ಲಾನಾ: ಹರಣ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕರು, ರೋಹಟಕ್ ಸಂಸದ ದಿಪಿಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಅವರೊಂದಿಗೆ ವಿನೇಶ್ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದೀಪಿಂದರ್ ಸಿಂಗ್ ಹೂಡಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ವಿನೇಶ್ ಫೋಗಟ್ ದೊಡ್ಡ ಯಶಸ್ಸು ಗಳಿಸುತ್ತಾರೆ’ ಎಂದು ಹೇಳಿದರು. ಜುಲಾನಾದಲ್ಲಿ ಮಾತ್ರವಲ್ಲದೆ ಹರಿಯಾಣದಲ್ಲೂ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದರು. ಹರಿಯಾಣದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಮತ್ತು ಬಿಜೆಪಿಯನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದೆ. 21 ಅಭ್ಯರ್ಥಿಗಳೊಂದಿಗೆ ಬುಧವಾರ ಪ್ರಕಟಿಸಲಾದ ಈ ಪಟ್ಟಿಯಲ್ಲಿ, ಎಎಪಿ ಜುಲಾನಾ ಕ್ಷೇತ್ರದಿಂದ ಕವಿತಾ ದಲಾಲ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಬಿಜೆಪಿಯಿಂದ ಯೋಗೇಶ್ ಬೈರಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎಎಪಿ ಅಂಬಾಲಾದಿಂದ ರಾಜ್ ಕೌರ್ ಗಿಲ್, ಕರ್ನಾಲ್‌ನಿಂದ ಸುನೀಲ್ ಬಿಂದಾಲ್ ಮತ್ತು ಗುರುಗ್ರಾಮ್‌ನಿಂದ ನಿಶಾಂತ್ ಆನಂದ್ ಅವರನ್ನು ಕಣಕ್ಕಿಳಿಸಿದೆ. ಎಎಪಿ ನಾಲ್ಕನೇ ಪಟ್ಟಿಯೊಂದಿಗೆ ಇದುವರೆಗೆ 61 ಅಭ್ಯರ್ಥಿಗಳನ್ನು ಘೋಷಿಸಿದೆ.