಯಕ್ಕೆ ಬೇಸತ್ತು ವಿದ್ಯಾರ್ಥಿ ಕಳೆದ ವರ್ಷವೇ ಶಾಲೆ ಬಿಟ್ಟಿದ್ದಾನೆ. ಟಿಸಿ ಪಡೆದು ತೆರಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಲಕನಿಗೆ ಮೈತುಂಬಾ ಬಾಸುಂಡೆ ಬರುವಂತೆ ಹಲ್ಲೆ: ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ 9 ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಶಿಕ್ಷಕರ ವಿರುದ್ದ ಪೋಷಕರು ಆಕ್ರೋಶ ಹಾಕಿದ್ದಾರೆ. ಎರಡು ದಿನ ಸ್ಕೂಲ್ ಗೆ ಬಂದಿಲ್ಲ ಎಂಬ ಕಾರಣಕ್ಕೆ ಪಿವಿಸಿ ಪೈಪ್ ನಿಂದ ವಿದ್ಯಾರ್ಥಿಯ ಪ್ರಿನ್ಸಿಪಾಲ್ ಹಲ್ಲೆ ನಡೆಸಿದ್ದು, ಕೂಲ್ ನ ಡಾರ್ಕ್ ರೂಂ ನಲ್ಲಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ತಿಂಗಳ 14 ರಂದು ಈ ಘಟನೆ ನಡೆದಿದ್ದು, ಎರಡು ದಿನ ರಜೆ ಹಾಕಿದ್ದಕ್ಕೆ ಬಾಲಕನಿಗೆ ಬಾಸುಂಡೆ ಬರುವಂತೆ ಪ್ರಿನ್ಸಿಪಾಲ್ ಮತ್ತು ಟೀಚರ್ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.