ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಭಿನ್ನಮತ ಸ್ಪೋಟಗೊಂಡಿದೆ. ಇದೀಗ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ.ಮಿಸ್ಟರ್ ಬಿ ವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದೀರಲ್ಲ ಯಾಕೆ ಎಂದು ಗುಡುಗಿದ್ದಾರೆ.
ವಿಜಯೇಂದ್ರ ಯಾರನ್ನು ವಿಶ್ವಾಸಕ್ಕೆ ತಗೊಂಡು ಹೋಗುತ್ತಿಲ್ಲ.ಇವರ ದರ್ಪ, ಅಹಂಕಾರ, ಕಾರ್ಯವೈಖರಿ ಯಾವುದು ಸರಿಯಿಲ್ಲ.ಇವರ ಬಳಿ ಸಾವಿರಾರು ಕೋಟಿ ಇರಬಹುದೇನೋ ಗೊತ್ತಿಲ್ಲ. ಆದ್ರೆ ಸೌಜನ್ಯಕ್ಕಾದ್ರೂ ನನ್ನ ಜೊತೆ ವಿಜಯೇಂದ್ರ ಚರ್ಚೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಫೋನ್ ಮಾಡಿದ್ರು ವಿಜಯೇಂದ್ರ ರೆಸ್ಪಾಂಡ್ ಮಾಡಲ್ಲ, ಮೆಸೇಜ್ ಗೂ ರಿಪ್ಲೇ ಮಾಡಲ್ಲ.ಆರ್ ಎಸ್ ಎಸ್ ನಾಯಕರು ನಮಗೆ ಭೇಟಿಗೆ ಸಮಯ ಕೊಡ್ತಾರೆ. ಆದ್ರೆ ಇವರ ಬಳಿ ಸಮಯವಿಲ್ಲ. ಬಿಜೆಪಿ ನಿಮ್ಮ ಸ್ವಂತ ಆಸ್ತೀನಾ..? ಬನ್ನಿ ನೋಡೋಣ, ಚಿಕ್ಕಬಳ್ಳಾಪುರ ದಲ್ಲಿ ಒಂದು ಸೀಟ್ ಗೆಲ್ಲಿಸಿ ನೋಡೋಣ. ಚಾಲೆಂಜ್ ಮಾಡ್ತೀನಿ ನಿಮಗೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.