Wednesday, October 22, 2025

ಸತ್ಯ | ನ್ಯಾಯ |ಧರ್ಮ

ಆಸ್ಪತ್ರೆಗೆ ದಾಖಲಾದ ವಿನೇಶ್ ಪೋಗಟ್; ಕುಸ್ತಿ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ ಸೆಮೀಸ್ ಸ್ಪರ್ಧಿ

ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಹದಲ್ಲಿ ದಿಢೀರನೆ ಕಾಣಿಸಿಕೊಂಡ ಡಿಹೈಡ್ರೇಷನ್ ಕಾರಣಕ್ಕೆ ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಈ ನಡುವೆ ಸೆಮಿಫೈನಲ್ನಲ್ಲಿ ವಿನೇಶ್ ಫೋಗಟ್ ವಿರುದ್ಧ ಸೋತಿದ್ದ ಕ್ಯೂಬಾದ ಕುಸ್ತಿಪಟು ಯೂಸ್ನೆಲಿಸ್ ಗುಜ್ಮನ್ ಲೋಪೆಜ್ ಬುಧವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ.

ಜಪಾನಿನ ಯುಯಿ ಸುಸಾಕೊ ಮತ್ತು ಉಕ್ರೇನಿಯನ್ ಒಕ್ಸಾನಾ ಲಿವಾಚ್ ನಡುವಿನ ರಿಪೆಚೇಜ್ ಸುತ್ತು ಕಂಚಿನ ಪದಕದ ಪಂದ್ಯವಾಗಲಿದೆ ಎಂದು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ತಾಂತ್ರಿಕ ಪ್ರತಿನಿಧಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page