ಯಾದಗಿರಿ : ಶಹಾಪೂರ ತಾಲೂಕಿನ ಹಾಲಬಾವಿ ಗ್ರಾಮದಲ್ಲಿನ ಸರ್ವೆ ನಂ 58 ರಲ್ಲಿ, 2.00 ಎಕರೆ ಜಮೀನಿನಲ್ಲಿ ಡಾ|| ಬಿ.ಆರ್.ಅಂಬೆಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನ ತಾಲೂಕು ಸಮಿತಿ ಶಹಾಪುರ ವತಿಯಿಂದ ಜಿಲ್ಲಾಧಿಕಾರಿಗಳು ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ತಾಲೂಕು ಅಧ್ಯಕ್ಷರ ಜಯರೆಡ್ಡಿ ಹೊಸ್ಮನಿ ಮಾತನಾಡಿ, “ಸದರಿ ಶಹಾಪೂರ ತಾಲೂಕಿನ ಹಾಲಭಾವಿ ಗ್ರಾಮದಲ್ಲಿನ ದಲಿತರ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮ ಮಾಡಲು ಯಾವುದೆ ಸ್ಥಳ ಇರುವುದಿಲ್ಲ ಅದಕ್ಕಾಗಿ ಹಾಲಭಾವಿ ಗ್ರಾಮದ ದಲಿತರ ಹಾಗೂ ಶಹಾಪೂರ ಡಿ.ಎಸ್.ಎಸ್ ಸಂಘ ವತಿಯಿಂದ ಮನವಿ ಮಾಡಲಾಗಿತ್ತು ಅದರಂತೆ ಉಲ್ಲೇಖ 1 ರ ಮೂಲಕ ಶಹಾಪೂರ ತಹಶಿಲ್ದಾರರು ಕಂದಾಯ ನೀರಿಕ್ಷಕರು ಹಾಗೂ ಭೂಮಾಪಕರ ವರದಿಯೊಂದಿಗೆ ಫೆಬ್ರವರಿ 04 2024 ರಂದು ಮಂಜೂರಾತಿಗಾಗಿ ಸಹಾಯಕ ಆಯಕ್ತರಿಗೆ ಪತ್ರ ಬರೆದಿರುತ್ತಾರೆ ಸುಮಾರು 6-7 ತಿಂಗಳು ಕಳೆದರು ಯಾವುದೇ ಕ್ರಮ ಜರಗಿಸಿರುವುದಿಲ್ಲ. ಕೂಡಲೇ ಡಾ।। ಬಿ.ಆರ್.ಅಂಬೆಡ್ಕರ ಭವನ ನಿರ್ಮಿಸಲು 2 ಎಕರೆ ಜಮೀನು ಮಂಜುರು ಮಾಡಲು ಮತ್ತೊಮ್ಮೆ ಒತ್ತಾಯಿಸಿ” ಹಾಲಭಾವಿ ಗ್ರಾಮಸ್ತರು ಪರವಾಗಿ ಶಹಾಪೂರ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಪ್ರತ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಣಮಂತ ಶಾರದಹಳ್ಳಿ, ಮಲ್ಲಿಕಾರ್ಜುನ ಹಾಲಭಾವಿ, ಜಯರೆಡ್ಡಿ, ಮರೆಪ್ಪ ಕನ್ಯಕೊಳ್ಳುರು, ಮರಪ್ಪ ಬೇವಿನಹಳ್ಳಿ, ಭೀಮಶಂಕರ ಸಲಾದಪೂರ, ದೇವಿಂದ್ರ ಡಿಗ್ಗಿ ಇನ್ನಿತರರು ಉಪಸ್ಥಿತರಿದ್ದರು.